ನವದೆಹಲಿ:ಭಾರತ ಮತ್ತು ಚೀನಾಕ್ಕೆ ಪರಸ್ಪರರಿಂದ ಯಾವುದೇ ಅಪಾಯವಿಲ್ಲ. ಉಭಯ ರಾಷ್ಟ್ರಗಳಿಗೆ ಯುದ್ಧವೂ ಇಷ್ಟವಿಲ್ಲ ಎಂದು ಭಾರತದಲ್ಲಿನ ಚೀನಾದ ರಾಯಭಾರಿ ಸನ್​ ವಿಡಾಂಗ್​ ಹೇಳಿದ್ದಾರೆ. ಲಡಾಖ್​ ವಲಯದಲ್ಲಿನ ವಾಸ್ತವ ಗಡಿರೇಖೆಯ ಬಳಿ ಉಭಯ ರಾಷ್ಟ್ರಗಳ ನಡುವೆ ಉಂಟಾಗಿರುವ ಉದ್ವಿಗ್ನತೆ ಹಿನ್ನೆಲೆಯಲ್ಲಿ ಅವರು ಮಂಗಳವಾರ ಈ ವಿಷಯವನ್ನು ತಿಳಿಸಿದ್ದು, ಕೆಲ ವಿಷಯಗಳ ಬಗ್ಗೆ ಉಭಯ ರಾಷ್ಟ್ರಗಳಿಗೂ ಇರುವ ವ್ಯಾತ್ಯಾಸಗಳು ಎರಡೂ ರಾಷ್ಟ್ರಗಳ ಸಂಬಂಧವನ್ನು ಹದಗೆಡಿಸುವಂತೆ ಆಗಬಾರದು. ಮಾತುಕತೆ ಮೂಲಕ ಆ ವ್ಯತ್ಯಾಸಗಳನ್ನು ಸರಿಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಭಾರತ ಮತ್ತು ಚೀನಾಗಳೆರಡೂ ಕೋವಿಡ್​-19 ಪಿಡುಗಿನ ವಿರುದ್ಧ ಭಾರಿ ಹೋರಾಟ ಸಂಘಟಿಸಿವೆ. ಇದರ ವಿರುದ್ಧ ಹೋರಾಡುತ್ತಲೇ ಉಭಯ ರಾಷ್ಟ್ರಗಳ ನಡುವಿನ ಸಂಬಂಧವನ್ನು ಸುಧಾರಿಸಿಕೊಂಡು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳುವ ಅವಶ್ಯಕತೆ ಇದೆ. ಚೀನಾ ಮತ್ತು ಭಾರತ ನಡುವಿನ ಉತ್ತಮ ಸಂಬಂಧದ ಮಹತ್ವವನ್ನು ನಮ್ಮ ಯುವಜನರು ಅರಿತುಕೊಳ್ಳಬೇಕು. ಉಭಯ ರಾಷ್ಟ್ರಗಳಲ್ಲೂ ಯುವಜನತೆಗೆ ಅವಕಾಶಗಳು ಹೆಚ್ಚಾಗಿವೆ. ಆದರೆ ಅವುಗಳೆಂದೂ ಪರಸ್ಪರರ ಪಾಲಿಗೆ ಭೀತಿಯಾಗಿಲ್ಲ ಎಂದು ಹೇಳಿದ್ದಾರೆ.
ಭಾರತದ ವಿದೇಶಾಂಗ ಸಚಿವಾಲಯ ಕೂಡ ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ಸೌಹಾರ್ದ ವಾತಾವರಣವನ್ನು ಹೊಂದುವುದು ಭಾರತದ ಬಯಕೆಯಾಗಿದೆ. ಭಾರತ-ಚೀನಾ ಸಂಬಂಧ ಸುಧಾರಣೆಯಲ್ಲಿ ಈ ವಿಷಯ ಹೆಚ್ಚಿನ ಮಹತ್ವ ಪಡೆದುಕೊಳ್ಳುತ್ತದೆ ಎಂದು ಹೇಳಿತ್ತು. ಇದರ ಬೆನ್ನಲ್ಲೇ ಭಾರತದಲ್ಲಿನ ಚೀನಾ ರಾಯಭಾರಿ ಕೂಡ ಶಾಂತಿ ಮಂತ್ರವನ್ನು ಪಠಿಸಿದ್ದಾರೆ.
ಆಲೂಗಡ್ಡೆ ಪಲ್ಯ ತಿನ್ನಲು ಒಲ್ಲೆ ಎಂದ ಪತಿರಾಯ; ಬಟ್ಟೆ ಒಗೆಯುವ ಕೋಲಿನಲ್ಲಿ ಹಲ್ಲೆ ಮಾಡಿದಳು ಮಹಾಸತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 1 =
Remember me
