ನವದೆಹಲಿ:ಕರೊನಾ ಅಟ್ಟಹಾಸ ಮಿತಿ ಮೀರುತ್ತಿದೆ. ಎಲ್ಲೋ ಒಂದೆಡೆ ರೋಗಿಗಳು ಗುಣಮುಖರಾಗುತ್ತಿರುವ ಪ್ರಸಂಗಗಳು ಆಶಾದಾಯಕ ಬೆಳವಣಿಗೆ ಎನಿಸುತ್ತಿದ್ದರೂ ಅದರ ದುಪ್ಪಟ್ಟು ಪ್ರಮಾಣದಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇದನ್ನು ನಿರ್ನಾಮ ಮಾಡುವ ಉದ್ದೇಶದಿಂದ ಭಾರತಕ್ಕೆ ಚೀನಾದಿಂದ ವೈದ್ಯಕಿಯ ಕಿಟ್​ಗಳು ಆಮದಾಗುತ್ತಿವೆ.
ಮೂಲಗಳ ಪ್ರಕಾರ ಸದ್ಯಕ್ಕೆ ಈ ಮಹಾಮಾರಿ ಕರೊನಾ ಹತ್ತಿಕ್ಕುವ ನಿಟ್ಟಿನಲ್ಲಿ ಚೀನಾದಿಂದ 6.5 ಲಕ್ಷ ವೈದ್ಯಕಿಯ ಕಿಟ್​ಗಳು ಭಾರತಕ್ಕೆ ಆಮದಾಗುತ್ತಿವೆ. ಚೀನಾದಿಂದ ಬುಧವಾರ ತಡರಾತ್ರಿ ವೈಯಕ್ತಿಕ ರಕ್ಷಣಾ ಸಾಮಗ್ರಿ (ಪಿಪಿಇ) ಕಿಟ್​ಗಳು ಆಸ್ಸಾಂಗೆ ಪೂರೈಕೆಯಾಗಿವೆ.
ಮೂಲಗಳ ಪ್ರಕಾರ ಸೋಂಕು ಹರಡುವಿಕೆಯನ್ನು ತಡೆಗಟ್ಟಲು 5.5 ಲಕ್ಷ ಪ್ರತಿಕಾಯ ಪರೀಕ್ಷಾ ಕಿಟ್​ ಹಾಗೂ 1 ಲಕ್ಷ ಆರ್​ಎನ್​ಎ ಹೊರತೆಗೆಯುವ ಕಿಟ್​ಗಳು ಭಾರತಕ್ಕೆ ಗುರುವಾರ ಆಗಮಿಸಲಿವೆ.
ವೈದ್ಯಕಿಯ ಉಪಕರಣಗಳನ್ನು ಭಾರತಕ್ಕೆ ಕಳುಹಿಸುವಲ್ಲಿ ಬೀಜಿಂಗ್​ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಪ್ರಮುಖ ಪಾತ್ರ ವಹಿಸಿದೆ. 3 ಲಕ್ಷ ಪ್ರತಿಕಾಯ ಪರೀಕ್ಷಾ ಕಿಟ್​ಗಳು ಗುವಾಂಗ್​ಜೌ ವೊಂಡ್​ಪೊದಿಂದ, 2.5 ಲಕ್ಷ ಕಿಟ್​ಗಳು ಝುಹೈ ಲಿವ್​ಜಾನ್​ನಿಂದ ಹಾಗೂ 1 ಲಕ್ಷ ಆರ್​ಎನ್​ಎ ಹೊರತೆಗೆಯುವ ಕಿಟ್​ಗಳನ್ನು ಎಂಜಿಐ ಶೇನ್​ಜೆನ್​ನಿಂದ ಬುಧವಾರ ತಡರಾತ್ರಿ ಕಳುಹಿಸಲಾಗಿದ್ದು, ಈ ಎಲ್ಲ ಕಿಟ್​ಗಳು ಗುರುವಾರ ಭಾರತಕ್ಕೆ ಬರಲಿವೆ ಎಂದು ಅಲ್ಲಿನ ಪ್ರತ್ಯಕ್ಷದಶಿರ್ಗಳು ಮಾಹಿತಿ ಒದಗಿಸಿದ್ದಾರೆ.
ಚೀನಾದ ಭಾರತದ ರಾಯಭಾರಿ ವಿಕ್ರಮ್​ ಮಿಸ್ರಿ ಕಳೆದ ಮಂಗಳವಾರ ವರದಿಗಾರರೊಂದಿಗೆ ಮಾತನಾಡಿ, “ಕೋವಿಡ್​ &19 ಗೆ ಸಂಬಂಧಿಸಿದಂತೆ ಭಾರತಕ್ಕೆ ಗುಣಮಟ್ಟದ ವೈದ್ಯಕಿಯ ಸಾಮಗ್ರಿಗಳ ಪೂರೈಕೆಯನ್ನು ಸುಗಮಗೊಳಿಸುವುದು ಹಾಗೂ ಔಷಧಿ ಉತ್ಪಾದನೆ ಪೂರೈಕೆಯ ಸರಪಳಿಯನ್ನು ಮುಕ್ತವಾಗಿಡುವುದು ದ್ವಿಪಯ ಸಂಬಂಧಗಳಿಗೆ ಚೀನಾದ ಉತ್ತಮ ಸಂಕೇತವಾಗಿದೆ’ ಎಂದು ತಿಳಿಸಿದ್ದರು.
ಅಂದಾಜು 15 ದಶಲಕ್ಷ ಪಿಪಿಇ ಕಿಟ್​ಗಳ (ನಿಲುವಂಗಿ, ಮಾಸ್ಕ್​ಗಳು, ಕೈಗವಸುಗಳು, ಕನ್ನಡಕಗಳನ್ನೊಳಗೊಂಡ ) ಪೂರೈಕೆಗಾಗಿ ಚೀನಾದ ಕಂಪನಿಗಳು ಒಪ್ಪಂದ ಮಾಡಿಕೊಂಡಿವೆ. ಕೋವಿಡ್​&19 ನಿಯಂತ್ರಣಕ್ಕೆ 1.5 ದಶಲಕ್ಷ ಪ್ರ ಪರೀಕ್ಷಾ ಕಿಟ್​ಗಳಿಗೆ ಭಾರತ ಸರ್ಕಾರ ಮತ್ತು ಖಾಸಗಿ ಕಂಪನಿಗಳು ಒಪ್ಪಂದ ಮಾಡಿಕೊಂಡಿವೆ ಎಂದು ಅವರು ತಿಳಿಸಿದ್ದರು.
ವೆಂಟಿಲೇಟರ್​, ರಕ್ಷಣಾತ್ಮಕ ಉಡುಪು, ಚೀನಾ ಕಂಪನಿಗಳಿಂದ ಪರೀಕ್ಷಾ ಕಿಟ್​ಗಳಂತಹ ಗುಣಮಟ್ಟದ ವೈದ್ಯಕಿಯ ಉಪಕರಣಗಳನ್ನು ಶ್ರೀ ರ್ತುಗೊಳಿಸುವಂತೆ ಭಾರತ ಮನವಿ ಮಾಡಿಕೊಂಡಿದೆ ಎಂದು ಅವರು ತಿಳಿಸಿದ್ದರು.(ಏಜೆನ್ಸೀಸ್​)
ಕರೊನಾ ಪ್ರತ್ಯೇಕ ವಾರ್ಡ್​ನಲ್ಲಿ ವೈದ್ಯನಿಂದ ಮಹಿಳೆ ಮೇಲೆ ಅತ್ಯಾಚಾರ?: ವೈರಲ್​ ಫೋಟೋ ಹಿಂದಿನ ಸತ್ಯಾಂಶವೇ ಬೇರೆ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:five × 3 =
Remember me
