ನವದೆಹಲಿ:ಚೀನಾದೊಂದಿಗಿನ ಗಡಿ ಸಂಘರ್ಷ ಮುಂದುವರಿದಿರುವುದರ ನಡುವೆಯೇ 15 ದಿನಗಳ ತೀವ್ರ ಯುದ್ಧಕ್ಕೆ ಸಾಕಾಗುವಷ್ಟು ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡನ್ನು ಸಂಗ್ರಹಿಸಿಕೊಳ್ಳಲು ಮೂರೂ ಪಡೆಗಳಿಗೆ ಸರ್ಕಾರ ಅನುಮತಿ ನೀಡಿದೆ.
ಪ್ರಸಕ್ತ 10 ದಿನಗಳ ಯುದ್ಧಕ್ಕೆ ಅವಶ್ಯವಿರುವಷ್ಟು ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡಿನ ಸಂಗ್ರಹಕ್ಕೆ ಅನುಮತಿ ಇದ್ದು, ಅದನ್ನು 15 ದಿನಗಳ ಮಿತಿಗೆ ಏರಿಸಲು ಅನುಮತಿ ನೀಡಲಾಗಿದೆ. ಒಂದೆಡೆ ಚೀನಾ ಇನ್ನೊಂದೆಡೆ ಪಾಕಿಸ್ತಾನ, ಹೀಗೆ ಎರಡೂ ಕಡೆ ವೈರಿಯನ್ನು ಎದುರಿಸಬೇಕಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಅಗತ್ಯ ಶಸ್ತ್ರಾಸ್ತ್ರ ಸಂಗ್ರಹ ಹಾಗೂ ತುರ್ತು ಹಣಕಾಸು ಅಧಿಕಾರವನ್ನು ವಿಸ್ತರಿಸಲಾಗಿದ್ದು ಅದನ್ನು ಬಳಸಿಕೊಂಡು ಸ್ಥಳೀಯ ಹಾಗೂ ವಿದೇಶಿ ಮೂಲಗಳಿಂದ -50,000 ಕೋಟಿ ರೂ.ಗೂ ಅಧಿಕ ಮೌಲ್ಯದ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ಖರೀದಿಸಲು ರಕ್ಷಣಾ ಪಡೆಗಳು ಚಿಂತನೆ ನಡೆಸಿವೆ.
ಹಲವು ವರ್ಷಗಳ ಕ್ರಮ:ರಕ್ಷಣಾ ಪಡೆಗಳಿಗೆ ಈ ಮೊದಲು 40 ದಿನಗಳ ಯುದ್ಧಕ್ಕೆ ಅಗತ್ಯವಿರುವಷ್ಟು ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡು ಮತ್ತಿತರ ಸಾಧನ ಸಲಕರಣೆಗಳನ್ನು ಖರೀದಿಸುವ ಅಧಿಕಾರ ನೀಡಲಾಗಿತ್ತು. ನಂತರ ಅದನ್ನು 10 ದಿನದ ಮಿತಿಗೆ ಇಳಿಸಲಾಗಿತ್ತು. ಅವುಗಳ ದಾಸ್ತಾನು ಸಮಸ್ಯೆ ಮತ್ತು ಬದಲಾದ ಯುದ್ಧ ತಂತ್ರಗಳ ಕಾರಣ ಮಿತಿಯನ್ನು ಇಳಿಸಲಾಗಿತ್ತು.
ಜಮ್ಮು- ಕಾಶ್ಮೀರದ ಉರಿ ದಾಳಿಯ ನಂತರ ದೇಶದ ಸಮರ ಅವಶ್ಯಕತೆಯ ದಾಸ್ತಾನುಗಳು ಕಡಿಮೆಯಿರುವ ಬಗ್ಗೆ ಮನವರಿಕೆಯಾಗಿತ್ತು. ಹೀಗಾಗಿ, ಹಿಂದಿನ ರಕ್ಷಣಾ ಸಚಿವ ಮನೋಹರ್ ಪರಿಕರ್ ನೇತೃತ್ವದ ಸಮಿತಿ ಮೂರೂ ಪಡೆಗಳ ಉಪಮುಖ್ಯಸ್ಥರ ತುರ್ತು ಹಣಕಾಸು ಅಧಿಕಾರವನ್ನು ತಲಾ -100 ಕೋಟಿ ರೂ.ನಿಂದ 500 ಕೋಟಿಗೆ ಏರಿಸಿತ್ತು. ಯುದ್ಧದಲ್ಲಿ ಅಗತ್ಯವೆಂದು ಕಾಣುವ ಯಾವುದೇ ಸಾಧನ ಸಲಕರಣೆಗಳ ಖರೀದಿಗೆ ಇನ್ನೂ – 300 ಕೋಟಿ ರೂ. ವೆಚ್ಚ ಮಾಡುವ ಅಧಿಕಾರವನ್ನೂ ಮೂರು ಪಡೆಗೆ ನೀಡಲಾಗಿತ್ತು.
ಏನೇನು ಖರೀದಿ?:ಸಮರಾಂಗಣದಲ್ಲಿ ಇಬ್ಬರು ಶತ್ರುಗಳನ್ನು ಎದುರಿಸುವಲ್ಲಿ ಯಾವುದೇ ಕೊರತೆ ಆಗದಂತೆ ಸಾಕಷ್ಟು ಸಂಖ್ಯೆಯ ಕ್ಷಿಪಣಿಗಳು, ಟ್ಯಾಂಕ್ ಮತ್ತು ಪದಾತಿ ದಳಗಳಿಗೆ ಮದ್ದುಗುಂಡುಗಳನ್ನು ಖರೀದಿಸಲಾಗಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.
ಪೂರ್ವ ಲಡಾಖ್​ನಲ್ಲಿ ಏಳು ತಿಂಗಳಿಂದ ಗಡಿ ಬಿಕ್ಕಟ್ಟು ಇದ್ದರೂ ರಾಷ್ಟ್ರೀಯ ಭದ್ರತೆ ವಿಷಯದಲ್ಲಿ ಭಾರತ ವಿಶ್ವಾಸಯುತವಾಗಿದೆ. ಲಡಾಖ್​ನಲ್ಲಿ ಜರುಗಿರುವ ಘಟನೆಗಳು ಭಾರತೀಯರ ಮೇಲೆ ಗಣನೀಯ ಪರಿಣಾಮ ಬೀರಿದೆ. ಆದರೂ ಚೀನಾ ಬಯಸಿದ್ದಂತೆ ಅಲ್ಲಿ ಆಗಿಲ್ಲ.| ಎಸ್. ಜೈಶಂಕರ್ವಿದೇಶಾಂಗ ಸಚಿವ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × two =
Remember me
