ಲಖನೌ:ಕಾಲುವೆಯಲ್ಲಿ ಬಿದ್ದಿರುವ ಕೊಳೆತ ಹೆಣವನ್ನು ತೆಗೆಯುವ ಸಲುವಾಗಿ ಪೊಲೀಸರು ಮಕ್ಕಳನ್ನು ಬಳಕೆ ಮಾಡಿರುವ ಅಮಾನವೀಯ ಹಾಗೂ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಲಖನೌದ ಬುಲಂದ್‌ಶಹರ್‌ನಲ್ಲಿ ನಡೆದಿದೆ.
ನಗರದ ಪೊಲೀಸರು ಅಪ್ರಾಪ್ತ ಮಕ್ಕಳನ್ನು ಹೆಣ ತೆಗೆಯುವಂತೆ ಒತ್ತಾಯಿಸಿ ಅವರನ್ನು ಕೆಲಸಕ್ಕೆ ಬಳಸಿಕೊಂಡಿರುವ ದೃಶ್ಯವನ್ನು ಸ್ಥಳೀಯರೊಬ್ಬರು ಕ್ಯಾಮೆರಾದಲ್ಲಿ ಸೆರೆ ಹಿಡಿದು ಅದನ್ನು ವೈರಲ್‌ ಮಾಡಿದ್ದಾರೆ. ವಾಲಿಪುರ ಗ್ಯಾಂಗ್‌ನಹಾರ್‌ನಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ:ಇನ್‌ಸ್ಟಾಗ್ರಾಂನಲ್ಲಿ ಸಚಿವೆಯ ಸೀದಾಸಾದಾ ಸೆಲ್ಫಿ- ಶೀರ್ಷಿಕೆಗೆ ಅಭಿಮಾನಿಗಳ ಹುಸಿಕೋಪ
ಕಾಲುವೆಯಿಂದ ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾದಿಯಲ್ಲಿ ಹೋಗುತ್ತಿರುವ ಮಕ್ಕಳನ್ನು ಕರೆದು ಅದನ್ನು ತೆಗೆಯುವಂತೆ ಹೇಳಿದ್ದಾರೆ. ಈ ಮಕ್ಕಳು ಹಗ್ಗ ಮತ್ತು ಬಿದಿರಿನ ಕೋಲುಗಳಿಂದ ದೇಹವನ್ನು ಎಳೆಯುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಅದನ್ನು ವೈರಲ್‌ ಮಾಡಿದ ಬಳಿಕವಷ್ಟೇ ವಿಷಯ ಬೆಳಕಿಗೆ ಬಂದಿದೆ.
ಈ ಫೋಟೋ ವೈರಲ್‌ ಆಗುತ್ತಿದ್ದಂತೆಯೇ ಬುಲಂದ್‌ಶಹರ್ ಪೊಲೀಸ್ ವರಿಷ್ಠಾಧಿಕಾರಿ ತನಿಖೆಗೆ ಆದೇಶಿಸಿದ್ದಾರೆ. ಆರೋಪಿ ಸಬ್ ಇನ್ಸ್‌ಪೆಕ್ಟರ್ ಮತ್ತು ಕಾನ್‌ಸ್ಟೆಬಲ್‌ ವಿರುದ್ಧ ದೂರು ದಾಖಲು ಮಾಡಿಕೊಳ್ಳಲಾಗಿದೆ. ಸರ್ಕಲ್ ಆಫೀಸರ್ (ಸಿಒ) ನೇತೃತ್ವದ ತನಿಖೆಗೆ ಆದೇಶಿಸಲಾಗಿದೆ.
ಇನ್ನು 12 ವರ್ಷ ಇವರೇ ಅಧ್ಯಕ್ಷರು- ತಿದ್ದುಪಡಿಗೊಂಡಿತು ಸಂವಿಧಾನ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:four × 3 =
Remember me
