ದೆಹಲಿ:ದೇಶವು ಕರೊನಾದಿಂದ ಮುಕ್ತವಾಗುತ್ತಿರುವ ಸಮಯದಲ್ಲೇ ಕೆಲವು ರಾಜ್ಯಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿರುವುದು ಆತಂಕಕ್ಕೀಡುಮಾಡಿದೆ. ಹಕ್ಕಿ ಜ್ವರವು ಕೋಳಿ ಉದ್ಯಮದ ಮೇಲೆ ಭಾರಿ ಪರಿಣಾಮ ಬೀರಿದ್ದು, ಬೆಲೆ ಕುಸಿತವಾಗಿ ಭಾರಿ ನಷ್ಟ ಅನುಭವಿಸುವಂತಾಗಿದೆ.
ಚಿಕನ್​ ಅನ್ನು ಚೆನ್ನಾಗಿ ಬೇಯಿಸಿ ತಿನ್ನುವುದರಿಂದ ಯಾವುದೇ ಸೋಂಕು ಅಥವಾ ರೋಗ ಹರಡುವುದಿಲ್ಲ ಎಂದು ವೈದ್ಯರು ಹೇಳಿದರೂ ಹಕ್ಕಿ ಜ್ವರದ ಭೀತಿಯಿಂದ ಬಹುತೇಕರು ಚಿಕನ್​ ತಿನ್ನುವುದಕ್ಕೆ ಹಿಂಜರಿಯುತ್ತಿದ್ದಾರೆ. ಹೀಗಾಗಿ ಕೋಳಿ ಮಾಂಸದ ಬೆಲೆಯಲ್ಲಿ ತೀವ್ರ ಕುಸಿತ ಕಂಡಿದೆ. ಮಾರಾಟಕ್ಕೆಂದು ಪ್ರತಿನಿತ್ಯ ಹರಿಯಾಣದ ಜಿಂದ್​ ಜಿಲ್ಲೆಯಿಂದ 4 ಲಕ್ಷ ಕೋಳಿಗಳನ್ನು ಕಳುಹಿಸಲಾಗುತ್ತದೆ. ಆದರೆ, ಕೋಳಿ ಮಾಂಸವನ್ನು ತೆಗೆದುಕೊಳ್ಳುವವರ ಇಲ್ಲದಿರುವುದರಿಂದ ಬೆಲೆ ಕೆ.ಜಿ ಗೆ 15 ರೂಪಾಯಿಗೆ ಕುಸಿದಿದೆ. ಇದರಿಂದಾಗಿ ದಿನವೊಂದಕ್ಕೆ ಸುಮಾರು 1. 20 ಕೋಟಿ ರೂ. ನಷ್ಟವಾಗುತ್ತಿದೆ.
ಇದನ್ನೂ ಓದಿ:ನಿಮ್ಮನ್ನು ಭೇಟಿಯಾಗಬೇಕು ಎನ್ನುತ್ತಲೇ ಗೇಟ್​ ಹಾರಿ ನಟಿ ಮನೆಗೆ ನುಗ್ಗಿದ ಯುವಕ: ಮುಂದೇನಾಯ್ತು?!
ಹರಿಯಾಣದ ಜಿಂದ್​ ಜಿಲ್ಲೆ ಕೋಳಿ ಉದ್ಯಮದ ಕೇಂದ್ರವಾಗಿದೆ. ಇದೊಂದೆ ಜಿಲ್ಲೆಯಲ್ಲಿ 500ಕ್ಕೂ ಹೆಚ್ಚು ಕೋಳಿ ಫಾರಂಗಳಿವೆ​ ಮತ್ತು 80ಕ್ಕೂ ಹೆಚ್ಚು ಮೊಟ್ಟೆ ಕೇಂದ್ರಗಳಿವೆ. ಪ್ರತಿನಿತ್ಯ ದೆಹಲಿಗೆ 4 ಲಕ್ಷ ಕೋಳಿಗಳನ್ನು ರೈಲುಗಳಲ್ಲಿ ಸಾಗಿಸಲಾಗುತ್ತದೆ. ಕೋಳಿಗಳು ಸುಮಾರು 8 ಲಕ್ಷ ಕೆ.ಜಿ ತೂಗುತ್ತದೆ. ಕೆ.ಜಿಗೆ 90 ರೂ.ನಂತೆ ದೆಹಲಿಯಲ್ಲಿ ಮಾರಾಟವಾಗುತ್ತದೆ. ಸುಮಾರು 7 ಕೋಟಿ ರೂ.ವರೆಗೂ ವ್ಯವಹಾರವಾಗುತ್ತಿತ್ತು. ಆದರೆ, ಹಕ್ಕಿ ಜ್ವರದಿಂದ ದೊಡ್ಡ ಹೊಡೆತ ಬಿದ್ದಂತಾಗಿದೆ.
ಬೇಯಿಸಿದ ಚಿಕನ್​ ಸಂಪೂರ್ಣ ಸುರಕ್ಷಿತಭಾರತೀಯ ಜನರು ಬೇಯಿಸಿದ ಚಿಕನ್​ ಮಾತ್ರ ಸೇವಿಸುತ್ತಾರೆ. ಹೀಗಾಗಿ ಸುಮಾರು 70 ಡಿಗ್ರಿ ಸೆಲ್ಸಿಯಸ್​ನಲ್ಲಿ ಕೋಳಿ ಮಾಂಸವನ್ನು ಬೇಯಿಸುವುದರಿಂದ ಎಲ್ಲ ರೀತಿಯ ವೈರಸ್​ಗಳು ಸಾಯುತ್ತವೆ. ಹೀಗಾಗಿ ಯಾವುದೇ ಅಪಾಯ ಸಂಭವಿಸುವುದಿಲ್ಲ. ಹೀಗಾಗಿ ಜನರಿಗೆ ಮನವರಿಕೆ ಮಾಡುವ ಕೆಲಸಗಳು ಸಹ ನಡೆಯುತ್ತಿದೆ. ಆದರೂ ಜನರಿಗೆ ಭಯ ಕಡಿಮೆಯಾಗುತ್ತಿಲ್ಲ. ಯಾರೂ ಭಯಪಡಬೇಡಿ ಎಂದು ಜಿಂದ್​ನ ಪಶುಸಂಗೋಪನಾ ಇಲಾಖೆಯ ಹಿರಿಯ ವೈದ್ಯರಾದ ಡಾ. ರಾಜು ಶರ್ಮಾ ತಿಳಿಸಿದ್ದಾರೆ.
ಇದನ್ನೂ ಓದಿ:ಕಾಮುಕ ಸೋದರಸಂಬಂಧಿಯನ್ನು ಕೊಂದ ಯುವತಿಯನ್ನು ಬಂಧಿಸದೇ ಬಿಟ್ಟು ಕಳುಹಿಸಿದ ಪೊಲೀಸ್​ ಅಧಿಕಾರಿ!
ಅಂದಹಾಗೆ ರಾಜಸ್ಥಾನ, ಕೇರಳ, ಮಧ್ಯಪ್ರದೇಶ ಹಾಗೂ ಹಿಮಾಚಲ ಪ್ರದೇಶಗಳಲ್ಲಿ ಹಕ್ಕಿ ಜ್ವರ ಪ್ರಕರಣಗಳು ದಾಖಲಾಗಲಾರಂಭಿಸಿದ್ದು, ಜನರು ಚಿಕನ್​ ತಿನ್ನಲು ಹಿಂದೇಟು ಹಾಕುವಂತಾಗಿದೆ. ಕರ್ನಾಟಕದಲ್ಲೂ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.(ಏಜೆನ್ಸೀಸ್​)
ಹೆಚ್ಚಾಯ್ತು ಹಕ್ಕಿ ಜ್ವರದ ಭೀತಿ! ಚಿಕನ್​ ತಿಂದ್ರೆ ನಮಗೂ ಕಾಯಿಲೆ ಬರುತ್ತಾ?

ಬಳಸಿದ ಕಾಂಡೋಮ್​ ಒಳಗೆ ವಿಲವಿಲ ಒದ್ದಾಡಿದ ವಿಷಕಾರಕ ಹಾವು!

ಸರ್ಕಾರಿ ನೌಕರನೆಂದು ಮದ್ವೆಯಾದವಳಿಗೆ ನಿತ್ಯ ನರಕ ದರ್ಶನ: ಗಂಡನ ಮೊಬೈಲ್​ ನೋಡಿ ಪತ್ನಿಗೆ ಶಾಕ್!​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 7 =
Remember me
