ಸೋಫಿಯಾ:2024ನೇ ವರ್ಷ ಆರಂಭವಾಗಿ ಕೇವಲ ಒಂದೂವರೆ ತಿಂಗಳು ಮಾತ್ರ ಮುಕ್ತಾಯವಾಗಿದೆ. ಅಷ್ಟರಲ್ಲೇ ಬಲ್ಗೇರಿಯನ್​ನ ನಿಗೂಢ ಮಹಿಳೆ, ಅತೀಂದ್ರಿಯ ಭವಿಷ್ಯಗಾರ್ತಿ ಎಂದೇ ಖ್ಯಾತಿ ಪಡೆದಿರುವ ಬಾಬಾ ವಂಗಾ ಅವರು ನುಡಿದ ಹಲವು ಭವಿಷ್ಯಗಳಲ್ಲಿ ಮೂರು ಭವಿಷ್ಯವಾಣಿಗಳು ನಿಜವಾಗಿವೆ.
ಹೌದು, ಬಾಂಬಾ ವಂಗಾ ನುಡಿದ ಹಲವು ಭವಿಷ್ಯಗಳಲ್ಲಿ ಹವಾಮಾನ ಬದಲಾವಣೆ ಮತ್ತು ನೈಸರ್ಗಿಕ ವಿಕೋಪಗಳು ಸಂಭವಿಸಲಿವೆ ಎಂದು ನುಡಿದ ಭವಿಷ್ಯವೂ ಒಂದು. ಅವರು ಹೇಳಿದಂತೆ ಹೊಸ ವರ್ಷದ ಆರಂಭದಲ್ಲೇ ಸೂರ್ಯೋದಯದ ನಾಡು ಜಪಾನ್​ 7.6 ತೀವ್ರತೆಯ ಪ್ರಬಲ ಭೂಕಂಪಕ್ಕೆ ನಲುಗಿತು. ಸರಣಿ ಭೂಕಂಪನಗಳಿಂದ ಸುನಾಮಿ ಭೀತಿ ಆವರಿಸಿದ್ದಲ್ಲದೆ, ಭೂಕಂಪನಕ್ಕೆ ನೂರಾರು ಮಂದಿ ಬಲಿಯಾದರು. ಸುಮಾರು 200ಕ್ಕೂ ಅಧಿಕ ಮಂದಿ ಕಣ್ಮರೆ ಸಹ ಆದರು.
ಇದೀಗ ಮತ್ತೆರಡು ಭವಿಷ್ಯವಾಣಿಗಳು ನಿಜವಾಗಿವೆ. ಯಾವುವೆಂದರೆ, ಕ್ಯಾನ್ಸರ್​ ರೋಗಕ್ಕೆ ಹೊಸ ಚಿಕಿತ್ಸೆ ಲಭ್ಯವಾಗಲಿದೆ ಎಂದು ಬಾಬಾ ವಂಗಾ ಹೇಳಿದ್ದರು. ಇದೀಗ ಅದು ನಿಜವಾಗಿದೆ. ಇತ್ತೀಚೆಗಷ್ಟೇ ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ ಮಾತನಾಡಿ, ನಮ್ಮ ವಿಜ್ಞಾನಿಗಳು ಕ್ಯಾನ್ಸರ್​ಗೆ ಲಸಿಕೆ ಕಂಡುಹಿಡಿಯುವ ಸಮೀಪದಲ್ಲಿದ್ದಾರೆ ಮತ್ತು ಶೀಘ್ರದಲ್ಲೇ ರೋಗಿಗಳಿಗೆ ಲಸಿಕೆ ಲಭ್ಯವಾಗಲಿದೆ ಎಂದು ಹೇಳಿದ್ದಾರೆ. ಭವಿಷ್ಯದ ತಂತ್ರಜ್ಞಾನಗಳ ಕುರಿತು ಮಾಸ್ಕೋದ ವೇದಿಕೆಯೊಂದರಲ್ಲಿ ಮಾತನಾಡುವಾಗ ಈ ವಿಚಾರವನ್ನು ಪುಟಿನ್​ ತಿಳಿಸಿದರು.
ಇನ್ನೊಂದು ಭವಿಷ್ಯವಾಣಿ ಯಾವುದೆಂದರೆ 2024ರಲ್ಲಿ ಜಾಗತಿಕ ಆರ್ಥಿಕತೆಯ ಮೇಲೆ ಪರಿಣಾಮ ಬೀರುವ ದೊಡ್ಡ ಆರ್ಥಿಕ ಬಿಕ್ಕಟ್ಟು ಉಂಟಾಗಲಿದೆ. ಹೆಚ್ಚುತ್ತಿರುವ ಸಾಲದ ಮಟ್ಟಗಳು ಮತ್ತು ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಯಂತಹ ಅಂಶಗಳು ಇದಕ್ಕೆ ಕಾರಣಗಳಾಗಲಿವೆ ಎಂದಿದ್ದರು. ಅದರಂತೆ ಜಪಾನ್​ ಮತ್ತು ಯುನೈಟೆಡ್​ ಕಿಂಗ್​ಡಮ್​ನಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾಗಿದೆ.
ಯುಕೆಯಲ್ಲಿ ಕಳೆದ ವರ್ಷದ ಕೊನೆಯಲ್ಲಿ ಹೆಚ್ಚಿನ ಹಣದುಬ್ಬರ ಮತ್ತು ಜೀವನ ವೆಚ್ಚದ ಬಿಕ್ಕಟ್ಟಿನಿಂದ ಆರ್ಥಿಕ ಹಿಂಜರಿತ ಉಂಟಾಯಿತು. ಈ ವರ್ಷದ ಚುನಾವಣೆಗೂ ಮುನ್ನವೇ ಪ್ರಧಾನಿ ರಿಷಿ ಸುನಕ್‌ಗೆ ಆರ್ಥಿಕ ಬಿಕ್ಕಟ್ಟು ದೊಡ್ಡ ಹೊಡೆತವನ್ನು ನೀಡಿದೆ. 2023ರ ನಾಲ್ಕನೇ ತ್ರೈಮಾಸಿಕದಲ್ಲಿ ಒಟ್ಟು ದೇಶೀಯ ಉತ್ಪನ್ನವು ಶೇ. 0.3 ರಷ್ಟು ಕುಗ್ಗಿದ್ದು, ದೇಶದ ಆರ್ಥಿಕತೆಯನ್ನು ಹಿಂಜರಿತದಲ್ಲಿ ಇರಿಸಿದೆ. ಜಪಾನ್‌ನ ಆರ್ಥಿಕತೆಯು ಸಹ ಸತತವಾಗಿ ಎರಡು ತ್ರೈಮಾಸಿಕಗಳವರೆಗೆ ಕುಗ್ಗಿದೆ. 2023ರ ಕೊನೆಯ ಮೂರು ತಿಂಗಳಲ್ಲಿ ದೇಶದ GDP ಶೇಕಡಾ 0.4 ರಷ್ಟು ಕುಗ್ಗಿದೆ. ವಿಶ್ವದ ಅತಿದೊಡ್ಡ ಆರ್ಥಿಕತೆಗಳ ಪಟ್ಟಿಯಲ್ಲಿ ಜರ್ಮನಿ ನಂತರದ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಈ ಎರಡು ರಾಷ್ಟ್ರಗಳು ಜಾಗತಿಕವಾಗಿ ಆರ್ಥಿಕ ಶಕ್ತಿ ಎನಿಸಿಕೊಂಡಿವೆ. ಆದರೆ, ಇದೀಗ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿವೆ.
ಯಾರೀ ಬಾಬಾ ವಂಗಾ?ಬಲ್ಗೇರಿಯನ್​ನ ನಿಗೂಢ ಮಹಿಳೆ, ಅತೀಂದ್ರಿಯ ಭವಿಷ್ಯಗಾರ್ತಿ ಎಂದೇ ಖ್ಯಾತಿ ಪಡೆದಿರುವ ಬಾಬಾ ವಂಗಾ ಅವರ ಭವಿಷ್ಯವಾಣಿ ಇದಾಗಲೇ ಜಗದ್ವಿಖ್ಯಾತಿ ಪಡೆದಿದೆ. ವರದಿಗಳ ಪ್ರಕಾರ, ಅವರು 1911ರಲ್ಲಿ ಉತ್ತರ ಮ್ಯಾಸಿಡೋನಿಯಾದ ಸ್ಟ್ರುಮಿಕಾದಲ್ಲಿ ಜನಿಸಿದರು. ಅವರ ಮೂಲ ಹೆಸರು ವಾಂಜೆಲಿಯಾ ಪಾಂಡೆವಾ ಡಿಮಿಟ್ರೋವಾ ಎಂದು. ತಮ್ಮ 12ನೇ ವಯಸ್ಸಿನಲ್ಲಿ ಭಾರೀ ಚಂಡಮಾರುತದ ಸಮಯದಲ್ಲಿ ನಿಗೂಢವಾಗಿ ದೃಷ್ಟಿ ಕಳೆದುಕೊಂಡರಂತೆ. 1996ರಲ್ಲಿ ಮೃತಪಟ್ಟಿರುವ ಬಾಬಾ ವಂಗಾ 5079ನೇ ಇಸವಿಯವರೆಗೂ ಏನೇನಾಗಲಿದೆ ಎನ್ನುವುದನ್ನು ಕಂಡು ಕೊಂಡಿದ್ದಾಗಿ ಹೇಳಿದ್ದು, ಅದನ್ನು ಸಮಾಜಕ್ಕೆ ತಿಳಿಸಿಯೇ ಕೊನೆಯುಸಿರೆಳೆದಿದ್ದರು ಎಂದು ಹೇಳಲಾಗಿದೆ.
ಅನೇಕ ಭವಿಷ್ಯಗಳು ನಿಜವಾಗಿವೆಉಗ್ರರು ಅಮೆರಿಕದ ಮೇಲೆ ನಡೆಸಿದ ದಾಳಿ (9/11), ಚೆರ್ನೋಬಿಲ್‌ ದುರಂತ, ಪ್ರಿನ್ಸೆಸ್ ಡಯಾನಾ ಸಾವು, 2004ರ ಥಾಯ್ಲೆಂಡ್‌ ಸುನಾಮಿ, ಬರಾಕ್‌ ಒಬಾಮಾ ಅಧ್ಯಕ್ಷ ಪಟ್ಟಕ್ಕೇರುವುದು…ಇಂಥ ನೂರಾರು ಘಟನೆಗಳ ಕುರಿತು ಹಲವು ದಶಕಗಳ ಮುಂಚೆಯೇ ನುಡಿದಿದ್ದರು ಇವರು. ಅಷ್ಟೇ ಏಕೆ ಮಹಾಮಾರಿ ಕರೊನಾ ವೈರಸ್​ ಕುರಿತು ಅವರು ಮಾಹಿತಿ ನೀಡಿದ್ದರು ಎನ್ನಲಾಗಿದೆ. 15ನೇ ಶತಮಾನದ ಜ್ಯೋತಿಷಿ ನಾಸ್ಟ್ರಾಡಮಸ್‌ಗೆ ಬಾಬಾ ವಂಗಾ ಅವರನ್ನು ಹೋಲಿಕೆ ಮಾಡಲಾಗುತ್ತದೆ. ಅವರ ಭವಿಷ್ಯವಾಣಿಗಳು ಶೇಕಡ 85ರಷ್ಟು ನಿಖರ ಎನ್ನಲಾಗುತ್ತಿದೆ.
5079ರಲ್ಲಿ ಬ್ರಹ್ಮಾಂಡವು ಕೊನೆಗೊಳ್ಳುತ್ತದೆಇಡೀ ಜಗತ್ತಿನ ನೂರಾರು ವರ್ಷಗಳ ಹಾಗುಹೋಗುಗಳ ಬಗೆಗೆ ಭವಿಷ್ಯ ನುಡಿದಿರುವ ಬಾಗಾ ವಂಗಾ ಪ್ರಕಾರ, 5079ಕ್ಕೆ ಜಗತ್ತು ಕೊನೆಯಾಗುತ್ತದೆ. 2023ರಲ್ಲಿ ಭೂಮಿಯ ಕಕ್ಷೆಯು ಬದಲಾಗುತ್ತದೆ, 2028ರಲ್ಲಿ ಮಾನವರು ಶುಕ್ರವನ್ನು ಭೇಟಿ ಮಾಡುತ್ತಾರೆ, ಮುಸ್ಲಿಮರು 2043 ರಲ್ಲಿ ಯುರೋಪ್ ಅನ್ನು ಆಳುತ್ತಾರೆ ಮತ್ತು 5079 ರಲ್ಲಿ ಬ್ರಹ್ಮಾಂಡವು ಕೊನೆಗೊಳ್ಳುತ್ತದೆ ಎಂದು ಆಕೆಯ ಭವಿಷ್ಯದ ಭವಿಷ್ಯವಾಣಿಗಳು ಸೇರಿವೆ.
2024ಕ್ಕೆ ಸಂಬಂಧಿಸಿದಂತೆ ಬಾಬಾ ವಂಗಾ ನುಡಿರುವ ಇತರೆ ಭವಿಷ್ಯವಾಣಿಗಳು ಈ ಕೆಳಕಂಡಂತಿದೆ.1. ಈವರ್ಷ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಮೇಲೆ ಸಹ ದೇಶವಾಸಿಯಿಂದಲೇ ಹತ್ಯೆಯ ಪ್ರಯತ್ನ ನಡೆಯಲಿದೆಯಂತೆ.2. ಯುರೋಪ್​ನಲ್ಲಿ ಭಯೋತ್ಪಾದಕ ದಾಳಿಗಳು ಹೆಚ್ಚಲಿವೆ ಮತ್ತು “ದೊಡ್ಡ ದೇಶ”ವೊಂದು ಜೈವಿಕ ಶಸ್ತ್ರಾಸ್ತ್ರ ಪರೀಕ್ಷೆಗಳು ಅಥವಾ ದಾಳಿಗಳನ್ನು ನಡೆಸಲಿದೆ.3. ಈ ವರ್ಷ ಜಾಗತಿಕ ಆರ್ಥಿಕತೆಯ ಮೇಲೆ ಪರಿಣಾಮ ಬೀರುವ ದೊಡ್ಡ ಆರ್ಥಿಕ ಬಿಕ್ಕಟ್ಟು ಉಂಟಾಗಲಿದೆ. ಹೆಚ್ಚುತ್ತಿರುವ ಸಾಲದ ಮಟ್ಟಗಳು ಮತ್ತು ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಯಂತಹ ಅಂಶಗಳು ಇದಕ್ಕೆ ಕಾರಣಗಳಾಗಲಿವೆಯಂತೆ.4. ಭಯಾನಕ ಹವಾಮಾನ ಘಟನೆಗಳು ಮತ್ತು ನೈಸರ್ಗಿಕ ವಿಕೋಪಗಳು ಸಂಭವಿಸಲಿವೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ.5. ಸೈಬರ್ ದಾಳಿಗಳು ಹೆಚ್ಚಾಗುತ್ತವೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ. ಸುಧಾರಿತ ಹ್ಯಾಕರ್‌ಗಳು ಪವರ್ ಗ್ರಿಡ್‌ಗಳು ಮತ್ತು ನೀರಿನ ಸಂಸ್ಕರಣಾ ಘಟಕಗಳಂತಹ ನಿರ್ಣಾಯಕ ಮೂಲಸೌಕರ್ಯಗಳನ್ನು ಗುರಿಯಾಗಿಸುತ್ತಾರೆ, ಇದು ರಾಷ್ಟ್ರೀಯ ಭದ್ರತೆಗೆ ಅಪಾಯವನ್ನು ಉಂಟುಮಾಡಲಿದೆಯಂತೆ.6. 2024ರಲ್ಲಿ ಆಲ್ಝೈಮರ್ (ಮರೆವಿನ ಕಾಯಿಲೆ) ಮತ್ತು ಕ್ಯಾನ್ಸರ್ ಸೇರಿದಂತೆ ಗುಣಪಡಿಸಲಾಗದ ಕಾಯಿಲೆಗಳಿಗೆ ಹೊಸ ಚಿಕಿತ್ಸೆಗಳು ಲಭ್ಯವಾಗಲಿವೆಯಂತೆ.7. ಕ್ವಾಂಟಮ್ ಕಂಪ್ಯೂಟಿಂಗ್‌ನಲ್ಲಿ ಪ್ರಮುಖ ಪ್ರಗತಿಯಾಗಲಿದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.
ಇದಿಷ್ಟು 2024ರಲ್ಲಿ ನಡೆಯಲಿದೆಯಂತೆ. 2001ರಲ್ಲಿ ಅಮೆರಿಕದ ಅವಳಿ ಕಟ್ಟಡಗಳ ಮೇಲೆ ನಡೆದ 9/11ರ ದಾಳಿಯ ಬಗ್ಗೆ ವಂಗಾ ಭವಿಷ್ಯ ಹೇಳಿದ್ದರು. ಅದು ನಿಜವೂ ಆಗಿತ್ತು. ‘ಅಮೆರಿಕದ ಸಹೋದರರು ಲೋಹದ ಹಕ್ಕಿಗಳ ದಾಳಿಗೆ ಒಳಗಾಗಲಿದ್ದಾರೆ. ತೋಳಗಳು ಕೂಗಲಿವೆ, ಮುಗ್ಧರ ರಕ್ತದ ಕೋಡಿ ಹರಿಯಲಿದೆ’ ಎಂದು ಆಕೆ 1989ರಲ್ಲಿ ನುಡಿದಿದ್ದರು. 2021 ಮತ್ತು 2022 ಹಾಗೂ 2023ರಲ್ಲೂ ಬಾಬಾ ವಾಂಗಾರ ಕೆಲ ಭವಿಷ್ಯಗಳು ನಿಜವಾಗಿವೆ. ಇದೀಗ 2024ರಲ್ಲಿ ಘಟಿಸಲಿರುವ ಅನಾಹುತಗಳ ಬಗ್ಗೆ ಬಾಂಬಾ ವಾಂಗಾ ನುಡಿದಿರುವ ಭವಿಷ್ಯವಾಣಿ ಎಷ್ಟರ ಮಟ್ಟಿಗೆ ನಿಜವಾಗಲಿದೆ ಎಂದು ಕಾದು ನೋಡಬೇಕಿದೆ.(ಏಜೆನ್ಸೀಸ್​)
ಪುಟಿನ್​ ಹತ್ಯೆ ಯತ್ನದಿಂದ ಭೀಕರ ನೈಸರ್ಗಿಕ ವಿಕೋಪಗಳವರೆಗೆ! 2024ಕ್ಕೆ ಬಾಬಾ ವಂಗಾರ 7 ಭವಿಷ್ಯವಾಣಿಗಳಿವು…

ಇಸ್ರೇಲ್​-ಹಮಾಸ್​ ಯುದ್ಧ: ನಿಜವಾಗುತ್ತಾ ಬಲ್ಗೇರಿಯನ್ ನಿಗೂಢ ಮಹಿಳೆ ಬಾಬಾ ವಂಗಾರ ಭವಿಷ್ಯವಾಣಿ?

ಏಲಿಯನ್ ದಾಳಿಯಿಂದ ಸೌರ ಸುನಾಮಿಯವರೆಗೆ! ಭಯಾನಕವಾಗಿದೆ ಬಾಬಾ ವಂಗಾರ 2023ರ ಭವಿಷ್ಯವಾಣಿ

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:13 − 3 =
Remember me
