ನವದೆಹಲಿ:ಭಾರತ-ಚೀನಾ ಗಡಿಯಲ್ಲಿ ಬಿಕ್ಕಟ್ಟು ಉಂಟು ಮಾಡಿರುವ ಚೀನಾ ಇದೀಗ ಅನ್ನಕ್ಕಾಗಿ ಭಾರತ ಮೊರೆ ಹೋಗಿದೆ. ವಿದೇಶಗಳಲ್ಲಿ ಅಕ್ಕಿ ಪೂರೈಕೆ ನಿಯಮಗಳು ಕಠಿಣವಾದ ಹಿನ್ನೆಲೆಯಲ್ಲಿ ಭಾರತದಿಂದ ಅಕ್ಕಿ ಆಮದು ಮಾಡಿಕೊಳ್ಳಲು ಚೀನಾ ಮುಂದಾಗಿದೆ.
ಇದನ್ನೂ ಓದಿ:ನಾಲ್ವರು ಮಕ್ಕಳನ್ನು ಮೃತ್ಯು ಕೂಪಕ್ಕೆ ತಳ್ಳಿದ ಅಪ್ಪ! ಮೈ ಮೇಲೆ ಏನೋ ಬಂದಂತಾಗಿ ಕೊಲೆ ಮಾಡಿದ ಎಂದ ಪಾಪಿ
ಕಳೆದ 30 ವರ್ಷಗಳಲ್ಲಿ ಚೀನಾ ಒಂದು ಬಾರಿಯೂ ಭಾರತದಿಂದ ಅಕ್ಕಿ ಆಮದು ಮಾಡಿಕೊಂಡಿಲ್ಲ. ಇಲ್ಲಿನ ಅಕ್ಕಿ ಗುಣಮಟ್ಟ ಕಳಪೆಯಾಗಿದೆ ಎಂದು ಯಾವಾಗಲೂ ದೂರುತ್ತಿತ್ತು. ಇದೀಗ ಇದೇ ದೇಶದ ಅಕ್ಕಿ ಚೀನಾಕ್ಕೆ ಬೇಕಾಗಿದೆ. ನಮ್ಮ ದೇಶದ ಅಕ್ಕಿಯ ಗುಣಮಟ್ಟದ ಪರಿಚಯ ಆದ ನಂತರ ಮುಂದಿನ ವರ್ಷದಿಂದ ಚೀನಾ ಆಮದು ಪ್ರಮಾಣವನ್ನು ಹೆಚ್ಚಿಸಿಕೊಳ್ಳಬಹುದು ಎಂದು ಅಕ್ಕಿ ರಫ್ತುದಾರರ ಸಂಸ್ಥೆಯ ಅಧ್ಯಕ್ಷ ಬಿ.ವಿ. ಕೃಷ್ಣರಾವ್ ಹೇಳಿದ್ದಾರೆ.
ವಿಶ್ವದಲ್ಲಿ ಅಕ್ಕಿ ರಫ್ತು ಮಾಡುವವರಲ್ಲಿ ಭಾರತ ಅತ್ಯಂತ ಪ್ರಮುಖ ಸ್ಥಾನ ಪಡೆದಿದೆ. ಅದೇ ರೀತಿ ಆಮದು ಮಾಡಿಕೊಳ್ಳುವವರಲ್ಲಿ ಚೀನಾ ಅಗ್ರ ಸ್ಥಾನ ಪಡೆದಿದೆ. ಪ್ರತಿ ವರ್ಷ ಸುಮಾರು 4 ಮಿಲಿಯನ್​ ಟನ್​ನಷ್ಟು ಅಕ್ಕಿಯನ್ನು ಚೀನಾ ಆಮದು ಮಾಡಿಕೊಳ್ಳುತ್ತದೆ. ಇಷ್ಟು ವರ್ಷಗಳ ಕಾಲ ಚೀನಾ ಥೈಲ್ಯಾಂಡ್, ವಿಯೆಟ್ನಾಂ, ಮಯನ್ಮಾರ್ ಮತ್ತು ಪಾಕಿಸ್ತಾನ ದೇಶಗಳಿಂದ ಅಕ್ಕಿ ಆಮದು ಮಾಡಿಕೊಳ್ಳುತ್ತಿತ್ತು. ಆದರೆ ಈ ವರ್ಷ ಈ ಎಲ್ಲ ದೇಶಗಳು ರಫ್ತು ಪ್ರಮಾಣ ಕಡಿಮೆ ಮಾಡಿವೆ. ಜತೆಯಲ್ಲಿ ಭಾರತದ ದರಕ್ಕೆ ಹೋಲಿಸಿದರೆ ಪ್ರತಿ ಟನ್‌ಗೆ ಕನಿಷ್ಠ 30 ಡಾಲರ್‌ನಷ್ಟು ಅಧಿಕ ದರ ವಿಧಿಸುತ್ತಿವೆ. ಅದೇ ಕಾರಣದಿಂದ ಚೀನಾ ಭಾರತದಿಂದ ಅಕ್ಕಿ ಖರೀದಿಗೆ ಮುಂದಾಗಿದೆ.
ಇದನ್ನೂ ಓದಿ:ಮಂಡ್ಯದ ಕಬ್ಬಿನ ಗದ್ದೆಯಲ್ಲಿ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನ; ಕತ್ತು ಕೊಯ್ದು ಬರ್ಬರ ಹತ್ಯೆ
ಭಾರತದ ವ್ಯಾಪಾರಿಗಳು ಡಿಸೆಂಬರ್‌ನಿಂದ ಫೆಬ್ರವರಿ ಅವಧಿಯಲ್ಲಿ ಪ್ರತಿ ಟನ್‌ಗೆ 300 ಡಾಲರ್ ವೆಚ್ಚದಲ್ಲಿ 1,00,000 ಟನ್‌ಗಳಷ್ಟು ಅಕ್ಕಿಯನ್ನು ರಫ್ತು ಮಾಡಲು ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​)
ಮಗನಿಗೆ ನೋವಾಗಬಾರದೆಂದು ಕೊಂದೇ ಬಿಟ್ಟ! ಮಗನ ಶವದ ಜತೆಯೇ ರಾತ್ರಿ ಮಲಗಿದ

ಮಕ್ಕಳ ಮೊಬೈಲ್​ನಲ್ಲಿ ಅಮ್ಮನ ರಾಸಲೀಲೆ ಫೋಟೋಸ್​! ದೂರಾದ ಲವರ್​ನಿಂದ ಮಹಿಳೆಗೆ ಕಾದಿತ್ತು ಶಾಕ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 3 =
Remember me
