ನವದೆಹಲಿ:ಈ ತಿಂಗಳ ಆರಂಭದಲ್ಲಿ ಚೀನಾ ಗಡಿ ಸಮೀಪದ ಹಳ್ಳಿಯಿಂದ ನಾಪತ್ತೆಯಾಗಿದ್ದ ಐವರು ಭಾರತೀಯರನ್ನು ಚೀನಾ ಪೀಪಲ್ಸ್​ ಲಿಬರೇಷನ್​ ಆರ್ಮಿ (ಪಿಎಲ್​ಎ) ಭಾರತೀಯ ಸೇನೆಗೆ ಶನಿವಾರ ಬೆಳಗ್ಗೆ ಹಸ್ತಾಂತರಿಸಿದೆ.
ಹಸ್ತಾಂತರ ಪ್ರಕ್ರಿಯೆಯು ಚೀನಾ ಪ್ರದೇಶದದಲ್ಲಿ ನಡೆದಿದ್ದು, ಐವರು ಭಾರತೀಯ ಗಡಿಗೆ ಬರಲು ಸುಮಾರು ಒಂದು ಗಂಟೆಗಳಿಗೂ ಅಧಿಕ ಸಮಯ ತೆಗೆದುಕೊಂಡಿತು. ಕಿಬಿತು ಬಾರ್ಡರ್​ ಪೋಸ್ಟ್​ನಿಂದ ಭಾರತೀಯರು ಅರುಣಾಚಲ ಪ್ರದೇಶಕ್ಕೆ ಪ್ರವೇಶ ನೀಡಿದರು.
ಶುಕ್ರವಾರವಷ್ಟೇ ಟ್ವೀಟ್​ ಮಾಡಿದ್ದ ಕೇಂದ್ರ ಸಚಿವ ಕಿರಣ್​ ರಿಜಿಜು, ಭಾರತೀಯರನ್ನು ಹಸ್ತಾಂತರಿಸುವುದಾಗಿ ಚೀನಾದ ಪಿಎಲ್​ಎ ಭಾರತೀಯ ಸೇನೆಗೆ ಖಚಿತಪಡಿಸಿದೆ. ಹಸ್ತಾಂತರ ಪ್ರಕ್ರಿಯೆಯು ನಾಳೆ ಯಾವುದೇ ಸಮಯದಲ್ಲಿ ನಡೆಯಲಿದೆ ಎಂದು ತಿಳಿಸಿದ್ದರು.
ಇದನ್ನೂ ಓದಿ:ನಿಮಗಾಗಿ ಸೇಫ್ಟಿ ಪ್ಯಾಡ್​ ಖರೀದಿಸಬಹುದಾದ ಹುಡುಗನನ್ನು ಪಡೆಯಿರಿ, ಕಾಂಡೋಮ್​ ಕೊಳ್ಳುವವನಲ್ಲ..!
ಸೆಪ್ಟೆಂಬರ್​ 1ರಿಂದಲೂ ನಾಪತ್ತೆಯಾಗಿದ್ದ ಐವರು ಭಾರತೀಯರು ಬೇಟೆಗಾರರು ಎಂದು ಸೇನೆ ತನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿತ್ತು. ಆದರೆ, ಕುಟುಂಬ ಮತ್ತು ಸ್ಥಳೀಯರು ಮಾತನಾಡಿ ಅವರು ಬೇಟೆಗಾರರಲ್ಲ, ಕೂಲಿ ಆಳುಗಳು ಎಂದಿದ್ದರು. ಇದೇ ವಾರದ ಆರಂಭದಲ್ಲಿ ಚೀನಾದಲ್ಲಿ ಇರುವುದಾಗಿ ಚೀನಾ ಆರ್ಮಿ ಮಾಹಿತಿ ನೀಡಿತ್ತು.
#HarKaDeshKeNaam#WeCare#ArunachalPradeshGood news#India…By persistent efforts of#IndianArmy, 5 hunters of#UpperSubansiri, who crossed over#LACon 2 Sept, will finally return on 12 Sept.#PLAwill hand them over to#Indiain#Damai#Chinaat 0930hrs morning.#LohitValleypic.twitter.com/FtyRaFLVXl
— PRO Defence Tezpur (Assam/Arunachal Pradesh) (@ProAssam)September 11, 2020

ಸೆಪ್ಟೆಂಬರ್​ 2ರಂದು ತಮ್ಮ ಅಜಾಗರೂಕತೆಯಿಂದ ಅಪ್ಪರ್​ ಸಬನ್​ಸಿರಿಯಲ್ಲಿರುವ ಭಾರತೀಯ ಗಡಿ ನಿಯಂತ್ರಣಾ ರೇಖೆಯಿಂದ ನಾಪತ್ತೆಯಾಗಿದ್ದ ಐವರು ಭಾರತೀಯರನ್ನು ಇಂಡಿಯನ್​ ಆರ್ಮಿ ನಿರಂತರ ಶ್ರಮದಿಂದಾಗಿ ಪತ್ತೆ ಹಚ್ಚಿದೆ. ಹಾಟ್​ಲೈನ್​ ಮೂಲಕ ಚೀನಾ ಆರ್ಮಿ ಸೆಪ್ಟೆಂಬರ್​ 8 ರಂದು ಪ್ರತಿಕ್ರಿಯೆ ನೀಡಿದ್ದು, ನಾಪತ್ತೆಯಾದವರು ಚೀನಾ ಭಾಗದಲ್ಲಿರುವುದಾಗಿ ಖಚಿತಪಡಿಸಿದೆ ಎಂದು ಇಂಡಿಯನ್​ ಆರ್ಮಿ ಮುಂಚೆಯೇ ಟ್ವೀಟ್​ ಮಾಡಿತ್ತು.
ಇದೀಗ ಐವರು ಭಾರತೀಯರು ಸ್ವದೇಶಕ್ಕೆ ಮರಳಿದ್ದಾರೆ. ಇಂದು ಬೆಳಗ್ಗೆ ನಡೆದ ಹಸ್ತಾಂತರ ಪ್ರಕ್ರಿಯೆಯಲ್ಲಿ ಚೀನಾ ಭಾರತೀಯರನ್ನು ಬಿಟ್ಟು ಕಳುಹಿಸಿದೆ ಎಂದು ಸೇನೆ ಖಚಿತಪಡಿಸಿದೆ.(ಏಜೆನ್ಸೀಸ್​)
ಒಂದು ತಿಂಗಳಿನಿಂದ ನಡೆಯುತ್ತಿದೆ ಸರ್ಕಾರಿ ಶಾಲೆ; ಲಾಕ್​ಡೌನ್​ ಲೆಕ್ಕಕ್ಕೇ ಇಲ್ಲ; ಅಧಿಕಾರಿಗಳಿಗೂ ಗೊತ್ತಿಲ್ಲ….!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × three =
Remember me
