ನವದೆಹಲಿ:ತನ್ನ ಆಡಳಿತದ ವ್ಯಾಪ್ತಿಗೆ ಒಳಪಟ್ಟಿರುವ ಹಾಂಕಾಂಗ್​ನಲ್ಲಿ ಕಠೋರವಾದ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು ಜಾರಿಗೊಳಿಸಿದ ನಂತರದಲ್ಲಿ ಚೀನಾ ಹಾಂಕಾಂಗ್​ ಯುವಕರಿಗೆ ರಾಷ್ಟ್ರಭಕ್ತಿಯ ಪಾಠ ಮಾಡಲು ಮುಂದಾಗಿದೆ. ಇದಕ್ಕಾಗಿ ಅದು ರಾಷ್ಟ್ರೀಯ ಭದ್ರತಾ ಶಿಕ್ಷಣ ಎಂಬ ಸಂಸ್ಥೆಯನ್ನು ಶೆಂಜೆನ್​ನಲ್ಲಿ ತೆರೆದಿದ್ದು, ಇಲ್ಲಿ ರಾಷ್ಟ್ರಭಕ್ತಿಯ ಪಾಠ ಮಾಡಲಿದೆ.
ಶಿಕ್ಷಣದ ಮೂಲಕ ಹಾಂಕಾಂಗ್​ ಮತ್ತು ಮಕಾವ್​ನ ಯುವಕರಲ್ಲಿ ಸಂವಿಧಾನಿಕ ಮತ್ತು ರಾಷ್ಟ್ರೀಯ ಜಾಗೃತಿ ಮೂಡಿಸುವುದು ಈ ಸಂಸ್ಥೆಯ ಉದ್ದೇಶವಾಗಿರುವುದಾಗಿ ಚೀನಾ ಹೇಳಿದೆ.
ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿರುವ ಈ ಕೇಂದ್ರದ ಅಧಿಕಾರಿ ಹಾಗೂ ಚೀನಾ ಕಮ್ಯುನಿಸ್ಟ್​ ಪಾರ್ಟಿಯ ಡ್ಯು ಲಿಂಗ್​, ಈ ಕೇಂದ್ರದಲ್ಲಿ ಹಾಂಕಾಂಗ್​ ಮತ್ತು ಮಕಾವ್​ ಯುವಕರಲ್ಲಿ ರಾಷ್ಟ್ರೀಯ ಗುರುತು ಮತ್ತು ದೇಶಭಕ್ತಿಯ ಸ್ಫೂರ್ತಿಯನ್ನು ಸೃಜಿಸಲಾಗುವುದು ಎಂದು ಹೇಳಿದ್ದಾರೆ.
ಇದನ್ನೂ ಓದಿ:1000 ರೂಪಾಯಿಗೆ ಒಂದು ಬೆಡ್, ಕಲ್ಯಾಣ ಕರ್ನಾಟಕಕ್ಕೆ 650 ಬೆಡ್ ರವಾನೆಗೆ ಡಿಕೆಶಿ ಹಸಿರು ನಿಶಾನೆ
ಹಾಂಕಾಂಗ್​ನಲ್ಲಿ ಚೀನಾ ವಿರೋಧಿ ಪ್ರತಿಭಟನೆಗಳು ಹೆಚ್ಚಾಗಲಾರಂಭಿಸಿವೆ. ಇದು ಚೀನಾದ ನಾಯಕತ್ವವನ್ನು ಕಂಗೆಡೆಸಿದೆ. ರಾಷ್ಟ್ರೀಯ ಭದ್ರತಾ ಕುರಿತ ಶಿಕ್ಷಣ ಇಲ್ಲದಿರುವುದೇ ಸರ್ಕಾರಿ ವಿರೋಧಿ ಪ್ರತಿಭಟನೆಗಳು, ದಂಗೆ ಮತ್ತು ಸಾಮಾಜಿಕ ಹಿಂಸಾಚಾರಗಳು ಹೆಚ್ಚಾಗಲು ಕಾರಣ ಎಂಬುದು ಚೀನಾದ ನಂಬಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಅದು ಹಾಂಕಾಂಗ್​ನ ಮುಖ್ಯಕಾರ್ಯಕಾರಿ ಅಧಿಕಾರಿಗೆ ಹಾಂಕಾಂಗ್​ ನಿವಾಸಿಗಳಿಗೆ ಸಾರ್ವಭೌಮತ್ವ ಮತ್ತು ರಾಷ್ಟ್ರೀಯ ಭದ್ರತೆ ಕುರಿತು ಜಾಗೃತಿ ಮೂಡಿಸುವುದನ್ನು ಕಡ್ಡಾಯಗೊಳಿಸಿದೆ.
1949ರಲ್ಲಿ ಅಸ್ತಿತ್ವಕ್ಕೆ ಬಂದಾಗಿನಿಂದ ಚೀನಾ ತನ್ನ ಸಾರ್ವಜನಿಕ ಸಂಸ್ಥೆಗಳ ಮೂಲಕ ಮಾವೋ ತತ್ವಗಳನ್ನೇ ಬೋಧಿಸುತ್ತಿದೆ. 1989ರಲ್ಲಿ ದಮನಕಾರಿ ಕಮ್ಯುನಿಸ್ಟ್ ಆಡಳಿತವನ್ನು ಕೊನೆಗಾಣಿಸಿ, ಸ್ವಾಂತ್ರ್ಯವನ್ನು ನೀಡುವಂತೆ ಆಗ್ರಹಿಸಿ ಟಿಯಾನನ್​ಮೆನ್​ ಸ್ಕ್ವೇರ್​ನಲ್ಲಿ ಭಾರಿ ಪ್ರತಿಭಟನೆಗಳು ನಡೆದ ನಂತರದಲ್ಲಿ ರಾಷ್ಟ್ರಭಕ್ತಿಯನ್ನು ಬೋಧಿಸುವ ಅವಶ್ಯಕತೆಯನ್ನು ಚೀನಾ ಮನಗಂಡಿತು. ಇದಕ್ಕಾಗಿ ಅದು ತನ್ನ ರಾಷ್ಟ್ರದಲ್ಲಿ ರಾಷ್ಟ್ರಭಕ್ತಿಯನ್ನು ಕಲಿಸಲು ಆರಂಭಿಸಿತ್ತು.
ಇದರಿಂದಾಗಿ ದೇಶಕ್ಕೆ ನಿಯತ್ತಾಗಿರುವ ಯುವಪೀಳಿಗೆ ಸೃಷ್ಟಿಯಾಗಿದ್ದಾರೆ. ಇದೀಗ ಇದೇ ಮಾದರಿಯನ್ನು ಹಾಂಕಾಂಗ್​ನಲ್ಲೂ ಪುನರಾವರ್ತಿಸಲು ಚೀನಾ ಮುಂದಾಗಿರುವುದಾಗಿ ಹೇಳಲಾಗಿದೆ.
ಗರ್ಭ ಬೇಡವೆಂದು ಅಮ್ಮ ಅಳವಡಿಸಿಕೊಂಡಿದ್ದ ಕಾಪರ್​ ಟಿ ಸಾಧನವನ್ನು ಕೈಯಲ್ಲೇ ಹಿಡಿದುಕೊಂಡು ಹುಟ್ಟಿತು ಮಗು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + 15 =
Remember me
