ನವದೆಹಲಿ:ಕಳೆದ ಕೆಲವು ದಿನಗಳಿಂದ ಬೂದಿಮುಚ್ಚಿದ ಕೆಂಡದಂತಿರುವ ಲಡಾಕ್ ವಲಯದಲ್ಲಿ ಮತ್ತೆ ಯುದ್ಧದ ಕಾಮೋಡ ಕವಿದಿದೆ. ಭಾರತ ಹೆಚ್ಚುವರಿ ಸೇನಾ ಪಡೆಗಳನ್ನು ಗಲ್ವಾನ್ ಕಣಿವೆಗೆ ಕಳುಹಿಸಿದ ಬೆನ್ನಲ್ಲೇ ಚೀನಾದ 10 ರಿಂದ 15 ಯುದ್ಧ ವಿಮಾನಗಳು ಲಡಾಖ್ ಸಮೀಪದಲ್ಲಿ ಹಾರಾಟ ನಡೆಸಿರುವುದು ದೃಢಪಟ್ಟಿದೆ.
ಲಡಾಖ್ ವಲಯದಲ್ಲಿ ಚೀನಾ ಜತೆಗಿನ ಬಿಕ್ಕಟ್ಟು ಸತತ 26ನೇ ದಿನವೂ ಮುಂದುವರಿದಿದೆ. ಸೋಮ ವಾರ ಸೈನಿಕರನ್ನು ಹೊತ್ತ ಟ್ರಕ್​ಗಳು, ಯಂತ್ರಗಳು, ಶಸ್ತ್ರಾಸ್ತ್ರ, ಮದ್ದುಗುಂಡು ಇತರ ಸಾಮಗ್ರಿಗಳನ್ನು ಗಲ್ವಾನ್ ಕಣಿವೆಗೆ ಸಾಗಿಸುವ ಕಾರ್ಯ ಆರಂಭವಾಗಿದೆ. ಹೆಚ್ಚುವರಿ ಪಡೆಗಳಲ್ಲಿ ಬಹುತೇಕ ಸೈನಿಕರು ಕಾಶ್ಮೀರಕ್ಕೆ ನಿಯೋಜನೆಗೊಂಡವರು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗಡಿ ನಿಯಂತ್ರಣ ರೇಖೆಯಿಂದ (ಎಲ್​ಒಸಿ) ವಾಸ್ತವ ಗಡಿ ರೇಖೆಗೆ (ಎಲ್​ಎಸಿ) ತೀರಾ ಗಂಭೀರ ಸನ್ನಿವೇಶದಲ್ಲಷ್ಟೇ ಸೈನಿಕರನ್ನು ಕಳಿಸಲಾಗುತ್ತದೆ. ಚೀನಾದ ಜನತಾ ವಿಮೋಚನಾ ಸೇನೆಯ (ಪಿಎಲ್​ಎ) ಮೇಲೆ ಒತ್ತಡ ಹೇರಲಿಕ್ಕಾಗಿ ರಸ್ತೆ ಮತ್ತು ವಾಯು ಮಾರ್ಗದ ಮೂಲಕ ಪಡೆಗಳನ್ನು ಕಳಿಸಲಾಗುತ್ತಿದೆ.
ಇದನ್ನೂ ಓದಿ:ಲಡಾಖ್​ ಬಿಕ್ಕಟ್ಟಿನ ವಿಷಯದಲ್ಲಿ ಹೊಂದಾಣಿಕೆಯ ಮಾತೇ ಇಲ್ಲ
ತಮ್ಮ ಗ್ರಾಮದ ಮೂಲಕ ಪ್ರತಿ ರಾತ್ರಿ 80ರಿಂದ 90 ಟ್ರಕ್​ಗಳು ಸಾಗುತ್ತಿವೆ ಎಂದು ಭಾರತ ಮತ್ತು ಚೀನಿ ಸೈನಿಕರು ಮುಖಾಮುಖಿಯಾಗಿ ನಿಂತಿರುವ ಸ್ಥಳಕ್ಕೆ ತುಂಬಾ ಸಮೀಪವಿರುವ ಡುರ್ಬುಕ್ ಗ್ರಾಮದ ಜನರು ತಿಳಿಸಿದ್ದಾರೆ. ಚಳಿಗಾಲದ ಸಂಗ್ರಹಕ್ಕಾಗಿ ಅಗತ್ಯ ವಸ್ತುಗಳನ್ನೆಲ್ಲ ಕಳಿಸುತ್ತಿರುವ ಸಾಧ್ಯತೆಯಿದೆ ಎಂದು ಲೆಫ್ಟಿನೆಂಟ್ ಜನರಲ್ ಎಸ್.ಎಲ್. ನರಸಿಂಹನ್ ಅಭಿಪ್ರಾಯಪಟ್ಟಿದ್ದಾರೆ. ಚೀನಿ ಪಡೆಗಳ ಅತಿಕ್ರಮಣದ ಅಪಾಯ ಹೆಚ್ಚಿರುವ ಬೇಸಿಗೆ ಕಾಲದಲ್ಲಿ ಭಾರತೀಯ ಸೇನೆ ಲಡಾಖ್​ನಲ್ಲಿ ಕವಾಯತು ನಡೆಸುತ್ತದೆ. ಚೀನಾ ಪಡೆಗಳು ಕೂಡ ಅದನ್ನೇ ಮಾಡುತ್ತವೆ.
ಚೀನಿ ವಾಯುಪಡೆ ಮೇಲೆ ನಿಗಾ:ಹೊಟಾನ್ ಮತ್ತು ಗರ್​ಗುನ್ಸಾ ನೆಲೆಗಳಲ್ಲಿ ಇರುವ ಚೀನಿ ಯುದ್ಧ ವಿಮಾನಗಳ ಚಲನವಲನಗಳ ಮೇಲೆ ಭಾರತ ತೀವ್ರ ನಿಗಾ ಇಟ್ಟಿದೆ. ಸದ್ಯ ಅಲ್ಲಿ 10ರಿಂದ 12 ಸಮರ ವಿಮಾನಗಳಿದ್ದು, ಭಾರತದ ಸರಹದ್ದಿನ ಸಮೀಪ ಹಾರಾಟ ನಡೆಸುತ್ತಿವೆ ಎಂದು ಮೂಲಗಳು ಹೇಳಿವೆ. ಲಡಾಖ್ ವಲಯದಿಂದ 30ರಿಂದ 35 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಚೀನಿ ವಿಮಾನಗಳು ಹಾರಾಟ ನಡೆಸುತ್ತಿವೆ. ಅಂತಾರಾಷ್ಟ್ರೀಯ ನಿಯಮಗಳ ಪ್ರಕಾರ ಅವುಗಳು ಭಾರತದ ಪ್ರದೇಶಗಳಿಂದ 10 ಕಿಮೀಗಿಂತ ಹೆಚ್ಚಿನ ಅಂತರ ಕಾಯ್ದುಕೊಳ್ಳುತ್ತಿವೆ ಎಂದು ಹೇಳಲಾಗುತ್ತಿದೆ.
ಬಿಹಾರ ಚುನಾವಣೆ ಪ್ರಚಾರಕ್ಕೆ ವಿಡಿಯೋ ಮೂಲಕವೇ ಅಮಿತ್ ಷಾ ರ‌್ಯಾಲಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + 12 =
Remember me
