ಕನೌಜ್ (ಉತ್ತರ ಪ್ರದೇಶ):ಈಗ ಎಲ್ಲೆಲ್ಲೂ ಕರೊನಾ ವೈರಸ್‌ ಹಾವಳಿ. ಆಸ್ಪತ್ರೆಗಳೆಲ್ಲವೂ ಕರೊನಾ ವೈರಸ್‌ ಸೋಂಕಿತರಿಂದ ತುಂಬಿ ತುಳಕಾಡುತ್ತಿದೆ.
ಇದರಿಂದಾಗಿ ಬೇರೆ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಆಸ್ಪತ್ರೆ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಅಂಥದ್ದೇ ಒಂದು ನೋವಿನ ಘಟನೆ ಉತ್ತರಪ್ರದೇಶದ ಕನೌಜ್‌ನಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ಪ್ರೇಮ್ ಚಂದ್ ಮತ್ತು ಆಶಾದೇವಿ ಎಂಬ ದಂಪತಿ ಮಗ ಅನುಜ್‌ನ್ನು ಭಾನುವಾರ ರಾತ್ರಿ ಇಲ್ಲಿನ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದಿದ್ದರು, ಮಗುವಿಗೆ ಜ್ವರ ಬಾಧಿಸಿತ್ತು. ಒಂದು ವರ್ಷದ ಈ ಮಗು ತೀವ್ರ ಜ್ವರದಿಂದ ಬಳಲುತ್ತಿದ್ದ ಮಗುವಿಗೆ ಚಿಕಿತ್ಸೆ ನೀಡಿ ಎಂದು ದಂಪತಿ ಆಸ್ಪತ್ರೆಯ ವೈದ್ಯರನ್ನು ಕೋರಿದ್ದರು.
ಇದನ್ನೂ ಓದಿ:ಪಾಕ್‌ನ ನಕಲಿ ಪೈಲಟ್‌ಗಳ ಭಯಾನಕ ಸತ್ಯ ಬಯಲು! ವಿಶ್ವಾದ್ಯಂತ ತಲೆದಂಡ…
ಆದರೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೇ ಮಗು ಮೃತಪಟ್ಟಿತ್ತು. ಆಸ್ಪತ್ರೆಯ ಆವರಣದಲ್ಲಿ ಮಗುವಿನ ಮೃತದೇಹವನ್ನು ಅಪ್ಪಿಕೊಂಡು ಹೆತ್ತವರು ಅಳುತ್ತಿರುವ ವಿಡಿಯೊವೊಂದು ಟ್ವಿಟರ್‌ನಲ್ಲಿ ವೈರಲ್ ಆಗಿದೆ.
ಯಾವುದೇ ವೈದ್ಯರು ನನ್ನ ಮಗುವಿಗೆ ಚಿಕಿತ್ಸೆ ನೀಡಿಲ್ಲ ಎಂದು ಪಾಲಕರು ರೋಧಿಸುತ್ತಿದ್ದಾರೆ. ಇದನ್ನು ಅಲ್ಲಿಯೇ ಇರುವವರೊಬ್ಬರು ವಿಡಿಯೋ ಮಾಡಿಕೊಂಡಿದ್ದಾರೆ. ಅದೀಗ ವೈರಲ್‌ ಆಗಿದ್ದು, ಆಸ್ಪತ್ರೆಯ ಕ್ರಮಕ್ಕೆ ಭಾರಿ ಆಕ್ರೋಶ ವ್ಯಕ್ತವಾಗಿದೆ.(ಏಜೆನ್ಸೀಸ್‌)
वीडियो यूपी के कन्नौज का है। आरोप है जिला अस्पताल में बच्चे को इलाज नहीं मिला। पिता, अपने बच्चे की लाश को सीने से लगाए रोता रहा।
वीडियो दिल को झकझोर देने वाला 😢@Uppolice#UPPolice#Kannauj#UttarPradesh@CMOfficeUP@myogiofficepic.twitter.com/fQzfkS2N9K
— Vinay Saxena (@vinaysaxenaj)June 29, 2020

‘ದಯವಿಟ್ಟು ಸ್ವಲ್ಪ ಸಮಯದ ನಂತರ ಪ್ರಯತ್ನಿಸಿ..’ ಧ್ವನಿ ಬಿಟ್ಟು ಮರೆಯಾದ ಉಷಾ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three × 2 =
Remember me
