ಹೈದರಾಬಾದ್:ಇತ್ತೀಚೆಗಷ್ಟೇ ಯೂ ಟ್ಯೂಬರ್​ ಮೇಲೆ ಹಲ್ಲೆ ಮಾಡಿ ಸುದ್ದಿಯಾಗಿದ್ದ ತೆಲುಗು ನಟಿ ಹಾಗೂ ಬಿಗ್​ಬಾಸ್​​ನ ಮಾಜಿ ಸ್ಪರ್ಧಿ ಕರಾಟೆ ಕಲ್ಯಾಣಿ ವಿರುದ್ಧ ಮತ್ತೊಂದು ಆರೋಪ ಕೇಳಿಬಂದಿದೆ.
ಈಕೆಯಿಂದ ತಮಗೆ ಅನ್ಯಾಯವಾಗಿದೆ ಎಂದು ಇಬ್ಬರು ದೂರು ನೀಡಿರುವುದಲ್ಲದೇ, ಕಾನೂನು ಬಾಹಿರವಾಗಿ ಮಗು ದತ್ತು ಪಡೆದಿದ್ದಾರೆ ಎಂಬ ಆರೋಪವೂ ಇವರ ಮೇಲಿದೆ.
ಕೆಲ ದಿನಗಳ ಹಿಂದಷ್ಟೇ ಗಂಡುಮಗುವನ್ನು ದತ್ತು ಪಡೆದುಕೊಂಡಿದ್ದೆ ಎಂದು ಹೇಳಿದ್ದ ಈಕೆ ಮುರು ದಿನಗಳ ಹಿಂದಷ್ಟೇ ಹೆಣ್ಣು ಮಗುವನ್ನೂ ಮನೆಯಲ್ಲಿ ಇಟ್ಟುಕೊಂಡಿರುವುದು ಪತ್ತೆಯಾಗಿದೆ. ದತ್ತು ಮಗು ಪಡೆದುಕೊಂಡಿದ್ದೇನೆ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಶಿಶು ಕಲ್ಯಾಣ ಅಧಿಕಾರಿಗಳು ಇವರ ಮನೆಗೆ ಭೇಟಿ ನೀಡಿದಾಗ ಹೆಣ್ಣು ಮಗುವೂ ಇರುವುದು ಪತ್ತೆಯಾಗಿದೆ.
ಈ ನಂತರ ಶಿಶು ಕಲ್ಯಾಣಾಧಿಕಾರಿ ಇಲಾಖೆಯ ಸಹಾವಾಣಿಗೆ ಕರೆ ಮಾಡಿ ತಾನು ಹೆಣ್ಣು ಮಗುವನ್ನೂ ದತ್ತು ಪಡೆದುಕೊಂಡಿದ್ದೇನೆ ಎಂದು ಹೇಳಿದ್ದಾರೆ. ಇವರ ಈ ಹೇಳಿಕೆ ಈಗ ಅನುಮಾನಕ್ಕೆಡೆಮಾಡಿಕೊಟ್ಟಿದೆ.
ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಂಗಳವಾರ ಕರಾಟೆ ಕಲ್ಯಾಣಿಗೆ ನೊಟೀಸ್​ ನೀಡಲಾಗಿದೆ. ಸದ್ಯ ಮನೆಯಲ್ಲಿರದ ಕಲ್ಯಾಣಿ ನೊಟೀಸ್​ ಸ್ವೀಕರಿಸಿಲ್ಲ. ಶೀಘ್ರದಲ್ಲೇ ಅವರ ವಿಚಾರಣೆ ನಡೆಸುವುದಾಗಿ ಹೇಳಿದ್ದಾರೆ. ಇನ್ನು ಮತ್ತೊಂದು ಪ್ರಕರಣದಲ್ಲಿ ವಂಚನೆ ಆರೋಪವೂ ಕೇಳಿಬಂದಿದ್ದು, ಸದ್ಯಕ್ಕೆ ಎರಡು ಎಫ್​ ಐಆರ್​ ದಾಖಲಾಗಿದೆ.(ಏಜೆನ್ಸೀಸ್​)
ಜಾರ್ಖಂಡ್​ ಹಗರಣ: ಇಡಿಯಿಂದ ಮಹಿಳಾ ಅಧಿಕಾರಿ ವಿಚಾರಣೆಗೆ ಕೋರ್ಟ್​ ಅನುಮತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 2 =
Remember me
