ದಿಸ್ಪುರ:ಮಗು ಸತ್ತಿದೆ ಎಂದು ಆಸ್ಪತ್ರೆಯಿಂದ ಮನೆಗೆ ಕರೆತಂದು ಶವ ಸಂಸ್ಕಾರಕ್ಕೆ ಸಿದ್ಧತೆ ಮಾಡುವಾಗ, ಮಗು ಎದ್ದು ಹಾಲು ಕುಡಿದಿರುವ ಘಟನೆ ಅಸ್ಸಾಂನಲ್ಲಿ ನಡೆದಿದೆ. ಹೀಗೆ ದಿಢೀರನೆ ಎದ್ದ ಮಗು ಮತ್ತೆ ಕೆಲ ಗಂಟೆಗಳಲ್ಲಿ ಕೊನೆಯುಸಿರೆಳೆದಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ:ಇದೊಂದು ಕಾರಣದಿಂದಾಗಿ ಮುಂಬೈ ಇಂಡಿಯನ್ಸ್​ ತಂಡ ಈ ಸಲ ಕಪ್ ಗೆಲ್ಲುವುದು ಕಷ್ಟ!ಒಂದು ವರ್ಷದ ಮಗುವಿಗೆ ಆರೋಗ್ಯ ಹದಗೆಟ್ಟಿದ್ದ ಹಿನ್ನೆಲೆಯಲ್ಲಿ ಅಸ್ಸಾಂನ ದಿಬ್ರುಗಢದ ಟೀ ಗಾರ್ಡನ್​ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಭಾನುವಾರದಂದು ಮಗು ಸಾವನ್ನಪ್ಪಿರುವುದಾಗಿ ಆಸ್ಪತ್ರೆಯ ಕಾಂಪೌಂಡರ್​ ಹೇಳಿದ್ದಾನೆ. ಮಗುವಿನ ಶವವನ್ನು ಮನೆಗೆ ತೆಗೆದುಕೊಂಡು ಹೋವುವಂತೆ ಸೂಚಿಸಲಾಗಿದೆ. ಅದರಂತೆ ಶವದೊಂದಿಗೆ ಮನೆಗೆ ಬಂದ ಕುಟುಂಸ್ಥರು ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ಆರಂಭಿಸಿದ್ದಾರೆ.
ಆದರೆ ಮನೆಗೆ ಬಂದ ನಂತರ ಮಗು ಉಸಿರಾಡುತ್ತಿರುವುದು ಗೊತ್ತಾಗಿದೆ. ಎಚ್ಚರಗೊಂಡ ಮಗು, ತಾಯಿಯ ಎದೆ ಹಾಲನ್ನು ಕುಡಿದಿದೆ ಎಂದು ಕುಟುಂಬ ಹೇಳಿದೆ. ನಂತರ ಮಗುವನ್ನು ಅಸ್ಸಾಂ ಮೆಡಿಕಲ್​ ಕಾಲೇಜಿಗೆ ಕರೆದೊಯ್ಯಲಾಗಿದೆ. ಅಲ್ಲಿಗೆ ತಲುಪುವುದರೊಳಗೆ ಮಗು ಸಾವನ್ನಪ್ಪಿದ್ದಾಗಿ ಅಲ್ಲಿನ ವೈದ್ಯರು ತಿಳಿಸಿದ್ದಾರೆ.
ಇದನ್ನೂ ಓದಿ:ರಾಮ ಮಂದಿರ ಟ್ರಸ್ಟ್ ಮುಖ್ಯಸ್ಥ ಮಹಾಂತ ನೃತ್ಯ ಗೋಪಾಲ ದಾಸ್ ಆಸ್ಪತ್ರೆಗೆ ದಾಖಲುಜೀವಂತವಿದ್ದ ಮಗುವನ್ನು ಸತ್ತಿದೆ ಎಂದು ವರದಿ ನೀಡಿದ್ದಕ್ಕಾಗಿ ಕಾಂಪೌಂಡರ್​ ಮೇಲೆ ಎಫ್​ಐಆರ್​ ದಾಖಲಿಸಲಾಗಿದೆ. ವೈದ್ಯರ ಅನುಪಸ್ಥಿತಿಯಲ್ಲಿ ಈ ಘಟನೆ ನಡೆದಿದೆ. ಕಾಂಪೌಂಡರ್​ಗೆ ಸಾವಿನ ವರದಿ ಕೊಡುವ ಅಧಿಕಾರವಿಲ್ಲ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆಯ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. (ಏಜೆನ್ಸೀಸ್​)
ಡೇರಿಯ ಹಾಲು ಕೊಳ್ಳುವ ಮುನ್ನ ಎಚ್ಚರ! ಡೇರಿಯ ಹಾಲಿನಲ್ಲೇ ಸ್ನಾನ ಮಾಡಿದ್ದಾನೆ ಈ ಭೂಪ

ಬಾಲಿವುಡ್​ಗೆ ಬಂದ ಜೋ ಬಿಡೆನ್​; ಹೇಗೆ, ಏನು ಎನ್ನುವುದಕ್ಕೆ ಕಂಗನಾ ಬಳಿ ಇದೆ ಉತ್ತರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + 15 =
Remember me
