ಟೋಕಿಯೊ:ಚೀನಾದ ಕ್ಸಿನ್ಜಿಯಾಂಗ್ ಪ್ರಾಂತ್ಯದಲ್ಲಿರುವ ಉಯ್ಘರ್ ಮುಸ್ಲಿಮರ ಮೇಲೆ ದೌರ್ಜನ್ಯ ಎಸಗುತ್ತಿರುವ ಚೀನಾ ಬಗ್ಗೆ ಜಾಗತಿಕ ಮಟ್ಟದಲ್ಲಿ ನಕಾರಾತ್ಮಕ ಅಭಿಪ್ರಾಯ ಮೂಡಿರುವ ಬೆನ್ನಲ್ಲೇ ಇದೀಗ ಚೀನಾದಲ್ಲಿ ಕ್ರೈಸ್ತ ಸಮುದಾಯದವರ ಮೇಲೆ ದಬ್ಬಾಳಿಕೆ ಶುರುವಾಗಿದೆ.
ತನ್ನ ದೇಶದಲ್ಲಿ ಪಾಲಿಸಲಾಗುವ ಎಲ್ಲಾ ಧಾರ್ಮಿಕ ಗ್ರಂಥಗಳನ್ನು ಸಮಾಜವಾದಿ ತತ್ವಗಳನ್ನು ಪ್ರತಿಬಿಂಬಿಸುವಂತೆ ತಿದ್ದುಪಡಿ ಮಾಡಲು ಕಳೆದ ವರ್ಷ ಚೀನಾ ಆದೇಶ ಹೊರಡಿಸಿತ್ತು. ತಿದ್ದುಪಡಿಯಾದ ಧಾರ್ಮಿಕ ಗ್ರಂಥಗಳಲ್ಲಿ ಸರ್ಕಾರದ ವಿರುದ್ಧದ ಯಾವುದೇ ತತ್ವಗಳೂ ಇರಬಾರದೆಂದು ಕೂಡ ನಿರ್ದೇಶಿಸಿತ್ತು.
ಅದರ ಬೆನ್ನಲ್ಲೇ ಇದೀಗ, ಅಲ್ಲಿನ ಕ್ರೈಸ್ತರ ಮನೆಯಲ್ಲಿ ಇರುವ ಏಸುವಿನ ಶಿಲುಬೆ ಫೋಟೋಗಳನ್ನು ತೆಗೆದು ಕಮ್ಯುನಿಸ್ಟ್ ನಾಯಕರ ಫೋಟೊಗಳನ್ನು ಹಾಕುವಂತೆ ಅಧಿಕಾರಿಗಳು ಒತ್ತಡ ಹೇರುತ್ತಿದ್ದು, ಇದು ಕ್ರೈಸ್ತರನ್ನು ಆತಂಕ ಹಾಗೂ ಆಕ್ರೋಶ ತರಿಸಿದೆ.
ಇದನ್ನೂ ಓದಿ:ದುಬೆ ಎನ್‌ಕೌಂಟರ್‌ ತನಿಖೆಗೆ ಜಡ್ಜ್‌ ನೇಮಕ: ಹಲವು ಸರ್ಕಾರಗಳು ಸಂಕಷ್ಟದಲ್ಲಿ!
ಚೀನಾದಲ್ಲಿ ಧಾರ್ಮಿಕ ಮತಗಳು ಅಲ್ಲಿನ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷ ತನ್ನ ಸಿದ್ಧಾಂತಗಳಿಗೆ ಬದ್ಧವಾಗಿರುವಂತೆ ಮಾಡುವ ಯತ್ನ ಇದಾಗಿದೆ. ಧಾರ್ಮಿಕ ಮತಾನುಯಾಯಿಗಳ ಮೇಲೆ ಒತ್ತಡ ಹೇರಿಕೆ ಜೋರಾಗಿಯೇ ನಡೆಯುತ್ತಿದೆ.
ಅನಝುಯಿ, ಜಿಯಾಂಗ್‌ಸು, ಹೆಬೀ ಮತ್ತು ಝೆಜಿಯಾಂಗ್ ಪ್ರದೇಶಗಳಲ್ಲಿ ಕ್ರೈಸ್ತರಿಗೆ ಜೀಸಸ್ ಹಾಗೂ ಶಿಲುಬೆಯ ಪ್ರತಿಮೆಗಳನ್ನು ತೆಗೆದುಹಾಕಿ ಅಲ್ಲಿ ಚೀನಾದ ಕಮ್ಯುನಿಸ್ಟ್ ನಾಯಕರ ಫೋಟೊಗಳನ್ನು ಹಾಕಬೇಕೆಂಬ ಕಟ್ಟಿನಿಟ್ಟಿನ ಆದೇಶವನ್ನು ಜಾರಿ ಮಾಡಲಾಗಿದೆ. ಅಷ್ಟೇ ಅಲ್ಲದೇ ಚೀನಾದ ಅಧಿಕಾರಿಗಳು ಚರ್ಚ್‌ಗಳಿಗೆ ತೆರಳಿ ಶಿಲುಬೆಗಳನ್ನು ಏಸುಕ್ರಿಸ್ತನ ಪ್ರತಿಮೆಗಳನ್ನು ತೆರವುಗೊಳಿಸುವ ಕೆಲಸ ಮಾಡಿದ್ದಾರೆ.
ಶಿವಾನ್ ಕ್ರೈಸ್ಟ್ ಸಂಸ್ಥೆ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ಶಿಲುಬೆ, ಕ್ರಿಸ್ತನ ಪ್ರತಿಮೆಯನ್ನು ಧ್ವಂಸಗೊಳಿಸಲು ಕೇನ್ ನಲ್ಲಿ ಬಂದಿದ್ದ ಅಧಿಕಾರಿಗಳ ನಡೆಯನ್ನು ತೀವ್ರವಾಗಿ ವಿರೋಧಿಸಿದೆ.
‘ಮೂಳೆ ನಡುಗಿಸುವ ಚಳಿ’ ಎದುರಿಸಲು ಲಡಾಖ್‌ನಲ್ಲಿ ಸೇನೆಯ ತಯಾರಿ ನೋಡಿ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:20 + six =
Remember me
