ಇಸ್ರೇಲ್:ಇಸ್ರೇಲ್-ಹಮಾಸ್ ಸಂಘರ್ಷದಲ್ಲಿ ಅಸಂಖ್ಯಾತ ಜನರು ದುರಂತವಾಗಿ ಸಾವನ್ನಪ್ಪಿದ್ದಾರೆ. ಇಲ್ಲಿನ ಘಟನೆಗಳನ್ನು ಕೇಳುತ್ತಾ ಹೋದರೆ ಹೃದಯ ತುಂಬಿ ಬರುತ್ತದೆ. ಇದೀಗ ಇದೇ ರೀತಿಯ ತಾಯಿ ಮತ್ತು ಮಗಳ ಹೃದಯ ವಿದ್ರಾವಕ ಕಥೆಯೊಂದು ಬೆಳಕಿಗೆ ಬಂದಿದೆ. ಅಮೆರಿಕದ ಇವಾನ್‌ಸ್ಟನ್ ನಿವಾಸಿ 18 ವರ್ಷದ ನಟಾಲಿ ರೈನಾನ್ ತನ್ನ 59 ವರ್ಷದ ತಾಯಿ ಜುಡಿತ್ ರೈನಾನ್ ಅವರೊಂದಿಗೆ ಇಸ್ರೇಲ್‌ಗೆ ಭೇಟಿ ನೀಡಲು ಬಂದಿದ್ದರು. ಅವರ ಸಂಬಂಧಿಕರಲ್ಲಿ ಕೆಲವರು ಇಸ್ರೇಲಿನಲ್ಲಿ ವಾಸಿಸುತ್ತಿದ್ದಾರೆ. ಇಬ್ಬರೂ ರಜೆ ಕಳೆಯಲು ಇಲ್ಲಿಗೆ ಬಂದಿದ್ದರು. ಇಲ್ಲಿ ಏನಾಗಲಿದೆ ಎಂದು ಅವರಿಗೆ ಕೊಂಚವೂ ತಿಳಿದಿರಲಿಲ್ಲ. ದಿ ಸನ್ ವರದಿಯ ಪ್ರಕಾರ, ನಟಾಲಿ ಮತ್ತು ಜುಡಿತ್ ಅವರನ್ನು ಹಮಾಸ್ ಭಯೋತ್ಪಾದಕರು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ. ಶನಿವಾರದಿಂದ ಇಬ್ಬರೂ ನಾಪತ್ತೆಯಾಗಿದ್ದಾರೆ. ಇಸ್ರೇಲ್ ದಾಳಿಯಾದಾಗ ತಾಯಿ ಮತ್ತು ಮಗಳು ನಹಲ್ ಓಜ್‌ನಲ್ಲಿದ್ದರು. ಈ ಪ್ರದೇಶವು ಗಾಜಾ ಗಡಿಯಿಂದ 1.5 ಮೈಲಿ ದೂರದಲ್ಲಿದೆ. ಇಲ್ಲಿಯೇ ಹಮಾಸ್‌ ಉಗ್ರರು ದಾಳಿ ನಡೆಸಿದ್ದರು.
ತಾಯಿ ಮತ್ತು ಮಗಳಿಗಾಗಿ, ಅಮೆರಿಕದಿಂದ ಇಸ್ರೇಲ್‌ಗೆ ಅವರ ಸಂಬಂಧಿಕರು ಹೇಗಾದರೂ ಮಾಡಿ ತಾಯಿ-ಮಗಳನ್ನು ಉಳಿಸಿಕೊಡಿ ಎಂದು ಸರ್ಕಾರಕ್ಕೆ ಪದೇ ಪದೇ ಮನವಿ ಮಾಡುತ್ತಿದ್ದಾರೆ. ಅಂದಹಾಗೆ ಜುಡಿತ್ ರೈನಾನ್ ಇವಾನ್‌ಸ್ಟನ್​​​​ನ ಚಾಬಾದ್‌ನ ಸದಸ್ಯರಾಗಿದ್ದರು. ಇವಾನ್‌ಸ್ಟನ್​​​​ನ ಚಾಬಾದ್‌ ಭಾನುವಾರ ಫೇಸ್‌ಬುಕ್‌ನಲ್ಲಿ ತಾಯಿ ಮತ್ತು ಮಗಳ ಸುರಕ್ಷತೆಗಾಗಿ ಪ್ರಾರ್ಥಿಸುವ ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ. ಅಲ್ಲದೆ ಅಮೆರಿಕ ಸರ್ಕಾರಕ್ಕೆ ನೆರವು ನೀಡುವಂತೆ ಮನವಿ ಮಾಡಿದ್ದಾರೆ.


ಜುಡಿತ್ ತುಂಬಾ ಒಳ್ಳೆಯ ಮಹಿಳೆ ಎಂದು ಚಾಬಾದ್ ಕಮ್ಯುನಿಟಿ ಔಟ್ ರೀಚ್​​​ನ ಸಹ ನಿರ್ದೇಶಕ ರಬ್ಬಿ ಮೀರ್ ಹೆಚ್ಟ್ ಹೇಳಿದ್ದಾರೆ. ಅವರಿಗೂ ಅವರ ಮಗಳಿಗೂ ಏನೂ ತೊಂದರೆ ಆಗಬಾರದು, ಇಬ್ಬರೂ ಇಸ್ರೇಲ್‌ಗೆ ಭೇಟಿ ನೀಡಲು ಹೋಗಿದ್ದರು, ಅವರಿಗೆ ಈ ರೀತಿ ಆಗುತ್ತದೆ ಎಂದು ನಮಗೆ ತಿಳಿದಿರಲಿಲ್ಲ. ನಾವು ಅವರಿಗಾಗಿ ಪ್ರಾರ್ಥಿಸುತ್ತೇವೆ ಎಂದು ತಿಳಿಸಿದ್ದಾರೆ.
ಕಳೆದ 72 ಗಂಟೆಗಳಿಂದ ಇಸ್ರೇಲ್ ಮತ್ತು ಹಮಾಸ್ ನಡುವೆ ರಕ್ತಸಿಕ್ತ ಯುದ್ಧ ನಡೆಯುತ್ತಿದೆ. ಅವರಿಬ್ಬರೂ ತಲೆಬಾಗಲು ಸಿದ್ಧರಿಲ್ಲ, ಇದುವರೆಗೆ 900 ಇಸ್ರೇಲಿ ಜನರು ಯುದ್ಧದಲ್ಲಿ ಸಾವನ್ನಪ್ಪಿದ್ದಾರೆ. 2,600ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಜಾ ಪಟ್ಟಿಯಲ್ಲಿ 704 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಸುಮಾರು 4000 ಜನರು ಗಾಯಗೊಂಡಿದ್ದಾರೆ. ನಿರಂತರ ಸ್ಫೋಟಗಳು, ವಾಯುದಾಳಿಗಳು ಮತ್ತು ಬಾಂಬ್ ಸ್ಫೋಟಗಳ ನಡುವೆ, ಜನರು ಕಿರುಚುತ್ತಿರುವ ಚಿತ್ರಗಳು ಹೊರಹೊಮ್ಮಲು ಪ್ರಾರಂಭಿಸಿವೆ. ಇಸ್ರೇಲ್-ಹಮಾಸ್​​​​ ಯುದ್ಧದ ಪರಿಣಾಮಗಳು ಲೆಬನಾನ್‌ನಲ್ಲಿಯೂ ಗೋಚರಿಸುತ್ತವೆ. ಒಂದೆಡೆ, ವೆನ್ಸ್ ಬ್ಯಾಂಕ್‌ನಲ್ಲಿ 16 ಜನರು ಸಾವನ್ನಪ್ಪಿದ್ದಾರೆ ಮತ್ತು 2,616 ಜನರು ಗಾಯಗೊಂಡಿದ್ದರೆ, ಮತ್ತೊಂದೆಡೆ, ಲೆಬನಾನ್‌ನಲ್ಲಿ 3 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಒಟ್ಟಾರೆಯಾಗಿ, ಇದುವರೆಗೆ ಎರಡೂ ಕಡೆಯಿಂದ ಸುಮಾರು 1600 ಜನರು ಸಾವನ್ನಪ್ಪಿದ್ದಾರೆ ಮತ್ತು 6 ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಪರಸ್ಪರ ಬೆದರಿಕೆ ಹಾಕುತ್ತಿರುವ ಇಸ್ರೇಲ್ ಮತ್ತು ಹಮಾಸ್ಇಸ್ರೇಲ್ ಅಥವಾ ಹಮಾಸ್‌ ಯಾರೂ ತಲೆಬಾಗಲು ಸಿದ್ಧರಿಲ್ಲ. ಬಾಂಬ್‌ ದಾಳಿಯನ್ನು ನಿಲ್ಲಿಸದಿದ್ದರೆ, ಇಸ್ರೇಲ್‌ನಿಂದ ಅಪಹರಿಸಿದ ಜನರನ್ನು ಒಬ್ಬೊಬ್ಬರಾಗಿ ಕೊಲ್ಲಲು ಪ್ರಾರಂಭಿಸುತ್ತೇವೆ ಎಂದು ಹಮಾಸ್ ಇಸ್ರೇಲ್‌ಗೆ ಬೆದರಿಕೆ ಹಾಕಿದೆ. ಆದರೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕೂಡ ಹಿಂದೆ ಸರಿಯಲು ನಿರಾಕರಿಸಿದ್ದಾರೆ, ಹಮಾಸ್‌ನ ಕ್ರಮಗಳ ನಂತರ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ನೆತನ್ಯಾಹು ಹೇಳಿದ್ದಾರೆ. ಫೆಲೆಸ್ತೀನ್ ಭಯೋತ್ಪಾದಕ ಸಂಘಟನೆ ಹಮಾಸ್ ಗೆ ನೆತನ್ಯಾಹು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ಭವಿಷ್ಯದಲ್ಲಿ ನಾವು ಇಡಲಿರುವ ಹೆಜ್ಜೆಗಳು ನಮ್ಮ ಮುಂದಿನ ಪೀಳಿಗೆಯ ಮೇಲೆ ನೇರ ಪರಿಣಾಮ ಬೀರುತ್ತವೆ ಎಂದು ಹೇಳಲಾಗಿದೆ.
ಒಳನುಸುಳಿದ 1000 ಹಮಾಸ್ ಹೋರಾಟಗಾರರುಮಾಧ್ಯಮ ವರದಿಗಳ ಪ್ರಕಾರ, ಭಯೋತ್ಪಾದಕ ಸಂಘಟನೆ ಹಮಾಸ್ ಈಗಾಗಲೇ ಇಸ್ರೇಲ್ ಮೇಲೆ ದಾಳಿ ನಡೆಸಲು ಸಂಪೂರ್ಣ ಯೋಜನೆಯನ್ನು ಸಿದ್ಧಪಡಿಸಿದೆ. ಯೋಜನೆಯನ್ನು ಹಮಾಸ್​​​ನ 5 ಘಟಕಗಳು ಕಾರ್ಯಗತಗೊಳಿಸಿದವು. ಮೊದಲನೆಯದಾಗಿ ಬೆಳಗ್ಗೆ 6.30ಕ್ಕೆ ಕ್ಷಿಪಣಿ ಘಟಕದ ಮೂಲಕ 3 ಸಾವಿರ ರಾಕೆಟ್ ಉಡಾವಣೆ ಮಾಡಲಾಯಿತು. ಇಂತಹ ಭಾರೀ ವೈಮಾನಿಕ ದಾಳಿಯಿಂದ ಇಸ್ರೇಲ್ ಜನರು ಬೆಚ್ಚಿಬಿದ್ದರು. ನಂತರ ಭಯೋತ್ಪಾದಕರು ವಾಯುಗಾಮಿ ಘಟಕದ ಮೂಲಕ ಪ್ಯಾರಾಗ್ಲೈಡರ್ ಮೂಲಕ ಇಸ್ರೇಲ್ ಪ್ರವೇಶಿಸಿದರು. ನಂತರ ಕಮಾಂಡೋ ಘಟಕವು ನೆಲದ ಮೇಲಿನ ಬೇಲಿಯನ್ನು ಕತ್ತರಿಸಿ ಗಾಜಾ ಪಟ್ಟಿಯಿಂದ ಇಸ್ರೇಲ್ ಪ್ರವೇಶಿಸಿದರು. ಈ ಸಮಯದಲ್ಲಿ, ಹಮಾಸ್‌ನ ಡ್ರೋನ್​​​ ಘಟಕವು ದಾಳಿ ಮತ್ತು ಮಾಹಿತಿ ಸಂಗ್ರಹಿಸುವಲ್ಲಿ ನಿರತವಾಗಿತ್ತು. ಸುಮಾರು 1000 ಹಮಾಸ್ ಹೋರಾಟಗಾರರು ಒಳನುಸುಳಿದ್ದಾರೆ ಎಂದು ಇಸ್ರೇಲ್ ಅಂದಾಜಿಸಿದೆ.
ಇಸ್ರೇಲ್-ಹಮಾಸ್ ಯುದ್ಧ: ಇಲ್ಲಿಯವರೆಗೆ ಏನೇನಾಯಿತು 10 ಪ್ರಮುಖ ಅಂಶಗಳು ಇಲ್ಲಿದೆ ನೋಡಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 14 =
Remember me
