ರಾಯಪುರ:ಟ್ರಾಫಿಕ್​ ಪೇದೆಯೊಬ್ಬರು ರಸ್ತೆಯಲ್ಲಿ ಸಿಕ್ಕ 45 ಲಕ್ಷ ರೂ.ಹಣವನ್ನು ಪೊಲೀಸ್​ ಠಾಣೆಗೆ ಒಪ್ಪಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ. ಅವರ ಪ್ರಾಮಾಣಿಕತೆಗೆ ಮೆಚ್ಚಿ ಇಲಾಖೆಯಿಂದಲೇ ಬಹುಮಾನ ಘೋಷಿಸಲಾಗಿದೆ.
ರಸ್ತೆಯಲ್ಲಿ ಬಿದ್ದಿದ್ದ ಬ್ಯಾಗ್​​ ತೆರೆದುನೋಡಿದ ಪೇದೆಗೆ ಶಾಕ್​ ಆಗಿದೆ. ಬರೀ 200 ಹಾಗೂ 2000 ರೂ. ಮುಖಬೆಲೆಯ ನೋಟುಗಳೇ ಇದ್ದ ಬರೋಬ್ಬರಿ 45 ಲಕ್ಷ ರೂ. ಹಣವನ್ನು ಸ್ಥಳೀಯ ಪೊಲೀಸ್​ ಠಾಣೆಗೆ ಒಪ್ಪಿಸಿದರು. ಶನಿವಾರ ಬೆಳಗ್ಗೆ ಇಷ್ಟೊಂದು ಹಣವಿದ್ದ ಬ್ಯಾಗ್​ ಸಿಕ್ಕಿತ್ತು.
ಇಷ್ಟೊಂದು ಹಣ ಸಿಕ್ಕರೂ ಠಾಣೆಗೆ ಒಪ್ಪಿಸುವ ಮೂಲಕ ಟ್ರಾಫಿಕ್​ ಪೇದೆ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಮುಖ್ಯಮಂತ್ರಿ ಭುಪೇಶ್​ ಬಾಘೆಲ್​ ಟ್ವೀಟ್​ ಮಾಡಿ, ಪೇದೆಯ ಪ್ರಾಮಾಣಿಕತೆಯನ್ನು ಹಾಡಿಹೊಗಳಿದ್ದಾರೆ.
ಟ್ರಾಫಿಕ್​ ಕಾನ್ಸ್​ಸ್ಟೇಬಲ್​ ಆಗಿರುವ ನಿಲಂಬರ್ ಸಿನ್ಹಾ ಅವರು 45 ಲಕ್ಷ ರೂ. ಇದ್ದ ಹಣವನ್ನು ಠಾಣೆಗೆ ಒಪ್ಪಿಸಿದ್ದಾರೆ ಎಂದು ಹೆಚ್ಚುವರಿ ಪೊಲೀಸ್​ ಆಯುಕ್ತ ಸುಖನಂದನ್​ ರಾಥೋಡ್ ತಿಳಿಸಿದ್ದಾರೆ. ಹಣ ಕಳೆದುಕೊಂಡವರಿಗಾಗಿ ಪತ್ತೆ ಹಚ್ಚಿ ಒಪ್ಪಿಸಲಾಗುವುದು ಎಂದು ಅವರು ತಿಳಿಸಿದ್ದು, ಪೇದೆಯ ಪ್ರಾಮಾಣಿಕತೆಗೆ ಬಹುಮಾನವನ್ನೂ ಘೋಷಿಸಿದ್ದಾರೆ.(ಏಜೆನ್ಸೀಸ್)
ಸೋಲಿನಿಂದ ಕಂಗೆಟ್ಟ ಬಾಲಿವುಡ್​: ನೆಲಕಚ್ಚಿತು ಶಂಶೆರಾ, ನಡೆಯಲಿಲ್ಲ ರಣಬೀರ್​ ಜಾದೂ!

ನನ್ನ ಜೀವನದಲ್ಲಿ ಶೇ.10ರಷ್ಟು ನೆಮ್ಮದಿ ಉಳಿಯಲಿಲ್ಲ: ಅಚ್ಚರಿ ಹೇಳಿಕೆ ನೀಡಿದ ಸೂಪರ್​ ಸ್ಟಾರ್​​ ರಜನಿಕಾಂತ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − 1 =
Remember me
