ನವದೆಹಲಿ:ಲಡಾಖ್​ನ ಪ್ಯಾಂಗಾಂಗ್ ತ್ಸೊ ಸರೋವರದ ದಕ್ಷಿಣ ದಂಡೆಯಲ್ಲಿ ಅತಿಕ್ರಮಣಕ್ಕೆ ಸಂಚು ರೂಪಿಸಿ ಭಾರತದೊಂದಿಗೆ ಗಡಿ ತಕರಾರು ತೆಗೆದಿರುವ ಚೀನಾ ಮತ್ತೊಂದೆಡೆ ಹಿಂದು ಮಹಾಸಾಗರದ ವ್ಯಾಪ್ತಿಯಲ್ಲಿ ಸದ್ದಿಲ್ಲದಂತೆಯೇ ತನ್ನ ಬೇರನ್ನು ಬಲಪಡಿಸಿಕೊಳ್ಳಲು ಮುಂದಾಗಿರುವ ಆತಂಕಕಾರಿ ಮಾಹಿತಿ ಸ್ಪೋಟಗೊಂಡಿದೆ.
ಇಂಡೋ-ಪೆಸಿಫಿಕ್ ವ್ಯಾಪ್ತಿಯಲ್ಲಿ ತನ್ನ ಕಾರ್ಯತಂತ್ರದ ವ್ಯಾಪ್ತಿ ಹೆಚ್ಚಿಸಲು ಉದ್ದೇಶಿಸಿರುವ ಚೀನಾ ಇದಕ್ಕಾಗಿ ಪಾಕಿಸ್ತಾನ, ಶ್ರೀಲಂಕಾ, ಮ್ಯಾನ್ಮಾರ್ ಸಹಿತ 12 ರಾಷ್ಟ್ರಗಳಲ್ಲಿ ಸದೃಢ ಸೇನಾ ಮೂಲಸೌಕರ್ಯ ನೆಲೆ ಸ್ಥಾಪಿಸಲು ಹೆಜ್ಜೆ ಇಟ್ಟಿರುವುದಾಗಿ ಅಮೆರಿಕದ ರಕ್ಷಣಾ ಇಲಾಖೆ (ಪೆಂಟಗನ್ )ವರದಿ ಮಾಡಿದೆ. ನೆರೆಯ ರಾಷ್ಟ್ರದಲ್ಲಿ ಹಿಡಿತ ಸಾಧಿಸಲು ಹೊರಟಿರುವ ಚೀನಾದ ಈ ಕುತಂತ್ರ ಭಾರತದ ಪಾಲಿಗೆ ಎಚ್ಚರಿಕೆಯ ಗಂಟೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಚೀನಾ ನೌಕಾಪಡೆಯ ಸಮಗ್ರ ಸಂಚಿನ ಕುರಿತ ‘ಮಿಲಿಟರಿ ಆಂಡ್ ಸೆಕ್ಯುರಿಟಿ ಡೆವಲೆಪ್​ವೆುಂಟ್ಸ್ ಇನ್ವಾಲ್ವಿಂಗ್ ದಿ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ (ಪಿಎಆರ್​ಸಿ) 2020’ ವಾರ್ಷಿಕ ವರದಿಯನ್ನು ಪೆಂಟಗನ್ ಅಮೆರಿಕದ ಸಂಸತ್ತಿಗೆ ಸಲ್ಲಿಸಿದೆ.ವರದಿಯ ಪ್ರಕಾರ ಮ್ಯಾನ್ಮಾರ್, ಥಾಯ್ಲೆಂಡ್, ಸಿಂಗಾಪುರ, ಇಂಡೋನೇಷ್ಯಾ, ಪಾಕಿಸ್ತಾನ, ಶ್ರೀಲಂಕಾ, ಯುಎಇ, ಕೀನ್ಯಾ, ಸೀಶೆಲ್ಸ್, ತಾಂಜಾನಿಯಾ, ಅಂಗೋಲಾ ಮತ್ತು ತಜಕಿಸ್ತಾನಗಳಲ್ಲಿ ಚೀನಾ ತನ್ನ ಮಿಲಿಟರಿ ಮೂಲಸೌಕರ್ಯ ನೆಲೆಗಳನ್ನು ಸ್ಥಾಪಿಸಲು ಗಮನಹರಿಸುತ್ತಿದೆ.
ಚೀನಾ ಈ ಮೊದಲು ಆಫ್ರಿಕಾದ ಜಿಬೌಟಿಯಲ್ಲಿ 2017ರ ಆಗಸ್ಟ್​ನಲ್ಲಿ ತನ್ನ ಮೊದಲ ಸಾಗರೋತ್ತರ ನೆಲೆ ಸ್ಥಾಪಿಸಿತ್ತು. ಇದಾದ ಬಳಿಕ ಹಿಂದು ಮಹಾಸಾಗರ ಪ್ರದೇಶದಲ್ಲಿ ತನ್ನ ಕಾರ್ಯತಂತ್ರ ವ್ಯಾಪ್ತಿ ಹೆಚ್ಚಿಸಲು ಬಯಸಿರುವುದಾಗಿ ತಿಳಿದುಬಂದಿದೆ.
ಹಂಬಂತೋಟ ನೆಲೆ?:ಶ್ರೀಲಂಕಾದ ಹಂಬಂತೋಟ ಬಂದರಿನಲ್ಲಿ ಚೀನಾ ಸೇನಾ ನೆಲೆ ಸ್ಥಾಪಿಸಿದೆ ಎನ್ನುವ ಸುದ್ದಿ ಕೆಲವು ವರ್ಷಗಳ ಹಿಂದೆ ಸದ್ದು ಮಾಡಿತ್ತು. ಆದರೆ ಲಂಕಾದ ಅಂದಿನ ಪ್ರಧಾನಿ ರಣಿಲ್ ವಿಕ್ರಮಸಿಂಘ ಈ ಆರೋಪವನ್ನು ಅಲ್ಲಗಳೆದಿದ್ದರು. ‘ಚೀನಾ ಉದ್ಯಮಿಗಳೊಂದಿಗೆ ನಮ್ಮ ಬಂದರು ಅಧಿಕಾರಿಗಳು ಕೆಲವು ಒಪ್ಪಂದ ಮಾಡಿಕೊಂಡಿದ್ದಾರೆಯೇ ಹೊರತು ಚೀನಾ ಸೇನೆಗೆ ಅವಕಾಶ ಕೊಟ್ಟಿಲ್ಲ’ ಎಂದು ಸ್ಪಷ್ಟನೆ ನೀಡಿದ್ದರು. ಈ ಹೇಳಿಕೆ ಹೊರತಾಗಿಯೂ ಭಾರತ, ಅಮೆರಿಕ ಲಂಕಾ ಮೇಲೆ ಅನುಮಾನ ಪಟ್ಟಿದ್ದವು.
ಅಲ್ಲಗಳೆದ ಚೀನಾ:ಪೆಂಟಗನ್ ವರದಿಯನ್ನು ಚೀನಾದ ವಿದೇಶಾಂಗ ಇಲಾಖೆ ನಿರಾಕರಿಸಿದೆ. ವರದಿ ಪೂರ್ವಾಗ್ರಹ ಪೀಡಿತ ಎಂದು ಆರೋಪಿಸಿದೆ.
ಡ್ರಾ್ಯಗನ್ ನಂ.1
ವಿಶ್ವದಲ್ಲೇ ಅತ್ಯಂತ ಬೃಹತ್ ನೌಕಾಸೇನೆ ಹೊಂದಿರುವ ಚೀನಾದ ಶಕ್ತಿ ದಿನದಿಂದ ದಿನಕ್ಕೆ ವೃದ್ಧಿಯಾಗುತ್ತಿರುವುದಾಗಿ ಪೆಂಟಗನ್ ವರದಿಯಲ್ಲಿ ಹೇಳಿದೆ. ಯುದ್ಧ ಸಾಮರ್ಥ್ಯದ ಹೆಚ್ಚಳದಿಂದಾಗಿ ಚೀನಾ, ಮುಂದಿನ ದಶಕದೊಳಗೆ ತನ್ನ ಪರಮಾಣು ಸಿಡಿತಲೆಗಳ (ನ್ಯೂಕ್ಲಿಯರ್ ವಾರ್​ಹೆಡ್ಸ್) ಸಂಖ್ಯೆಯನ್ನು ದ್ವಿಗುಣಗೊಳಿಸುವಲ್ಲಿ ಸಫಲವಾಗಬಹುದು. ದೀರ್ಘ ಶ್ರೇಣಿಯ ಕ್ಷಿಪಣಿಗಳು ಮತ್ತು ಪರಮಾಣು ಜಲಾಂತರ್ಗಾಮಿ ನೌಕೆಗಳಷ್ಟೇ ಅಲ್ಲದೆ ಸಮಗ್ರ ವಾಯು ರಕ್ಷಣಾ ವ್ಯವಸ್ಥೆ, ಬಾಹ್ಯಾಕಾಶ ಮತ್ತು ಎಲೆಕ್ಟ್ರಾನಿಕ್ ಯುದ್ಧದವರೆಗಿನ ಎಲ್ಲ ಸಾಮರ್ಥ್ಯಗಳನ್ನು ಚೀನಾ ವಿಸ್ತರಿಸುತ್ತಿರುವುದಾಗಿ ಉಲ್ಲೇಖವಾಗಿದೆ.
ವರದಿಯಲ್ಲೇನಿದೆ?
* ಚೀನಾದ ಬಳಿ ಸದ್ಯ 130 ಪ್ರಮುಖ ಯುದ್ಧ ನೌಕೆಗಳು ಸೇರಿ ಒಟ್ಟು 350 ನೌಕೆಗಳಿವೆ
* ಇವುಗಳಲ್ಲಿ ಜಲಾಂತರ್ಗಾಮಿ ನೌಕೆಗಳು ಸೇರಿವೆ
* ಯುದ್ಧನೌಕೆ, ಕ್ಷಿಪಣಿ ತಯಾರಿ, ವಾಯು ರಕ್ಷಣಾ ವ್ಯವಸ್ಥೆ ಸೇರಿ ಹಲವು ಕ್ಷೇತ್ರಗಳಲ್ಲಿ ಚೀನಾ ಸೇನೆ ಅಮೆರಿಕ ಸೇನೆಯನ್ನು ಹಿಂದಿಕ್ಕಿದೆ.
* ಸದ್ಯ 200 ಅಣ್ವಸ್ತ್ರ ಸಿಡಿತಲೆಗಳು ಚೀನಾ ಬಳಿ ಇವೆ. 10 ವರ್ಷದಲ್ಲಿ ದುಪ್ಪಟ್ಟಾಗಬಹುದು
* ಚೀನಾ ಗುರಿ ತಲುಪಿದರೆ ಅಮೆರಿಕದ ರಾಷ್ಟ್ರೀಯ ಹಿತಾಸಕ್ತಿಗೆ ಧಕ್ಕೆ, ಗಂಭೀರ ಪರಿಣಾಮ
3 ರಾಷ್ಟ್ರಗಳ ಶಕ್ತಿ
ಅಮೆರಿಕದ ಬಳಿ 293 ಯುದ್ಧ ನೌಕೆಗಳು ಹಾಗೂ ಜಲಾಂತರ್ಗಾಮಿಗಳಿವೆ. ಅಮೆರಿಕ ಕೂಡ ಹೆಚ್ಚು ತಾಂತ್ರಿಕವಾಗಿ ಮುಂದುವರಿದಿದ್ದು, 100,000 ಟನ್ ಸಾಮರ್ಥ್ಯದ (ಪ್ರತಿ ನೌಕೆಯಲ್ಲಿ 80 ರಿಂದ 90 ಯುದ್ಧ ವಿಮಾನಗಳನ್ನು ಸಾಗಿಸಬಹುದು) ಒಟ್ಟು 11 ವಿಮಾನವಾಹಕ ನೌಕೆಗಳನ್ನು ಹೊಂದಿದೆ. ಆದರೆ ಚೀನಾ ಬಳಿ ಸದ್ಯ ಎರಡು ಯುದ್ಧವಾಹಕ ನೌಕೆಗಳಿದ್ದು, ಇನ್ನೂ ಎರಡು ನೌಕೆಗಳನ್ನು ಅದು ಸಿದ್ಧಪಡಿಸುತ್ತಿದೆ. ನೌಕಾಪಡೆಯ ಸಾಮರ್ಥ್ಯದಲ್ಲಿ ಭಾರತ ಕೂಡ ಚೀನಾಗಿಂತ ಹಿಂದಿದೆ. ಭಾರತದ ಬಳಿ ಸದ್ಯ ಕೇವಲ ಒಂದೇ ವಿಮಾನವಾಹಕ ನೌಕೆ ಇದೆ. ಇವುಗಳ ಜತೆಗೆ 10 ವಿಧ್ವಂಸಕಗಳು, 14 ಯುದ್ಧನೌಕೆಗಳು, 11 ಕಾರ್ವೆಟ್​ಗಳು ಮತ್ತು 15 ಡೀಸೆಲ್-ಎಲೆಕ್ಟ್ರಿಕ್ ಮತ್ತು ಎರಡು ಪರಮಾಣು-ಚಾಲಿತ ಜಲಾಂತರ್ಗಾಮಿ ನೌಕೆಗಳಿವೆ. ಎರಡನೇ ವಿಮಾನವಾಹಕ ನೌಕೆ ಸೇರ್ಪಡೆ ಪ್ರಕ್ರಿಯೆ 2021ರ ಸೆಪ್ಟೆಂಬರ್​ನಲ್ಲಿ ನಡೆಯಲಿದ್ದು, ಮೂರನೇ ನೌಕೆ ನಿರ್ವಣಕ್ಕೆ ಭಾರತ ಇನ್ನೂ ಅನುಮೋದನೆ ನೀಡಿಲ್ಲ. ಹೀಗಾಗಿಯೇ ಇಂಡೋ-ಫೆಸಿಫಿಕ್ ಪ್ರದೇಶದಲ್ಲಿ ಚೀನಾ ನಡೆಸುವ ಯಾವುದೇ ಯೋಜನೆಗಳನ್ನೂ ಭಾರತ ಗಂಭೀರವಾಗಿ ಪರಿಗಣಿಸುವ ಅವಶ್ಯಕತೆ ಎದುರಾಗಿದೆ.
ಚೀನಾ ತಂತ್ರವೇನು?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 2 =
Remember me
