ಭಾರತ ಆಮದು ಮಾಡಿಕೊಳ್ಳುವುದರಲ್ಲಿ ಶೇಕಡ 76ರಷ್ಟು ವಸ್ತುಗಳು ಮಷಿನರಿ, ಕೆಮಿಕಲ್ಸ್ ಅಥವಾ ಸೂಕ್ಷ್ಮ ವಸ್ತುಗಳಾಗಿವೆ.
ನವದೆಹಲಿ:ಪೂರ್ವ ಲಡಾಖ್​ನ ಗಡಿಯಲ್ಲಿ ನಡೆದ ಸಂಘರ್ಷದಿಂದಾಗಿ ಭಾರತದಲ್ಲಿ ಚೀನಾದ ವಸ್ತುಗಳನ್ನು ಬಹಿಷ್ಕರಿಸಿ ಎಂಬ ಆಂದೋಲನ ತೀವ್ರವಾಗಿದ್ದರಿಂದ ಪ್ರಸಕ್ತ ವರ್ಷ ಭಾರತಕ್ಕೆ ಚೀನಾದ ಆಮದು ಪ್ರಮಾಣ ಇಳಿಕೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇಕಡ 24.7ರಷ್ಟು ಆಮದು ಇಳಿಕೆಯಾಗಿದ್ದು, ವಹಿವಾಟು 32.28 ಬಿಲಿಯನ್ ಡಾಲರ್​ಗೆ ತಗ್ಗಿದೆ. ಉಭಯ ದೇಶಗಳ ನಡುವಿನ ಒಟ್ಟು ವ್ಯಾಪಾರ ವಿನಿಮಯ ಶೇಕಡ 18.6ರಷ್ಟು ಕುಸಿತಕಂಡು 43.47 ಬಿಲಿಯನ್ ಡಾಲರ್​ಗೆ ತಲುಪಿದೆ. ಚೀನಾಗೆ ಭಾರತದ ಸ್ಮಾರ್ಟ್​ಫೋನ್ ಮಾರುಕಟ್ಟೆ ಅತಿ ದೊಡ್ಡ ಹೊಡೆತ ನೀಡಿದ್ದು, ಅದರ ಪ್ರಮಾಣ ಶೇಕಡ 81ರಿಂದ ಶೇ.72ಕ್ಕೆ ಕುಸಿದಿದೆ. ಮತ್ತೊಂದು ಕಡೆ ಚೀನಾಗೆ ಭಾರತ ರಫ್ತು ಮೌಲ್ಯ ಇದೇ ಅವಧಿಯಲ್ಲಿ ಅಧಿಕ ವಾಗಿದೆ. ಜನವರಿಯಿಂದ ಭಾರತದ ರಫ್ತು ಪ್ರಮಾಣ ಶೇಕಡ 6.70ರಷ್ಟು ಹೆಚ್ಚಾಗಿ 11.09 ಬಿಲಿಯನ್ ಡಾಲರ್ ತಲುಪಿದೆ. ಕಳೆದ ಮೇ ತಿಂಗಳಿನಲ್ಲಿ ಭಾರತದಿಂದ 5,174 ಮೀಟರ್ ಪಿವಿಸಿಯನ್ನು ಆಮದು ಚೀನಾ ಮಾಡಿಕೊಂಡಿತ್ತು. ಈ ಪ್ರಮಾಣ ಜೂನ್​ನಲ್ಲಿ ಐದು ಪಟ್ಟು ಹೆಚ್ಚಾಗಿದೆ.
ಪರ್ಯಾಯ ಮಾರ್ಗದಿಂದ ಅವಲಂಬನೆ ಶೇ.75 ಇಳಿಕೆಗೆ ಸಲಹೆ:ಚೀನಾದಿಂದ ಆಮದು ಮಾಡಿಕೊಳ್ಳಲಾಗುವ 327 ವಸ್ತುಗಳಿಗೆ ಪರ್ಯಾಯ ಮಾರ್ಗ ಹುಡುಕಿದರೆ ಅಥವಾ ಸ್ವದೇಶಿಯಾಗಿ ಉತ್ಪಾದಿಸಿದರೆ ಆಮದು ಮತ್ತು ರಫ್ತಿನ ಅಸಮತೋಲನವನ್ನು ತೊಡೆದುಹಾಕಬಹುದು ಎಂದು ಥಿಂಕ್​ಟ್ಯಾಂಕ್ ಸಂಸ್ಥೆ ಆರ್​ಐಎಸ್ (ಅಭಿವೃದ್ಧಿಶೀಲ ರಾಷ್ಟ್ರಗಳಿಗಾಗಿ ಸಂಶೋಧನೆ ಮತ್ತು ಮಾಹಿತಿ ವ್ಯವಸ್ಥೆ) ಹೇಳಿದೆ. ಭಾರತ-ಚೀನಾ ವ್ಯವಹಾರಗಳ ಬಗ್ಗೆ ಅಧ್ಯಯನ ನಡೆಸಿರುವ ಆರ್​ಐಎಸ್, ಚೀನಾದ 327 ವಸ್ತುಗಳಿಗೆ ಪರ್ಯಾಯ ಮಾರ್ಗವನ್ನು ಕಂಡುಕೊಂಡರೆ ಚೀನಾದ ಮೇಲಿರುವ ಭಾರತದ ಅವಲಂಬನೆ ಶೇಕಡ 75ರಷ್ಟು ಕಡಿಮೆಯಾಗಲಿದೆ ಎಂದು ತಿಳಿಸಿದೆ. 2018ರಲ್ಲಿ ಚೀನಾದಿಂದ ಭಾರತ ಒಟ್ಟು 90 ಬಿಲಿಯನ್ ಡಾಲರ್ ಮೊತ್ತದ ಸರಕನ್ನು ಆಮದು ಮಾಡಿಕೊಂಡಿದ್ದು, ಅದರಲ್ಲಿ ಈ 327 ವಸ್ತುಗಳ ಪ್ರಮಾಣ 66.60 ಬಿಲಿಯನ್ ಡಾಲರ್ ಇದೆ. ಚೀನಾದಿಂದ ಒಟ್ಟು 4,044 ತರಹದ ವಸ್ತುಗಳು, ಉತ್ಪನ್ನಗಳನ್ನು ಭಾರತ ಆಮದು ಮಾಡಿಕೊಳ್ಳುತ್ತಿದ್ದು, ಅದರಲ್ಲಿ 327 ವಸ್ತುಗಳು ಸೂಕ್ಷ್ಮವಾಗಿವೆ (ಸೆನ್ಸಟಿವ್). ಒಟ್ಟು ಆಮದಿನಲ್ಲಿ ಈ ವಸ್ತುಗಳ ಪ್ರಮಾಣ ಶೇಕಡ 10 ಇದ್ದರೂ ದರದ ಕಾರಣ ಅವು ಒಟ್ಟು ಆಮದಿನ ಶೇಕಡ 75ಕ್ಕಿಂತ ಅಧಿಕ ಪಾಲನ್ನು ಹೊಂದಿವೆ ಎಂದು ಆರ್​ಐಎಸ್ ತಿಳಿಸಿದೆ.
321 ಸರಕುಗಳ ಪಟ್ಟಿ ಮಾಡಿದ ಕೇಂದ್ರ ನಕಾರ:ಚೀನಾದ ಸರಕುಗಳ ಮೇಲೆ ದೊಡ್ಡ ಪ್ರಮಾಣದ ನಿಷೇಧ ಹೇರಲು ಕೇಂದ್ರ ಸರ್ಕಾರ ಈಗಾಗಲೇ ಸಿದ್ಧತೆ ನಡೆಸಿದ್ದು, ಚೀನಾದ 321 ಸರಕುಗಳ ಪಟ್ಟಿ ತಯಾರಿಸಿದೆ ಎನ್ನಲಾಗಿದೆ. ಈ ಸರಕುಗಳಿಗೆ ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿದ್ದು, ಎಲ್ಲ ವ್ಯವಸ್ಥೆಗಳು ಪೂರ್ಣಗೊಳ್ಳುತ್ತಲೇ ಈ ವಸ್ತುಗಳ ಮೇಲೆ ಹಂತಹಂತವಾಗಿ ನಿಷೇಧ ಹೇರಲಾಗುತ್ತದೆ. ಸರ್ಕಾರವು ನಿಷೇಧಿಸಲು ತಯಾರಿ ನಡೆಸುತ್ತಿರುವ ವಸ್ತುಗಳ ಪೈಕಿ, ಮೊಬೈಲ್ ಮತ್ತು ತಂತ್ರಜ್ಞಾನದ ಸರಕುಗಳು ಹೆಚ್ಚಿನ ಪ್ರಮಾಣದಲ್ಲಿವೆ ಎಂದು ಹೇಳಲಾಗುತ್ತಿದೆ.
ಅವಲಂಬನೆಗೆ ಅನ್ಯ ರಾಷ್ಟ್ರಗಳು:ಟೆಲಿಫೋನ್ ಸೆಟ್​ಗಳು, ಸ್ಮಾರ್ಟ್​ಫೋನ್​ಗಳು ಮತ್ತು ಇತರ ಧ್ವನಿ ವರ್ಧಕ ಸಾಧನಗಳ ಒಟ್ಟು ಆಮದಿನಲ್ಲಿ ಶೇಕಡ 11ರಷ್ಟು ಚೀನಾದ ಮೇಲೆ ಭಾರತದ ಅವಲಂಬನೆ ಇದೆ. ಇವುಗಳಿಗಾಗಿ ಚೀನಾದ ಬದಲಿಗೆ ಫ್ರಾನ್ಸ್, ಜರ್ಮನಿ, ಫಿನ್ಲೆಂಡ್, ಥಾಯ್ಲೆಂಡ್, ಮಾರಿಷಸ್ ಮುಂತಾದ ದೇಶಗಳನ್ನು ಭಾರತ ಅವಲಂಬಿಸಬಹುದು. ಜತೆಗೆ ಅಮೆರಿಕ, ಹಂಗೇರಿ, ಬೆಲಾರಸ್ ಮತ್ತು ಕೊಲಂಬಿಯಾವನ್ನು ಸಹ ಭಾರತ ಆಯ್ಕೆ ಮಾಡಿಕೊಳ್ಳಬಹುದು. ್ಝದ್ಯುತ್ ಸಾಮಗ್ರಿಗಳು, ಎಲ್​ಇಡಿ, ಫೋಟೋಸೆನ್ಸಿಟಿವ್ ಉತ್ಪನ್ನಗಳಿಗಾಗಿ ಚೀನಾವನ್ನು ಭಾರತ ಶೇಕಡ 3.4) ಅವಲಂಬಿಸಿದೆ. ಈ ಉತ್ಪನ್ನಗಳನ್ನು ಕೊರಿಯಾ, ಇಟಲಿ, ಜಪಾನ್, ಬೆಲಾರಸ್ ಮತ್ತು ಅಮೆರಿಕದಿಂದ ಆಮದು ಮಾಡಿಕೊಳ್ಳಬಹುದು. ್ಝ್ವಯಂಚಾಲಿತ ದತ್ತಾಂಶ ಸಂಸ್ಕರಣಾ ಯಂತ್ರಗಳಿಗಾಗಿ ಭಾರತ ಚೀನಾ ಮೇಲೆ ಶೇಕಡ 3.20ರಷ್ಟು ಅವಲಂಬಿಸಿದ್ದು, ಇವುಗಳನ್ನು ನೆದರ್​ಲೆಂಡ್, ಕೆನಡಾ, ಬ್ರಿಟನ್, ಇಟಲಿ ಮತ್ತು ಜಪಾನ್​ನಿಂದ ತರಿಸಿಕೊಳ್ಳಬಹುದು. ್ಝೊದಲ ಒಂದು ವರ್ಷದಲ್ಲಿ ಚೀನಾದ ಪ್ರಮುಖ ಸರಕುಗಳಿಗೆ ಪರ್ಯಾಯ ಮಾರ್ಗ ಹುಡುಕಿಕೊಂಡರೆ ಶೇಕಡ 16ರಷ್ಟು ವಸ್ತುಗಳನ್ನು ಅದೇ ಬೆಲೆಗೆ ಬೇರೆ ಕಡೆಯಿಂದ ಆಮದು ಮಾಡಿಕೊಳ್ಳಬಹುದು.
ಚೀನಾ ವಿರೋಧಿ ಮಾಧ್ಯಮ ಮುಖ್ಯಸ್ಥ ಸೆರೆ:ಹಾಂಕಾಂಗ್​ನಲ್ಲಿ ಪ್ರಜಾಪ್ರಭುತ್ವ ಪರ ಚಳವಳಿಯ ಬೆಂಬಲಿಗರಾದ ಮಾಧ್ಯಮದ ಮುಖ್ಯಸ್ಥ ಜಿಮ್ಮಿ ಲೈ (71) ಸಹಿತ ಏಳು ಜನರನ್ನು ಸೋಮವಾರ ಬಂಧಿಸಲಾಗಿದೆ. ವಿದೇಶಿ ಶಕ್ತಿಗಳೊಂದಿಗೆ ಶಾಮೀಲಾಗಿರುವ ಶಂಕೆ ಹಾಗೂ ನೆಕ್ಸ್ ್ಟ ಡಿಜಿಟಲ್ ಪ್ರಕಾಶನ ಸಮೂಹದಲ್ಲಿ ನಡೆದಿದೆಯೆನ್ನಲಾದ ಅವ್ಯವಹಾರಗಳ ಹಿನ್ನೆಲೆಯಲ್ಲಿ ಲೈ ಅವರನ್ನು ಬಂಧಿಸಲಾಗಿದೆ ಎಂದು ಹೇಳಲಾಗಿದೆ. ಹಾಂಕಾಂಗ್ ಮೇಲೆ ಚೀನಾ ಹೊಸ ಭದ್ರತಾ ಕಾನೂನು ಹೇರಿದ ನಂತರ ಭಿನ್ನಮತೀಯರ ವಿರುದ್ಧ ಹೊಸ ಸುತ್ತಿನ ಗದಾ ಪ್ರಹಾರ ನಡೆಯುತ್ತಿದ್ದು, ಲೈಗೆ ಕೈಕೋಳ ತೊಡಿಸಿ ಪತ್ರಿಕಾ ಕಚೇರಿಯಿಂದ ಪೊಲೀಸರು ಕರೆದೊಯ್ದ ಚಿತ್ರ ವೈರಲ್ ಆಗಿದೆ. ಲೈ ಒಡೆತನದ ‘ಆಪಲ್ ಡೇಲಿ’ ಪತ್ರಕರ್ತರು ಬಂಧನದ ಸುದ್ದಿಯನ್ನು ಫೇಸ್​ಬುಕ್​ನಲ್ಲಿ ತಕ್ಷಣವೇ ಪ್ರಕಟಿಸಿದ್ದಾರೆ.
ಲಘು ಹೆಲಿಕಾಪ್ಟರ್ ನಿಯೋಜನೆ:ದೇಶೀಯವಾಗಿ ನಿರ್ವಿುತ ಲಘು ಸಮರ ಹೆಲಿಕಾಪ್ಟರ್​ಗಳನ್ನು (ಎಲ್​ಸಿಎಚ್) ಪೂರ್ವ ಲಡಾಖ್ ವಲಯದಲ್ಲಿ ನಿಯೋಜಿಸಲಾಗಿದೆ. ಎಲ್​ಎಸಿಯಲ್ಲಿ ನಿಯೋಜಿಸಿರುವ ಸೈನಿಕರನ್ನು ವಾಪಸ್ ಪಡೆಯಲು ಚೀನಾ ನಿರಾಕರಿಸುತ್ತಿರುವ ಹಿನ್ನೆಲೆಯಲ್ಲಿ ಎಲ್​ಸಿಎಚ್​ಗಳು ಕಾವಲು ನಡೆಸುತ್ತಿವೆ ಎಂದು ಮೂಲಗಳು ಹೇಳಿವೆ. ಬೆಂಗಳೂರಿನ ಹಿಂದೂಸ್ತಾನ್ ಏರೋನಾಟಿಕ್ಸ್ ಸಂಸ್ಥೆ ನಿರ್ವಿುಸಿರುವ ಎರಡು ಎಲ್​ಸಿಎಚ್​ಗಳು ಕಳೆದ ವಾರ ಬೆಂಗಳೂರಿನಿಂದ ಲಡಾಖ್ ತಲುಪಿದ್ದವು.
ಅಮೆರಿಕದ 11 ಮಂದಿ ಮೇಲೆ ಚೀನಾ ನಿರ್ಬಂಧ:ಹಾಂಕಾಂಗ್​ನಲ್ಲಿ ಚೀನಾ ನಡೆಸಿದ ದೌರ್ಜನ್ಯದ ಬಗ್ಗೆ ಕಟುವಾಗಿ ಟೀಕಿಸಿದ್ದ ಅಮೆರಿಕದ ರಾಜಕೀಯ ಪ್ರಮುಖರೂ ಸೇರಿ 11 ವ್ಯಕ್ತಿಗಳ ವಿರುದ್ಧ ಚೀನಾ ನಿರ್ಬಂಧ ವಿಧಿಸಿದೆ. ಸೆನೆಟರ್​ಗಳಾದ ಮಾರ್ಕೆ ರೂಬಿಯೊ ಮತ್ತು ಟೆಡ್ ಕ್ರೂಜ್, ಹ್ಯೂಮನ್ ರೈಟ್ಸ್ ವಾಚ್ ನಿರ್ದೇಶಕ ಕೆನ್ನೆತ್ ರಾತ್ ಮತ್ತು ನ್ಯಾಷನಲ್ ಎಂಡೋಮೆಂಟ್ ಫಾರ್ ಡೆಮಾಕ್ರಸಿ ಅಧ್ಯಕ್ಷ ಕಾರ್ಲ್ ಗೆರ್ಷ್ಮನ್ ಸೇರಿದಂತೆ 11 ಮಂದಿ ಈ ಪಟ್ಟಿಯಲ್ಲಿದದಾರೆ. ಹಾಂಕಾಂಗ್​ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕ್ಯಾರಿ ಲ್ಯಾಮ್ ಸೇರಿ ಚೀನಾದ 10 ಹಿರಿಯ ಅಧಿಕಾರಿಗಳ ಅಮೆರಿಕದಲ್ಲಿನ ಸ್ವತ್ತುಗಳನ್ನು ಫ್ರೀಜ್ ಮಾಡಿರುವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ರ ಆಡಳಿತ ಶುಕ್ರವಾರ ಘೊಷಿಸಿತ್ತು. ಈ ಕ್ರಮಕ್ಕೆ ಪ್ರತೀಕಾರವಾಗಿ ಚೀನಾ ಅಮೆರಿಕದ 11 ವ್ಯಕ್ತಿಗಳ ಮೇಲೆ ನಿರ್ಬಂಧ ವಿಧಿಸಿದೆ.
ಆಮದಾಗುವ ಪ್ರಮುಖ ವಸ್ತು (ಶೇಕಡವಾರು):* 8.7 – ಟೆಲಿಫೋನ್ ಸೆಟ್ ಮತ್ತು ಇತರ ಧ್ವನಿ ವರ್ಧಕ ಸಾಧನ * 3.4 – ಎಲೆಕ್ಟ್ರಿಕಲ್ ವಸ್ತು, ಪೋಟೋಸೆನ್ಸಿಟಿವ್, ಪಿವಿ ಸೆಲ್ಸ್, ಎಲ್​ಇಡಿ * 3.2 – ಆಟೋಮೇಟಿಕ್ ಡೇಟಾ ಪೋ›ಸೆಸ್ಸಿಂಗ್ ಮೆಷಿನ್ * 2.4 – ಮೊಬೈಲ್​ಗಳು * 1.8 – ಎಲೆಕ್ಟ್ರಾನಿಕ್ ಇಂಟಿಗ್ರೇಟ್ ಸರ್ಕ್ಯೂಟ್, ಪೊ›ಸೆಸ್ಸರ್, ಕಂಟ್ರೋಲರ್​ಗಳು *1.5 – ಡಿಎಪಿ ಫರ್ಟಿಲೈಸರ್ ್ಝ – ಲೀಥಿಯಂ ಐಯೊನ್ * 0.9 – ಟಿವಿ, ಡಿಜಿಟಲ್ ಕ್ಯಾಮೆರಾ * 0.8 – ಪೆನ್ಸಿಲಿಯನ್ ಮತ್ತು ಡೆರಿವೆಟಿವ್ಸ್
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + 9 =
Remember me
