ನವದೆಹಲಿ :ಅಪರೂಪದ ಆನುವಂಶೀಯ ಖಾಯಿಲೆಯಾದ ಸ್ಪೈನಲ್​ ಮಸ್ಕುಲರ್​ ಅಟ್ರೊಫಿ(ಎಸ್​ಎಂಎ) ಇರುವ ಮಗುವಿಗೆ ಅಗತ್ಯವಾಗಿದ್ದ 16 ಕೋಟಿ ರೂ. ಮೌಲ್ಯದ ಔಷಧವು ಲಕ್ಕಿ ಡ್ರಾನಲ್ಲಿ ಸಿಕ್ಕಿರುವುದು ವರದಿಯಾಗಿದೆ. ದೆಹಲಿಯ ಒಂದು ವರ್ಷದ ಹೆಣ್ಣುಮಗು ಜೈನಬ್​ಗೆ ಜೋಲ್​ಗೆನ್​ಸ್ಮಾ ಎಂಬ ಈ ದುಬಾರಿ ಔಷಧಿಯನ್ನು ನಿನ್ನೆ ನೀಡಿ ಉಪಚರಿಸಲಾಗಿದೆ.
ನ್ಯೂರೋಮಸ್ಕುಲರ್ ಡಿಸಾರ್ಡರ್​ ಆದ ಎಸ್​ಎಂಎ, ವಯಸ್ಸಿನೊಂದಿಗೆ ಹದಗೆಡುವಂಥ ಖಾಯಿಲೆ. ಇದಕ್ಕೆ ಜೀನ್ ಥೆರಪಿಯಿಂದ ಉಪಚರಿಸಬೇಕಾಗಿದ್ದು, ಜೋಲ್​ಗೆನ್​​ಸ್ಮಾ ಎಂಬ 16 ಕೋಟಿ ರೂ. ಮೌಲ್ಯದ ಸಿಂಗಲ್ ಡೋಸ್​ ಔಷಧಿಯನ್ನು ಬಳಸಲಾಗುತ್ತದೆ. ದುಬಾರಿ ಬೆಲೆಯಿಂದಾಗಿ ಹಲವು ಸಣ್ಣ ವಯಸ್ಸಿನ ಬಡ ರೋಗಿಗಳು ಚಿಕಿತ್ಸೆ ಪಡೆಯಲಾಗದೆ ಮೃತಪಡುವುದು ಕಂಡುಬಂದಿದೆ.
ಇದನ್ನೂ ಓದಿ:ಆರು ವರ್ಷ ಕರ್ನಾಟಕದಲ್ಲಿ ಸದ್ದುಮಾಡಿದ್ದ ‘ಅಗ್ನಿಸಾಕ್ಷಿ’ಯೀಗ ಮಹಾರಾಷ್ಟ್ರದಲ್ಲಿ ‘ಸೋನಾಚಿ ಪಾವಲೆ’
2018 ರಲ್ಲಿ ತಮ್ಮ ಮೊದಲನೇ ಮಗುವನ್ನು ಇದೇ ಖಾಯಿಲೆಗೆ ಕಳೆದುಕೊಂಡಿದ್ದ ಜೈನಬ್​ನ ತಂದೆ ಅಬ್ದುಲ್ಲಾ, ದುಬಾರಿ ಜೀನ್ ಥೆರಪಿಯ ಯಶಸ್ಸಿನ ಬಗ್ಗೆ ಕೇಳಿದ್ದರು. ಆರ್ಥಿಕವಾಗಿ ಅನುಕೂಲಸ್ಥರಲ್ಲದ್ದರಿಂದ ತಮ್ಮ ಮಗಳಿಗೆ ಈ ಔಷಧಿ ಕೊಡಿಸಲು ಹಣ ಹೊಂದಿಸಲು ಪ್ರಧಾನ ಮಂತ್ರಿ ಕಾರ್ಯಾಲಯ ಮತ್ತು ಉನ್ನತ ಅಧಿಕಾರಿಗಳನ್ನು ಈ ಬಗ್ಗೆ ಸಂಪರ್ಕಿಸುತ್ತಿದ್ದರು. ಜೊತೆಗೆ ಮಗುವಿನ ಹೆಸರನ್ನು ಎಸ್​ಎಂಎ ಚಿಕಿತ್ಸೆ ಅವಶ್ಯಕವಿರುವ ಮಕ್ಕಳಿಗಾಗಿ ಕೆಲಸ ಮಾಡುವ ‘ಕ್ಯೂರ್ ಎಸ್​ಎಂಎ’ ಎಂಬ ಎನ್​ಜಿಒನಲ್ಲಿ ನೋಂದಣಿ ಮಾಡಿಸಿದ್ದರು.
ಶನಿವಾರದಂದು ಕ್ಯೂರ್​ ಎಸ್​ಎಂಎ ಸಂಸ್ಥೆಯಿಂದ ದೂರವಾಣಿ ಕರೆ ಬಂದಿದ್ದು, ಲಕ್ಕಿ ಡ್ರಾ ಮೂಲಕ ಔಷಧಿಯನ್ನು ಉಚಿತವಾಗಿ ಪಡೆಯಲು ಜೈನಬ್​ ಆಯ್ಕೆಯಾಗಿದ್ದಾಳೆ ಎಂದು ತಿಳಿದುಬಂತು. ನಿನ್ನೆಯ ದಿನವೇ ಜೋಲ್​ಗೆನ್​​ಸ್ಮಾ ಔಷಧಿಯನ್ನು ನವದೆಹಲಿಯ ಶ್ರೀ ಗಂಗಾ ರಾಮ್ ಆಸ್ಪತ್ರೆಯಲ್ಲಿ, 45 ನಿಮಿಷಗಳಲ್ಲಿ, ಜೈನಬ್​ಗೆ ನೀಡಲಾಯಿತು. ಜೈನಬ್​ನೊಂದಿಗೆ ಭಾರತದ ಇನ್ನೂ ಮೂವರು ಮಕ್ಕಳಿಗೆ ಇದೇ ರೀತಿ ಲಕ್ಕಿ ಡ್ರಾ ಮೂಲಕ ಜೀವನದಾನ ಸಿಕ್ಕಿದೆ ಎನ್ನಲಾಗಿದೆ.(ಏಜೆನ್ಸೀಸ್)
ಚಲಿಸುತ್ತಿದ್ದ ವಿಮಾನದಿಂದ ಹಾರಿದ ಪ್ರಯಾಣಿಕ! ಬೆಚ್ಚಿಬೀಳಿಸಿದ ವಿಚಿತ್ರ ವರ್ತನೆ

ವದಂತಿಗಳಿಗೆ ಕಿವಿಗೊಡಬೇಡಿ, ಲಸಿಕೆ ಹಿಂಜರಿಕೆ ಬಿಡಿ : ಪ್ರಧಾನಿ ಮೋದಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 2 =
Remember me
