ಛತ್ತೀಸ್​ಗಢ:ವಿಚ್ಛೇದನದ ಬಳಿಕ ಮಹಿಳೆಯರಿಗೆ ತಮ್ಮ ಮದುವೆಯಯ ಸಂದರ್ಭದಲ್ಲಿ ತೆಗಿದಿರುವ ಪ್ರೀ-ವೆಡ್ಡಿಂಗ್ ಫೋಟೋ(Pre-wedding shoots)ಗಳು ಸಮಸ್ಯೆ ತಂದೊಡ್ಡಬಹುದು. ಭವಿಷ್ಯದ ಹಿತದೃಷ್ಟಿಯಿಂದ ತಮ್ಮ ಮಕ್ಕಳು ಮದುವೆಗೂ ಮೊದಲು ಫೋಟೋಶೂಟ್ ಮಾಡದಂತೆ ನೋಡಿಕೊಳ್ಳಿ ಎಂದು ಪಾಲಕರನ್ನು ಒತ್ತಾಯಿಸುತ್ತೇನೆ ಎಂದು ಛತ್ತೀಸ್‌ಗಢ ಮಹಿಳಾ ಆಯೋಗ ಅಧ್ಯಕ್ಷೆ ಕಿರಣ್ಮಯಿ ನಾಯಕ್ ಹೇಳಿದ್ದಾರೆ.
ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದಲ್ಲಿ ಮಹಿಳಾ ಆಯೋಗದ 172ನೇ ಸಾರ್ವಜನಿಕ ಸಭೆ ನಡೆದಿದೆ. ಕಿರಣ್ಮಯಿ ನಾಯಕ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 25 ಪ್ರಕರಣಗಳ ಬಗ್ಗೆ ವಿಚಾರಣೆ ನಡೆಸಿ ಚರ್ಚಿಸಲಾಗಿದೆ. ಈ ಸಂದರ್ಭ ವಿವಾಹದ ನಂತರ ಉಂಟಾಗುವ ಸಮಸ್ಯೆಗಳ ಬಗ್ಗೆ ಹೆಚ್ಚು ಚರ್ಚಿತವಾಗಿದೆ.
ಇದನ್ನೂ ಓದಿ:ಗೌಡ್ರ ಹುಡುಗನನ್ನೇ ಹುಡುಕಿ ಕೊಡಿ… ಮದ್ವೆಯಾಗ್ತೀನಿ; ಹಸೆಮಣೆ ಏರಲು ತಯಾರಾದ್ರಾ ರಮ್ಯ?
ಮಹಿಳಾ ಆಯೋಗದ ಸಭೆಯಲ್ಲಿ ಅಂತಿಮ ಹಂತದಲ್ಲಿ ಮದುವೆ ಮುರಿದು ಬಿದ್ದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಬಗ್ಗೆ ಅರ್ಜಿದಾರರು ಮಹಿಳಾ ಆಯೋಗಕ್ಕೆ ದೂರು ಸಲ್ಲಿದ್ದರು. ವಿಚಾರಣೆಯ ಸಂದರ್ಭದಲ್ಲಿ ವರನ ಕುಟುಂಬಸ್ಥರು ಮದುವೆ ಸಿದ್ಧತೆಗಾಗಿ ಮಾಡಿದ್ದ ಖರ್ಚನ್ನು ಹಿಂತಿರುಗಿಸಲು ಒಪ್ಪಿದ್ದಾರೆ. ಹೀಗಾಗಿ ಪ್ರಕರಣವನ್ನು ಹಿಂಪಡೆಯಲು ನಿರ್ಧರಿಸಿರುವುದಾಗಿ ವಧುವಿನ ಕುಟುಂಬಸ್ಥರು ತಿಳಿಸಿದ್ದಾರೆ. ಅಲ್ಲದೆ ಮದುವೆಗೂ ಮೊದಲು ತೆಗೆಸಿರುವ ಪ್ರೀ-ವೆಡ್ಡಿಂಗ್ ಫೋಟೋಗಳನ್ನು ಡಿಲೀಟ್ ಮಾಡುವಂತೆ ಕೇಳಿಕೊಂಡಿದ್ದಾರೆ ಎಂದು ಅರ್ಜಿದಾರರು ಆಯೋಗಕ್ಕೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ರಸ್ತೆ ಬದಿ ನಿಲ್ಲಿಸಿದ್ದ ವಾಹನ ಒಮ್ಮಿಂದೊಮ್ಮೆಲೇ ಸ್ಫೋಟ: ಕಾರುಗಳು ಬೆಂಕಿಗಾಹುತಿ
ಮುಂದಿನ ದಿನಗಳಲ್ಲಿ ವಧುವಿನ ಅನುಮತಿ ಇಲ್ಲದೆ ಮದುವೆಯ ಫೋಟೋ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡರೆ ಸೈಬರ್ ಠಾಣೆಗೆ ದೂರು ನೀಡಬಹುದು. ಪ್ರಸ್ತುತ ದಿನಗಳಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿಯಿಂದ ಜನರು ಹೆಚ್ಚು ಪ್ರಭಾವಿತರಾಗಿದ್ದಾರೆ. ಇದು ನಮ್ಮ ಭಾರತೀಯ ಸಂಸ್ಕೃತಿಯ ಮೇಲೆ ಪರಿಣಾಮ ಬೀರುತ್ತಿದೆ ಎಂದು ಕಿರಣ್ಮಯಿ ನಾಯಕ್ ಹೇಳಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 8 =
Remember me
