ನವದೆಹಲಿ:ದೇಶಾದ್ಯಂತ ಚಿಕನ್​ ಬೆಲೆ ದಿನದಿಂದ ದಿನಕ್ಕೆ ಗಗನಮುಖಿ ಆಗುತ್ತಿದೆ. ಒಂದು ಕೆಜಿ ಚಿಕನ್​ಗೆ 250 ರಿಂದ 270 ರೂಪಾಯಿ ಇದೆ. ಇಂಧನ ದರ ಏರಿಕೆಯಿಂದಾಗಿ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿದ್ದು, ಈಗಾಗಲೇ ಜನರು ಸಂಕಷ್ಟದಲ್ಲಿದ್ದಾರೆ. ಇದರ ನಡುವೆ ಚಿಕನ್​ ಬೆಲೆಯಲ್ಲಿ ಗಣನೀಯ ಏರಿಕೆ ಕಂಡಿರುವುದು ಮಾಂಸಪ್ರಿಯರಿಗೆ ಆಘಾತವಾಗಿದೆ.
ಲಾಕ್​ಡೌನ್​ಗೂ ಮುಂಚೆ ಒಂದು ಕೆಜಿ ಚಿಕನ್​ ಬೆಲೆ 120 ರೂಪಾಯಿ ಇತ್ತು. ಮೇ ತಿಂಗಳಲ್ಲಿ ಚಿಕನ್​ ಬೆಲೆ 160 ರಿಂದ 180ಕ್ಕೆ ಏರಿಕೆಯಾಗಿದೆ. ಅಂದಿನಿಂದ ಏರಿಕೆ ಕಾಣುತ್ತಲೇ ಇದೆ. ಜೂನ್​ನಲ್ಲಿ ಚಿಕನ್​ ಬೆಲೆ ಗರಿಷ್ಠ 200 ರೂ. ಮುಟ್ಟಿದೆ. ಆದರೆ, ಜುಲೈನಲ್ಲಿ ಅದರ ಬೆಲೆಯಲ್ಲಿ ತುಂಬಾ ಏರಿಕೆಯಾಗಿದ್ದು, ಸದ್ಯ ಒಂದು ಕೆಜಿ ಚಿಕನ್​ ಬೆಲೆ 250 ರಿಂದ 270 ರೂ.ವರೆಗೆ ಮಾರಾಟವಾಗುತ್ತಿದೆ.
ಬೇಸಿಗೆಯಲ್ಲಿ ಸಾಮಾನ್ಯವಾಗಿ ಕೋಳಿ ಉತ್ಪಾದನೆ ಕಡಿಮೆ ಇರುತ್ತದೆ. ಇದಲ್ಲದೆ, ಬಹುರಾಷ್ಟ್ರೀಯ ಸಂಸ್ಥೆಗಳು ಕೃತಕ ಕೊರತೆಯನ್ನು ಸೃಷ್ಟಿಸುತ್ತಿವೆ. ಇದರೊಂದಿಗೆ ಲಾಕ್​ಡೌನ್​ ಸಮಯದಲ್ಲಿ ಕೋಳಿಗಳ ಉತ್ಪಾದನೆಯು ಕಡಿಮೆ ಇತ್ತು. ಇದೀಗ ಕರೊನಾ ಲಾಕ್​ಡೌನ್​ ಸಡಿಲಗೊಂಡಿದ್ದು, ಹೋಟೆಲ್​, ರೆಸ್ಟೋರೆಂಟ್​ ಓಪನ್​ ಆಗಿರುವುದರಿಂದ ಮಾಂಸಾಹಾರಕ್ಕೆ ಭಾರಿ ಬೇಡಿಕೆ ಸೃಷ್ಟಿಯಾಗಿದ್ದು, ಚಿಕನ್​ ಕೊರತೆಗೆ ಕಾರಣವಾಗಿದೆ.
ಹೀಗಾಗಿ ಸಹಜವಾಗಿಯೇ ಚಿಕನ್​ ಬೆಲೆಯಲ್ಲಿ ಏರಿಕೆ ಆಗಿದೆ. ಸದ್ಯ ಚಿಕನ್​ ಬೆಲೆ ಕೇಳಿದರೆ ಗ್ರಾಹಕರು ಹೆದರುವಂತಿದೆ. ಮುಂದಿನ ದಿನಗಳಲ್ಲಿ ಇದರ ಬೆಲೆ ಕಡಿಮೆ ಆಗುವ ಲಕ್ಷಣಗಳು ಇವೆ.(ಏಜೆನ್ಸೀಸ್​)
ಫೋನ್​ ಹ್ಯಾಕ್​ ಮಾಡಿ ರಹಸ್ಯ ಮಾಹಿತಿಗಳನ್ನು ಕದ್ದು ಬೆದರಿಕೆ ಹಾಕ್ತಿದ್ದ 16 ವರ್ಷದ ಹುಡುಗನ ಬಂಧನ!

ಬಾಲಿವುಡ್​ ಬ್ಯೂಟಿ ಅನುಷ್ಕಾ ಶರ್ಮಾ ಬಾಡಿಗಾರ್ಡ್​ ಸಂಬಳ ಕೇಳಿದ್ರೆ ಬೆರಗಾಗುವುದು ಖಂಡಿತ!

ಮತ್ತೆ ಬರಲಿದ್ದಾನೆ ಭಜರಂಗಿ ಭಾಯ್​ಜಾನ್​..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + seventeen =
Remember me
