ಬೀಜಿಂಗ್:ಭಾರತಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಕಿರಿಕಿರಿ ಮಾಡುತ್ತಿರುವ ಚೀನಾ, ಇದೀಗ ಬ್ರಹ್ಮಪುತ್ರಾ ನದಿಗೆ ಟಿಬೆಟ್​ನಲ್ಲಿ ಅಣೆಕಟ್ಟೆ ನಿರ್ವಿುಸಲು ಸನ್ನದ್ಧವಾಗಿದೆ. ಅರುಣಾಚಲ ಪ್ರದೇಶ ಗಡಿಗೆ ಅತಿ ಸಮೀಪದಲ್ಲಿ ನಿರ್ವಣವಾಗಲಿರುವ ಈ ಯೋಜನೆ ಒಳಗೊಂಡ 14ನೇ ಪಂಚವಾರ್ಷಿಕ ಯೋಜನೆಗೆ ಚೀನಾದ ಸಂಸತ್ತು ಗುರುವಾರ ಅನುಮೋದನೆ ನೀಡಿದೆ.
ಈ ಯೋಜನೆಗೆ ಭಾರತ ಈಗಾಗಲೇ ಕಳವಳ ವ್ಯಕ್ತಪಡಿಸಿ, ಪ್ರತಿಭಟನೆಯನ್ನೂ ದಾಖಲಿಸಿದೆ. 2021-2025ನೇ ಸಾಲಿನ 14ನೇ ಪಂಚವಾರ್ಷಿಕ ಯೋಜನೆ ಮಾತ್ರವಲ್ಲದೆ 2035ರ ವರೆಗಿನ ದೇಶದ ಅಭಿವೃದ್ಧಿಯ ಹಲವು ದೀರ್ಘಕಾಲೀನ ಕಾರ್ಯಕ್ರಮಗಳಿಗೂ ಚೀನಾ ಸಂಸತ್ ಅನುಮೋದನೆ ನೀಡಿದೆ.
ಗುರುವಾರ ಮುಕ್ತಾಯವಾದ ಆರು ದಿನಗಳ ಅಧಿವೇಶನದಲ್ಲಿ ಅಧ್ಯಕ್ಷ ಕ್ಸಿ ಜಿನ್​ಪಿಂಗ್, ಪ್ರಧಾನಿ ಲಿ ಕೆಕ್ಸಿಯಾಂಗ್ ಮತ್ತಿತರ ಹಿರಿಯ ಮುಖಂಡರು ಭಾಗವಹಿಸಿದ್ದರು. ಚೀನಾದ ಬೆಳವಣಿಗೆಯ ವೇಗ ಹೆಚ್ಚಿಸಲು ಅಗತ್ಯವಾದ 60 ಯೋಜನೆಗಳಿಗೆ ಚೀನಾ ಕಮ್ಯುನಿಸ್ಟ್ ಪಕ್ಷ (ಸಿಪಿಸಿ) ಕಳೆದ ವರ್ಷ ಅನುಮೋದನೆ ನೀಡಿದ್ದು ಈಗ ಸಂಸತ್ತು ಅಂಗೀಕಾರ ಮುದ್ರೆಯೊತ್ತಿದೆ.
ಬಾಂಗ್ಲಾ ಕಳವಳ: ಬ್ರಹ್ಮಪುತ್ರಾ ಅಣೆಕಟ್ಟೆ ನಿರ್ವಿುಸುವ ಚೀನಾ ಉದ್ದೇಶಕ್ಕೆ ಭಾರತ ಮಾತ್ರವಲ್ಲ ಬಾಂಗ್ಲಾದೇಶ ಕೂಡ ಕಳವಳ ವ್ಯಕ್ತಪಡಿಸಿದೆ. ಆದರೆ, ಎರಡೂ ದೇಶಗಳ ಆಸಕ್ತಿಗಳನ್ನು ಗಮನದಲ್ಲಿಡಲಾಗುವುದು ಎಂದು ಚೀನಾ ಹೇಳಿದೆ.
ಹಕ್ಕು ಸಾಧನೆ:ನದಿ ಪಾತ್ರದ ಕೆಳಗಿನ ದೇಶವಾಗಿರುವುದರಿಂದ ನೀರಿನ ಮೇಲಿನ ಬಳಕೆಯ ಹಕ್ಕನ್ನು ಭಾರತ ಬಲವಾಗಿ ಪ್ರತಿಪಾದಿಸಿದೆ. ತನ್ನ ನಿಲುವು ಮತ್ತು ಕಳವಳವನ್ನು ಚೀನಿ ಅಧಿಕಾರಿಗಳಿಗೆ ನಿರಂತರವಾಗಿ ತಿಳಿಸುತ್ತಾ ಬಂದಿದೆ. ನದಿ ಪಾತ್ರದ ಮೇಲ್ದಂಡೆಯ ಚಟುವಟಿಕೆಗಳಿಂದ ಕೆಳಹರಿವಿನ ದೇಶಗಳಿಗೆ ಯಾವುದೇ ಹಾನಿಯಾಗಬಾರದು ಎಂದು ಆಗ್ರಹಿಸಿದೆ. ಈ ವರ್ಷವೇ ಆರಂಭ: ಅಣೆಕಟ್ಟೆ ನಿರ್ಮಾಣ ಕಾರ್ಯವನ್ನು ಈ ವರ್ಷವೇ ಆರಂಭಿಸುವಂತೆ ಟಿಬೆಟ್ ಸ್ವಾಯತ್ತ ಪ್ರದೇಶದ (ಟಿಎಆರ್) ಅಧಿಕಾರಿಗಳಿಗೆ ಅಧಿವೇಶನದಲ್ಲಿ ನಿರ್ದೇಶಿಸಲಾಗಿದೆ ಎಂದು ಟಿಎಆರ್​ನ ಕಮ್ಯೂನಿಸ್ಟ್ ಪಕ್ಷದ ನಾಯಕ ಚೆ ಡಲ್ಹಾ ಹೇಳಿದ್ದಾರೆ. ಸಮಗ್ರ ಯೋಜನೆ ಮತ್ತು ಪರಿಸರದ ಮೇಲಾಗುವ ಪರಿಣಾಮಗಳ ಕುರಿತ ವರದಿಯನ್ನು ಆದಷ್ಟು ಶೀಘ್ರ ಅನುಮೋದಿಸುವಂತೆ ಸೂಚಿಸಲಾಗಿದೆ.
ಶ್ರದ್ಧಾ ಕಪೂರ್​ ಹಾಕಿರುವ ಈ ಬಿಕಿನಿ ರೇಟ್ ಕೇಳಿದ್ರೆ ನೀವು ಹೌಹಾರೋದು ಗ್ಯಾರಂಟಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + four =
Remember me
