ನವದೆಹಲಿ:ಚುನಾವಣೆ ಮುಗಿದಿದೆ. ನೀವು ಯಾರಿಗೆ ಮತ​ ಹಾಕಿದ್ದೀರಿ ಎನ್ನುವುದು ನನಗೆ ಮುಖ್ಯವಲ್ಲ. ನೀವೆಲ್ಲರೂ ನನ್ನ ಕುಟುಂಬವಿದ್ದಂತೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ ಹೇಳಿದರು.
ರಾಮಲೀಲಾ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಅರವಿಂದ ಕೇಜ್ರಿವಾಲ್​ ಮೂರನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ ಮಾತನಾಡಿದರು. ನನ್ನ ಗೆಲುವನ್ನು ನಿಮಗೇ ಅರ್ಪಿಸುತ್ತೇನೆ ಎಂದ ನೂತನ ಕೇಜ್ರಿವಾಲ, ಬಿಜೆಪಿ ಮತ್ತು ಕಾಂಗ್ರೆಸ್​ಗೆ ಮತ ಹಾಕಿದವರಿಗೂ ನಾನು ಮುಖ್ಯಮಂತ್ರಿ. ಅಭಿವೃದ್ಧಿ ಕೆಲಸಕ್ಕೆ ಯಾರೂ ಅಡ್ಡಿ ಮಾಡಿದರೂ ಕೇಳಲ್ಲ ಎಂದರು.
ಹಮ್​ ಹೋಂಗೆ ಕಾಮ್​ಯಾಬ್​… ಹಮ್​ ಹೋಂಗೆ ಕಾಮ್​ಯಾಬ್​… ಎಂಬ ಹಾಡನ್ನು ಹಾಡಿದರು. ಇದಕ್ಕೆ ಅಲ್ಲಿ ಸೇರಿದ್ದ ಜನ ದನಿಗೂಡಿಸಿದರು. ನಂತರ ಭಾರತ್​ ಮಾತಾ ಕೀ ಜೈ…ವಂದೇ ಮಾತರಂ ಘೋಷಣೆ ಕೂಗಿದರು.
ಮುಖ್ಯಮಂತ್ರಿ ಕೇಜ್ರಿವಾಲ್​ ಜತೆಗೆ ಮನೀಶ್ ಸಿಸೋಡಿಯಾ, ಸತ್ಯೇಂದ್ರ ಜೈನ್​, ಗೋಪಾಲ್​ ರೈ, ಕೈಲಾಶ್​ ಗೆಹ್ಲೋಟ್​, ಇಮ್ರಾನ್​ ಹುಸ್ಸೇನ್​, ರಾಜೇಂದ್ರ ಪಾಲ್​ ಗೌತಮ್​ ಅವರೂ ಪ್ರಮಾಣ ವಚನ ಸ್ವೀಕರಿಸಿದರು. (ಏಜೆನ್ಸೀಸ್​)
#WATCHDelhi Chief Minister Arvind Kejriwal sings 'Hum honge kaamyaab', at his swearing-in ceremonypic.twitter.com/hwXi8FUW46
— ANI (@ANI)February 16, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + fourteen =
Remember me
