ಹೈದರಾಬಾದ್:ಇಲ್ಲಿಯ ನೆಹರೂ ಝೂಲಾಜಿಕಲ್‌ ಪಾರ್ಕ್‌ನಲ್ಲಿ ಇಂದು ಸುಜಿಯ 34ನೇ ಹುಟ್ಟುಹಬ್ಬದ ಸಂಭ್ರಮ. ಕೋವಿಡ್ -19 ಬಿಕ್ಕಟ್ಟಿನಿಂದಾಗಿ ಅನುಸರಿಸಬೇಕಾದ ಸಾಮಾಜಿಕ ದೂರ ಪ್ರೋಟೋಕಾಲ್‌ಗಳನ್ನು ಗಮನದಲ್ಲಿಟ್ಟುಕೊಂಡು ಈಕೆಯ ಹುಟ್ಟುಹಬ್ಬವನ್ನು ಮೃಗಾಲಯದಲ್ಲಿ ಆಚರಿಸಲಾಯಿತು.
ಅಂದಹಾಗೆ ಈ ಸುಜಿ ಚಿಂಪಾಂಜಿ. ಮನುಷ್ಯರಂತೆಯೇ ಎಲ್ಲಾ ಗುಣಗಳನ್ನು ಹೋಲುವ ಈ ಚಿಂಪಾಂಜಿಯ 34ನೇ ಹುಟ್ಟುಹಬ್ಬವನ್ನು ಇಂದು ಆಚರಿಸಲಾಗಿದೆ.ಮೃಗಾಲಯದ ಅಡುಗೆಮನೆಯಲ್ಲಿಯೇ ತಯಾರಿಸಿದ ಫ್ರೂಟ್‌ಕೇಕ್ ಸುಜಿಗೆ ನೀಡಲಾಯಿತು. ಇದರ ಜತೆಗೆ, ಹಣ್ಣು ಮತ್ತು ಬ್ರೆಡ್ ತಿನಿಸಲಾಯಿತು.
Today we celebrated suji's birthday n to make her happy gifted new warm blankets & yummy fruit cake 🎂🍰🍫Happy birthday dear suji🦍👏👏💐#insidethezoo#HBDsuji@ForesterSid@pargaien@sobha2000@HarithaHarampic.twitter.com/1sxwVVdtX5
— Nehru Zoo Park (@nehruzoopark1)July 15, 2020

ಈ ಕುರಿತು ಮೃಗಾಲಯದ ಅಧಿಕೃತ ಟ್ವಿಟರ್ ಖಾತೆ ಹುಟ್ಟುಹಬ್ಬ ಆಚರಣೆಗಳ ಚಿತ್ರಗಳನ್ನು ಹಂಚಿಕೊಂಡಿದೆ.
“ಇಂದು ನಾವು ಸುಜಿಯ ಹುಟ್ಟುಹಬ್ಬವನ್ನು ಆಚರಿಸಿದೆವು. ಅವಳಿಗೆ ಇಷ್ಟವಾಗಿರುವ ಹೊಸ ಬೆಚ್ಚಗಿನ ಹೊದಿಕೆಗಳು ಮತ್ತು ರುಚಿಕರವಾದ ಹಣ್ಣು ಕೇಕ್ ನೀಡಿದೆವು ಎಂದಿದ್ದಾರೆ. ಸಹಾರಾ ಗ್ರೂಪ್‌ 2011 ರಲ್ಲಿ ಈ ಚಿಂಪಾಂಜಿಯನ್ನು ಮೃಗಾಲಯಕ್ಕೆ ಉಡುಗೊರೆಯಾಗಿ ನೀಡಿತ್ತು.
ಬಾಲಕಿಯ ರೇಪ್‌ ಮಾಡಿ ಪ್ಲಾಸ್ಟಿಕ್‌ ಡ್ರಮ್‌ನಲ್ಲಿ ಶವ ಎಸೆದ ಅಪ್ರಾಪ್ತರು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:2 × five =
Remember me
