ಮುಂಬೈ:2001ರಲ್ಲಿ ಮುಂಬೈನ ಹೋಟೆಲ್​ ಉದ್ಯಮಿ ಜಯಾ ಶೆಟ್ಟಿ ಅವರನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಗ್ಯಾಂಗ್‌ಸ್ಟರ್ ಛೋಟಾ ರಾಜನ್‌ಗೆ ಮುಂಬೈ ವಿಶೇಷ ನ್ಯಾಯಾಲಯ ಗುರುವಾರ (ಮೇ.30) ಜೀವಾವಧಿ ಶಿಕ್ಷೆ ವಿಧಿಸಿದೆ.
ಇದನ್ನೂ ಓದಿ:ಭಾರತೀಯ ಸೇನೆ ಗಣರಾಜ್ಯೋತ್ಸವ ಪರೇಡ್‌ಗೆ ಮಾತ್ರ ಸೀಮಿತವಲ್ಲ: ಪ್ರಧಾನಿ ಮೋದಿ
ಮಹಾರಾಷ್ಟ್ರದ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ ಅಡಿಯಲ್ಲಿ ದಾಖಲಾಗಿದ್ದ ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶ ಎ.ಎಂ.ಪಾಟೀಲ್ ಅವರು, ಜಯಾ ಶೆಟ್ಟಿ ಕೊಲೆ ಪ್ರಕರಣದಲ್ಲಿ ಚೋಟಾ ರಾಜನ್‌ ಅಪರಾಧಿ ಎಂದು ತೀರ್ಪು ನೀಡಿದರು. ತೀರ್ಪಿನ ಪ್ರಕಾರ ನಾಲ್ವರು ಆರೋಪಿಗಳಲ್ಲಿ ಮೂವರಿಗೆ ಶಿಕ್ಷೆ ವಿಧಿಸಲಾಗಿದ್ದು, ಒಬ್ಬಾತ ಸಾಕ್ಷಾಧಾರಗಳ ಕೊರತೆಯಿಂದ ಖುಲಾಸೆಗೊಳಿಸಲಾಗಿದೆ.
ಜಯಾ ಶೆಟ್ಟಿ ಅವರು ಕೇಂದ್ರ ಮುಂಬೈನ ಗಾಮ್​ ದೇವಿಯಲ್ಲಿ ಗೋಲ್ಡನ್ ಕ್ರೌನ್ ಹೋಟೆಲ್ ಹೊಂದಿದ್ದರು. ಅವರನ್ನು ಮೇ 4, 2001 ರಂದು ಹೋಟೆಲ್‌ನ ಮೊದಲ ಮಹಡಿಯಲ್ಲಿ ರಾಜನ್ ಗ್ಯಾಂಗ್‌ನ ಇಬ್ಬರು ಸದಸ್ಯರು ಜಯಾ ಶೆಟ್ಟಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಹೋಟೆಲ್​ ಮ್ಯಾನೇಜರ್ ನೀಡಿದ್ದ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಶೆಟ್ಟಿ ಅವರಿಂದ ಹಣ ವಸೂಲಿ ಮಾಡಲು ರಾಜನ್ ಗ್ಯಾಂಗ್ ಹೇಮಂತ್ ಪೂಜಾರಿ ಕರೆ ಮಾಡುತ್ತಿದ್ದ ಆದರೆ ಹಣ ನೀಡದ್ದಕ್ಕೆ ಶೆಟ್ಟಿ ಅವರನ್ನು ಕೊಲೆ ಮಾಡಲಾಗಿದೆ ಎಂಬುದು ತನಿಖೆಯಿಂದ ತಿಳಿದು ಬಂದಿತ್ತು.ನಂತರ 2001ರ ಮಾರ್ಚ್ ಅಂತ್ಯದಲ್ಲಿ ಭದ್ರತೆ ಹಿಂತೆಗೆದುಕೊಳ್ಳುವಂತೆ ಜಯಾ ಶೆಟ್ಟಿ ಅವರು ಪೊಲೀಸರಿಗೆ ಮನವಿ ಮಾಡಿದ್ದರು ಮತ್ತು ಅವರ ಮನವಿ ಮೇರೆಗೆ ಮುಂಬೈ ಪೊಲೀಸರು ಭದ್ರತೆ ಹಿಂತೆಗೆದುಕೊಂಡಿದ್ದರು. ಇದಾದ ಎರಡೇ ತಿಂಗಳಲ್ಲಿ ಅಂದರೆ ಮೇ 4, 2001ರಲ್ಲಿ ಜಯಾ ಶೆಟ್ಟಿ ಮೇಲೆ ಇಬ್ಬರು ಅಪರಿಚಿತರು ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದರು.
ಪತ್ರಕರ್ತ ಜೆ. ಡೇ ಅವರನ್ನು ಜೂನ್ 11, 2011 ರಂದು ಹಗಲು ಹೊತ್ತಿನಲ್ಲಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ 2018 ರಲ್ಲಿ ಜೀವಾವಧಿ ಶಿಕ್ಷೆ ವಿಧಿಸಿದ ನಂತರ ಮುಂಬೈನಲ್ಲಿ ಛೋಟಾ ರಾಜನ್‌ಗೆ ಇದು ಎರಡನೇ ಜೀವಾವಧಿ ಶಿಕ್ಷೆಯಾಗಿದೆ.
ಮುಂಬೈನ ಭಯಾನಕ ಮಾಫಿಯಾ ಸಿಂಡಿಕೇಟ್ ಮುಖ್ಯಸ್ಥರಲ್ಲಿ ಒಬ್ಬರಾದ 64 ವರ್ಷದ ಛೋಟಾ ರಾಜನ್, 1989 ರಲ್ಲಿ ದುಬೈಗೆ ಬಂದು ನೆಲೆಸಿದ್ದರು. ಸುಮಾರು 27 ವರ್ಷಗಳ ಕಾಲ ಓಡಿಹೋಗಿ ಪರಾರಿಯಾಗಿ ಕಳೆದ ನಂತರ ನವೆಂಬರ್ 2015 ರಲ್ಲಿ ಇಂಡೋನೇಷ್ಯಾದಿಂದ ಭಾರತಕ್ಕೆ ಗಡೀಪಾರು ಮಾಡಲಾಯಿತು.
ಸೆಪ್ಟೆಂಬರ್ 2000 ರಲ್ಲಿ, ಛೋಟಾ ರಾಜನ್ ಬ್ಯಾಂಕಾಕ್‌ನ ಹೋಟೆಲ್‌ನಲ್ಲಿ ತನ್ನ ಮೇಲೆ ನಡೆದ ಕೊಲೆಗಾರ ದಾಳಿಯಿಂದ ಸ್ವಲ್ಪದರಲ್ಲೇ ಪಾರಾಗಿದ್ದಾನೆ. ಅವನ ಭೂಗತ ಪ್ರತಿಸ್ಪರ್ಧಿ ಮತ್ತು ಬೇಕಾಗಿರುವ ಭಯೋತ್ಪಾದಕ-ದರೋಡೆಕೋರ ದಾವೂದ್ ಇಬ್ರಾಹಿಂ ಕಸ್ಕರ್‌ನಿಂದ ಬೆದರಿಕೆ ಇದೆ ಎನ್ನಲಾಗಿದೆ.
ಧ್ಯಾನಕ್ಕೆ ಭಾರತ ಭೂಶಿರ ಕನ್ಯಾಕುಮಾರಿಗೆ ಬಂದಿಳಿದ ಪ್ರಧಾನಿ ಮೋದಿ: ದೇವಸ್ಥಾನದಲ್ಲಿ ವಿಶೇಷ ಪೂಜೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − eleven =
Remember me
