ನವದೆಹಲಿ:ಕರೊನಾ ವೈರಸ್ ಪೀಡಿತ ವುಹಾನ್​ನಲ್ಲಿ ಸಿಲುಕಿರುವ ಭಾರತೀಯರನ್ನು ವಾಪಸ್ ಕರೆತರಲು ಚೀನಾ ಅಡ್ಡಗಾಲು ಹಾಕುತ್ತಿದೆ ಎಂದು ಭಾರತ ಆರೋಪಿಸಿದೆ. ವೈದ್ಯಕೀಯ ಸಾಮಗ್ರಿಗಳನ್ನು ಹೊತ್ತ ವಾಯುಪಡೆಯ ವಿಶೇಷ ವಿಮಾನ ವುಹಾನ್​ಗೆ ತೆರಳಲು ಹಾಗೂ ಅದು ವಾಪಸ್ ಬರುವಾಗ ಉಳಿದಿರುವ ಭಾರತೀಯರನ್ನು ಕರೆತರಲು ನಿರ್ಧರಿಸಲಾಗಿತ್ತು. ಆದರೆ, ಚೀನಾ ಉದ್ದೇಶಪೂರ್ವಕವಾಗಿ ಅನುಮತಿ ನೀಡಲು ವಿಳಂಬ ಮಾಡುತ್ತಿದೆ ಎಂದು ಮೂಲಗಳು ಹೇಳಿವೆ. ಆದರೆ ಈ ಆರೋಪವನ್ನು ಚೀನಾ ತಿರಸ್ಕರಿಸಿದೆ. ಫ್ರಾನ್ಸ್ ಸಹಿತ ಅನೇಕ ದೇಶಗಳ ವಿಮಾನಗಳು ಈಗಲೂ ಸಂಚರಿಸುತ್ತಿವೆ. ಆದರೆ ಭಾರತದ ಪರಿಹಾರ ವಿಮಾನಕ್ಕೆ ಯಾಕೆ ಅಡ್ಡಿಪಡಿಸುತ್ತಿದೆ ಎಂದು ಅಧಿಕಾರಿಗಳು ಪ್ರಶ್ನಿಸಿದ್ದಾರೆ.
ಅತಿ ದೊಡ್ಡ ವಿಮಾನ: ಭಾರತೀಯ ವಾಯುಪಡೆಯ ಅತಿ ದೊಡ್ಡ ವಿಮಾನ ಸಿ-17 ಗ್ಲೋಬ್​ವಾಸ್ಟರ್​ನಲ್ಲಿ ಪರಿಹಾರ ಸಾಮಗ್ರಿಗಳನ್ನು ಕಳಿಸಲಾಗುತ್ತದೆಂದು ಭಾರತ ಫೆ. 17ರಂದು ಪ್ರಕಟಿಸಿತ್ತು. ಅದು ವುಹಾನ್​ನಿಂದ ವಾಪಸ್ ಬರುವಾಗ ಅಲ್ಲಿ ಇನ್ನೂ ಉಳಿದುಕೊಂಡಿರುವ ಭಾರತೀಯರನ್ನು ವಾಪಸ್ ಕರೆದುಕೊಂಡು ಬರುವುದು ಅದರ ಉದ್ದೇಶವಾಗಿತ್ತು. ಈ ತಿಂಗಳ ಆರಂಭದಲ್ಲಿ ಏರ್ ಇಂಡಿಯಾದ ಎರಡು ವಿಶೇಷ ವಿಮಾನಗಳ ಮೂಲಕ 647 ಭಾರತೀಯರು ಮತ್ತು ಮಾಲ್ದೀವ್ಸ್​ನ ಏಳು ಜನರನ್ನು ಭಾರತ ಕರೆ ತಂದಿತ್ತು.
ಹಡಗು ಪ್ರಯಾಣಿಕರ ಪರೀಕ್ಷೆ :ಪ್ರಯಾಣಿಕರ ಹಡಗು ಡೈಮಂಡ್ ಪ್ರಿ್ರ್ಸಸ್​ನಲ್ಲಿ ಇನ್ನೂ ಹಲವಾರು ಭಾರತೀಯರಿದ್ದು, ಅವರನ್ನು ಸದ್ಯದಲ್ಲೇ ತಪಾಸಣೆಗೆ ಒಳಪಡಿಸಲಾಗುತ್ತದೆ ಎಂದು ಭಾರತೀಯ ದೂತಾವಾಸದ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಹಡಗಿನಲ್ಲಿದ್ದ ಎಲ್ಲ ಆರೋಗ್ಯವಂತ ಪ್ರಯಾಣಿಕರನ್ನು ನೌಕೆಯಿಂದ ಹೊರಗೆ ಕರೆ ತರಲಾಗಿದೆ. ಸೋಂಕಿಲ್ಲದ ಪ್ರಯಾಣಿಕರ ಕೊನೆಯ ತಂಡ ಶುಕ್ರವಾರ ಹೊರಗೆ ಬಂದಿದೆ. ಹಡಗಿನಲ್ಲಿ ಒಟ್ಟು 3,711 ಜನರಿದ್ದರು. ಅವರಲ್ಲಿ ಭಾರತದ 132 ಸಿಬ್ಬಂದಿ ಹಾಗೂ ಆರು ಪ್ರಯಾಣಿಕರಿದ್ದರು. ಈಗ ಹಡಗಿನಲ್ಲಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಇದ್ದಾರೆ ಎಂದು ಜಪಾನ್ ಹೇಳಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × three =
Remember me
