ನವದೆಹಲಿ:ಇಡೀ ಜಗತ್ತಿಗೆ ಕರೊನಾ ವೈರಾಣುವನ್ನು ಪ್ರಸಾರ ಮಾಡಿದ ಕುಖ್ಯಾತಿಗೆ ಒಳಗಾಗಿದ್ದರೂ ಚೀನಾ ಜಾಗತಿಕವಾಗಿ ತನ್ನ ಆರ್ಥಿಕಶಕ್ತಿಯ ಪ್ರದರ್ಶನಕ್ಕೆ ಮುಂದಾಗಿದೆ. ಮುಂಬೈ ಷೇರುಪೇಟೆಯಲ್ಲಿ ಭಾರಿ ಕುಸಿತ ಕಂಡಿರುವ ಭಾರತೀಯ ಬ್ಯಾಂಕ್​ನ ಷೇರುಗಳನ್ನು ಚೀನಾ ಸರ್ಕಾರದ ನಿಯಂತ್ರಣದ ಬ್ಯಾಂಕ್​ ಖರೀದಿಸುವ ಮೂಲಕ ಆರ್ಥಿಕ ಬಲಾಢ್ಯತೆಯನ್ನು ಪ್ರದರ್ಶಿಸಿದೆ.
ದೇಶಾದ್ಯಂತ ಕರೊನಾ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಮುಂಬೈ ಷೇರುಪೇಟೆಯಲ್ಲಿ ತೀವ್ರ ಅನಿಶ್ಚಿತತೆ ಮೂಡಿದೆ. ಒಂದು ದಿನ ಭಾರಿ ಏರಿಕೆ ಕಂಡರೆ ಉಳಿದ ದಿನಗಳಲ್ಲಿ ಸಹಸ್ರಾರು ಅಂಶಗಳಷ್ಟು ಭಾರಿ ಕುಸಿತ ಕಾಣುತ್ತಿದೆ. ಇದರ ಪರಿಣಾಮ ಹೌಸಿಂಗ್​ ಡೆವೆಲಪ್​ಮೆಂಟ್​ ಫೈನಾನ್ಸ್​ ಕಾರ್ಪೋರೇಷನ್​ನ (ಎಚ್​ಡಿಎಫ್​ಸಿ) ಷೇರುಗಳ ಬೆಲೆ ಪಾತಾಳಕ್ಕಿಳಿದಿದೆ. ಕಳೆದ ಒಂದು ತಿಂಗಳಲ್ಲೇ ಎಚ್​ಡಿಎಫ್​ಸಿ ಷೇರುಗಳ ಬೆಲೆ ಶೇ.25 ಕಡಿಮೆಯಾಗಿದೆ.
ಈ ಅವಕಾಶವನ್ನು ತನ್ನ ಲಾಭಕ್ಕೆ ಬಳಸಿಕೊಂಡಿರುವ ಪೀಪಲ್ಸ್​ ಬ್ಯಾಂಕ್​ ಆಫ್​ ಚೈನಾ (ಪಿಬಿಒಸಿ) ಎಚ್​ಡಿಎಫ್​ಸಿಯ 1.75 ಕೋಟಿ ಷೇರುಗಳನ್ನು ಖರೀದಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಎಚ್​ಡಿಎಫ್​ಸಿಯ ಉಪಾಧ್ಯಕ್ಷ ಮತ್ತು ಸಿಇಒ ಕೇಕಿ ಮಿಸ್ಟ್ರಿ, ಪಿಬಿಒಸಿ ಈ ಮೊದಲು ಎಚ್​ಡಿಎಫ್​ಸಿಯ ಶೇ.0.8 ಷೇರುಗಳನ್ನು ಹೊಂದಿತ್ತು. ಇದೀಗ ಆ ಪ್ರಮಾಣವನ್ನು ಶೇ.1.1ಕ್ಕೆ ಹೆಚ್ಚಿಸಿಕೊಂಡಿದೆ. ಅದರಲ್ಲಿ ವಿಶೇಷತೆ ಏನೂ ಇಲ್ಲ ಎಂದು ಹೇಳಿದ್ದಾರೆ.
ಕ್ವಾರಂಟೈನ್‌ ಅವಧಿ ಮುಗಿಸಿದ ಬಳಿಕ 17 ತಬ್ಲಿಘಿಗಳು ಜೈಲಿಗೆ ರವಾನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + 16 =
Remember me
