ನವದೆಹಲಿ:ಸಾಮಾನ್ಯವಾಗಿ ಎಲ್ಲ ಮಕ್ಕಳು ಬಾಲ್ಯದಲ್ಲಿ ತುಂಬ ತುಂಟರಾಗಿಯೇ ಇರುತ್ತಾರೆ. ನಾನಾ ಥರದ ತರ್ಲೆತನ ತೋರಿರುತ್ತಾರೆ. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಕೂಡ ಅದಕ್ಕೆ ಹೊರತಾಗಿಲ್ಲ. ಅವರೂ ಬಾಲ್ಯದಲ್ಲಿ ಭಾರಿ ತರ್ಲೆ ಆಗಿದ್ರಂತೆ. ಮಕ್ಕಳ ದಿನವಾದ ಇಂದು ಅವರು ಈ ಸಂಗತಿಯನ್ನು ಹೇಳಿಕೊಂಡಿದ್ದಾರೆ.
ಸ್ವಲ್ಪ ಕಿಡಿಗೇಡಿತನ ಇರದಿದ್ದರೆ ಬಾಲ್ಯವು ಅಪೂರ್ಣ. ನಾನು ಚಿಕ್ಕವನಾಗಿದ್ದಾಗ ನನ್ನ ಫ್ರೆಂಡ್ಸ್ ಜತೆ ಸಾಹಿತ್ಯ ಸಹವಾಸ್​ನ ಪಾರ್ಕಿಂಗ್ ಸ್ಥಳಕ್ಕೆ ಹೋಗಿ ಅಲ್ಲಿದ್ದ ಕಾರುಗಳ ಚಕ್ರಗಳ ಗಾಳಿ ತೆಗೆಯುತ್ತಿದ್ದೆವು. ನಾವು ಅದರಲ್ಲಿ ಎಷ್ಟು ಎಕ್ಸ್​ಪರ್ಟ್ ಆಗಿದ್ದೆವೆಂದರೆ ನಾಲ್ಕೂ ಚಕ್ರಗಳನ್ನು ಚಪ್ಪಟೆ ಮಾಡದೆ ನಮ್ಮ ಕೀಟಲೆ ಪೂರ್ಣವಾಗಿರುತ್ತಿರಲಿಲ್ಲ ಎಂದು ತಮ್ಮ ಬಾಲ್ಯದ ತುಂಟತನವನ್ನು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ:ವಿಶ್ವಕಪ್​ ಪಂದ್ಯಗಳಲ್ಲಿ ಸೋಲು; ಪಾಕಿಸ್ತಾನ ಕ್ರಿಕೆಟ್​ ತಂಡದಲ್ಲಿ ಏನಾಗಲಿದೆ ಬದಲಾವಣೆ?
ನೀವೂ ನಿಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡು ಆಗ ಮಾಡುತ್ತಿದ್ದ ತರ್ಲೆತನಗಳ ಬಗ್ಗೆ ನನ್ನ ಪೋಸ್ಟ್​ಗೆ ರಿಪ್ಲೈ ಮಾಡುವ ಮೂಲಕ ಹೇಳಿಕೊಳ್ಳಿ ಎಂದಿರುವ ಸಚಿನ್, ಅಷ್ಟರೊಳಗೆ ನಾನು ಹೊರಗೆ ಹೋಗಿ ನನ್ನ ಕಾರಿನ ಟಯರ್​ಗಳನ್ನು ಚೆಕ್ ಮಾಡಿ ಬರುತ್ತೇನೆ ಎಂಬುದಾಗಿ ಹೇಳಿ ನಗೆಯುಕ್ಕಿಸಿದ್ದಾರೆ.
ಇದನ್ನೂ ಓದಿ:ಬೆಟ್ಟಿಂಗ್ ಆ್ಯಪ್ ಸುಳಿಗೆ ಈ ಪ್ರಖ್ಯಾತ ಕಂಪನಿಯೂ ಸಿಲುಕಿತಾ?: ದಾಖಲಾಯಿತು ಎಫ್​ಐಆರ್​!
Childhood is incomplete without a bit of mischief.
When I was a kid, my friends and I would flatten the tyres of the cars parked in Sahitya Sahwas. The thorough professionals that we were, our job wasn’t done until ALL 4 tyres were flattened.
Rewind the time and tell me the…
— Sachin Tendulkar (@sachin_rt)November 14, 2023

ಹೀಗೆ ಸಚಿನ್ ತನ್ನ ಬಾಲ್ಯದ ದಿನಗಳ ಬಗ್ಗೆ ಹೇಳಿಕೊಳ್ಳುತ್ತ ಮಕ್ಕಳ ದಿನಾಚರಣೆಗೆ ವಿಭಿನ್ನವಾಗಿ ಶುಭಾಶಯ ಕೋರಿದ್ದಾರೆ. ಅವರ ಈ ಪೋಸ್ಟ್​​ಗೆ ಭರ್ಜರಿ ಪ್ರತಿಕ್ರಿಯೆಗಳು ಬಂದಿವೆ. ಈ ಪೋಸ್ಟ್ 15 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಕಂಡಿದೆ. ಇನ್ನು ಸಚಿನ್​ ಪೋಸ್ಟ್​ಗೆ ಪ್ರತಿಕ್ರಿಯಿಸಿರುವ ನೆಟ್ಟಿಗರೊಬ್ಬರು, ಎಂಆರ್​​ಎಫ್​ನವರು ಯಾಕೆ ನಿಮ್ಮನ್ನು ಬ್ರ್ಯಾಂಡ್ ಅಂಬಾಸಡರ್ ಆಗಿ ತೆಗೆದುಕೊಂಡರು ಎಂಬುದು ಈಗ ಗೊತ್ತಾಯ್ತು ಎಂದಿದ್ದಾರೆ.
Now I know the reason why#MRFchose you as their Brand Ambassador. 😁😃
— Devesh Dashrath Bhuwad (@deveshbhuwad)November 14, 2023

ನಾಳೆ 8 ಕೋಟಿಗೂ ಅಧಿಕ ಜನರ ಖಾತೆಗೆ ಬಿಡುಗಡೆ ಆಗಲಿದೆ ಒಟ್ಟು 18 ಸಾವಿರ ಕೋಟಿ ರೂಪಾಯಿ!

ಆ 10 ಸಾವಿರ ಅದೃಷ್ಟವಂತರಲ್ಲಿ ನೀವೂ ಒಬ್ರಾ? ಚೆಕ್ ಮಾಡಿಕೊಳ್ಳುವುದು ಹೇಗೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 2 =
Remember me
