ಬಿಹಾರ: ಮನೆಯಲ್ಲಿ ಆಟವಾಡುತ್ತಿದ್ದ ಮಗು ಬಂದಿದ್ದಹಾವನ್ನು ಆಟಿಕೆಯಾಗಿ ತೆಗೆದುಕೊಂಡು ಬಾಯಿಗೆ ಹಾಕಿಕೊಂಡು ಜಗಿದು ಕೊಂದು ಹಾಕಿದೆ. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.
ಹಾವನ್ನು ಮಗು ಸಾಯಿಸದಿರುವುದು ಸ್ವಲ್ಪ ವಿಚಿತ್ರವೇ ಸರಿ. ಮಗುವಿನ ಬಾಯಿಂದ ರಕ್ತ ಬರುತ್ತಿದ್ದು, ಪಕ್ಕದಲ್ಲಿ ಹಾವು ಬಿದ್ದಿರುವುದನ್ನು ಕಂಡ ತಾಯಿ ಹೆದರಿ ಆಸ್ಪತ್ರೆಗೆ ಓಡಿದ್ದಾರೆ. ಬಿಹಾರದ ಗಯಾದಲ್ಲಿ ಶನಿವಾರ (ಆ.17) ತಡರಾತ್ರಿ ಈ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.
ನಡೆದಿದ್ದೇನು?:ಬಿಹಾರದ ಗಯಾದ ಫತೇಪುರ್ ಪೊಲೀಸ್ ಠಾಣೆ ವ್ಯಾಪ್ತಿಯ ಜಮುಹರ್ ಗ್ರಾಮದಲ್ಲಿ ಒಂದು ವರ್ಷದ ಮಗು ತನ್ನ ಮನೆಯ ಟೆರೇಸ್ ಮೇಲೆ ಆಟವಾಡುತ್ತಿತ್ತು. ಅಷ್ಟರಲ್ಲಿ ಮೂರು ಅಡಿ ಉದ್ದದ ಹಾವೊಂದು ಬಂದಿತು. ಹಾವನ್ನು ಆಟಿಕೆ ಎಂದು ಪರಿಗಣಿಸಿ ಅದನ್ನು ಹಿಡಿದುಕೊಂಡು ಸ್ವಲ್ಪ ಹೊತ್ತು ಆಟವಾಡಿದೆ. ಆ ಬಳಿಕ ಮಗು ಹಾವಿನ ಮಧ್ಯ ಭಾಗವನ್ನು ಬಾಯಿಗೆ ಹಾಕಿಕೊಂಡು ಜಗಿಯತೊಡಗಿತು. ಮಗುವಿನ ಬಾಯಿಯಲ್ಲಿ ಹಲ್ಲುಗಳು ಬಂದಿದ್ದರಿಂದ ಹಾವು ಸಾವನ್ನಪ್ಪಿದೆ. ಅಷ್ಟರಲ್ಲಿ ಮಗುವಿನ ತಾಯಿ ಅಲ್ಲಿಗೆ ಬಂದು ಆ ದೃಶ್ಯ ನೋಡಿ ಬೆಚ್ಚಿಬಿದ್ದರು.
Bihar: Child killed a snake by biting it, family members immediately took the child to a doctor for treatment. Where doctors declared the child healthy🫡pic.twitter.com/3reJDCKQGD
— Ghar Ke Kalesh (@gharkekalesh)August 20, 2024

ಸತ್ತ ಹಾವನ್ನು ನೋಡಿದ ಅವರು ಅದನ್ನು ತೆಗೆದು ಮಗುವನ್ನು ಎತ್ತಿಕೊಂಡು ಸ್ಥಳೀಯ ಆಸ್ಪತ್ರೆಗೆ ಧಾವಿಸಿ ನಡೆದ ಸಂಗತಿಯನ್ನು ತಿಳಿಸಿದರು. ಆಸ್ಪತ್ರೆಯ ಅಧಿಕಾರಿಗಳು ಮಗುವಿಗೆ ಎಲ್ಲಾ ರೀತಿಯ ಪರೀಕ್ಷೆಗಳನ್ನು ನಡೆಸಿ ಮತ್ತಷ್ಟು ಆಘಾತಕ್ಕೊಳಗಾಗಿದ್ದಾರೆ. ಮಗು ಸಂಪೂರ್ಣವಾಗಿ ಆರೋಗ್ಯವಾಗಿದ್ದು, ಯಾವುದೇ ಅಪಾಯವಾಗಿಲ್ಲ ಎಂದು ತಿಳಿದುಬಂದಿದೆ.ಮಗು ಕಚ್ಚಿದ ಕಾರಣ ಹಾವು ಸಾವನ್ನಪ್ಪಿದ್ದು, ಸತ್ತ ಹಾವು ವಿಷಕಾರಿಯಲ್ಲದ ಕಾರಣ ಯಾವುದೇ ಅಪಾಯವಿಲ್ಲ ಎಂದು ತಿಳಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 2 =
Remember me
