ಶ್ರೀನಗರ: ವಾಸ್ತವ ಗಡಿ ರೇಖೆಯಲ್ಲಿನ ಉದ್ವಿಗ್ನತೆಯನ್ನು ಕಡಿಮೆ ಮಾಡಲು ನವದೆಹಲಿ ಮತ್ತು ಬೀಜಿಂಗ್ ಸೇನಾ ಮತ್ತು ರಾಜತಾಂತ್ರಿಕ ಶಾಂತಿ ಮಾತುಕತೆಯಲ್ಲಿ ತೊಡಗಿದ್ದರೂ ಸಹ, ಚೀನಾ ಪ್ಯಾಂಗಾಂಗ್ ತ್ಸೋ, ಗಾಲ್ವಾನ್ ಕಣಿವೆ ಮತ್ತು ಪೂರ್ವ ಲಡಾಕ್‌ನ ಹಲವು ಪ್ರದೇಶಗಳಲ್ಲಿ ಗಮನಾರ್ಹವಾಗಿ ತನ್ನ ಸೇನಾಬಲವನ್ನು ಹೆಚ್ಚಿಸಿದೆ ಎಂದು ವರದಿಯೊಂದು ತಿಳಿಸಿದೆ.ಪೂರ್ವ ಲಡಾಖ್‌ನ ಪ್ಯಾಂಗಾಂಗ್ ತ್ಸೋ, ಗಾಲ್ವಾನ್ ಕಣಿವೆ, ಡೆಮ್‌ಚಾಕ್ ಮತ್ತು ದೌಲತ್ ಬೇಗ್ ಓಲ್ಡಿಗಳಲ್ಲಿ ಭಾರತೀಯ ಸೇನೆ ಮತ್ತು ಚೀನಾ ಸೇನೆಗಳು ಬಿಕ್ಕಟ್ಟಿನ ಪರಿಸ್ಥಿತಿ ಎದುರಿಸುತ್ತಿವೆ.
ಇದನ್ನೂ ಓದಿ:ಘರ್ಷಣೆ ಬಳಿಕ ಶಾಂತಿ ಮಾತುಕತೆಗೆ ಬದ್ಧತೆ
ಜೂನ್‌ 15 ರಂದು ಗಾಲ್ವಾನ್ ಕಣಿವೆಯಲ್ಲಿ ನಡೆದ ಭೀಕರ ಘರ್ಷಣೆಯ ನಂತರ ಉಂಟಾದ ಉದ್ವಿಗ್ನತೆಯನ್ನು ತಗ್ಗಿಸಲು ಭಾರತ ಮತ್ತು ಚೀನಾ ಮಧ್ಯೆ ಬುಧವಾರ ರಾಜತಾಂತ್ರಿಕ ಮಟ್ಟದ ಮಾತುಕತೆ ನಡೆಯುತ್ತಿದ್ದ ವೇಳೆಯೇ ವಾಸ್ತವ ಗಡಿ ರೇಖೆಯುದ್ದಕ್ಕೂ ಚೀನಾದ ಸೇನಾ ಬಲ ಹೆಚ್ಚಳದ ಕುರಿತು ವರದಿಯಾಗಿದೆ.ಪೂರ್ವ ಲಡಾಖ್‌ನ ಗಾಲ್ವಾನ್‌ನಲ್ಲಿ ಭಾರತೀಯ ಸೈನಿಕರ ಮೇಲೆ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ಪಡೆಗಳು ಪೂರ್ವನಿಯೋಜಿತ ದಾಳಿ ನಡೆಸಿದ ನಂತರ 20 ಭಾರತೀಯ ಯೋಧರು ಹುತಾತ್ಮರಾದರು.
ಪಿಟಿಐ ಪ್ರಕಾರ, ಪ್ಯಾಂಗೊಂಗ್ ತ್ಸೋ, ಗಾಲ್ವಾನ್ ಕಣಿವೆ ಮತ್ತು ಪೂರ್ವ ಲಡಾಖ್‌ನ ಘರ್ಷಣೆ ಕೇಂದ್ರಗಳಲ್ಲಿ ಚೀನಾ ಸೈನಿಕರನ್ನು ನಿಯೋಜಿಸಲಾಗಿದೆ. ಭಾರತದ ತೀವ್ರ ಪ್ರತಿರೋಧದ ನಡುವೆಯೂ, ಚೀನಾದ ಪಡೆಗಳು ಮತ್ತೆ ಈ ಪ್ರದೇಶದಲ್ಲಿ ಗಸ್ತು ತಿರುಗುವ ಸ್ಥಳದ ಸುತ್ತ ಕೆಲವು ರಚನೆಗಳನ್ನು ರೂಪಿಸಿವೆ.ಆತಂಕಕಾರಿ ಪರಿಸ್ಥಿತಿಯಲ್ಲಿ, ವಾಸ್ತವ ಗಡಿ ರೇಖೆ ಸೇರಿ ಅರುಣಾಚಲ ಪ್ರದೇಶ, ಸಿಕ್ಕಿಂ ಮತ್ತು ಉತ್ತರಾಖಂಡದಲ್ಲಿ ಪಿಎಲ್ಎ ತನ್ನ ಸೇನೆ ಮತ್ತು ಶಸ್ತ್ರಾಸ್ತ್ರಗಳನ್ನು ಹೆಚ್ಚಿಸಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಇದನ್ನೂ ಓದಿ:ಭಾರತದ್ದೇ ದಿಗ್ವಿಜಯ; ಗಲ್ವಾನ್​ನಿಂದ ಗೊಗ್ರಾವರೆಗೆ ವಾಸ್ತವ ಗಡಿರೇಖೆಯಿಂದ ಚೀನಿಯರನ್ನು ಹೊರಗಟ್ಟಿದ ಸೇನೆ
ಜೂನ್ 15 ರ ಸಂಘರ್ಷಣೆಯ ನಂತರ ಪೂರ್ವ ಲಡಾಕ್ ಪ್ರದೇಶದ ವಾಸ್ತವ ಗಡಿರೇಖೆಯುದ್ದಕ್ಕೂ ಉದ್ವಿಗ್ನತೆಯನ್ನು ಕಡಿಮೆ ಮಾಡಲು, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ (ಪೂರ್ವ ಏಷ್ಯಾ) ನವೀನ್ ಶ್ರೀವಾಸ್ತವ ಮತ್ತು ಚೀನಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮಹಾನಿರ್ದೇಶಕ ವು ಜಿಯಾಂಗ್​ಹೋ ಮಧ್ಯೆ ಬುಧವಾರ ಮಾತುಕತೆ ನಡೆಯಿತು.“ಈ ನಿಟ್ಟಿನಲ್ಲಿ, ಎರಡೂ ದೇಶಗಳು ವಾಸ್ತವ ಗಡಿ ರೇಖೆಯನ್ನು ಕಟ್ಟುನಿಟ್ಟಾಗಿ ಗೌರವಿಸಬೇಕು ಮತ್ತು ಗಮನಿಸಬೇಕು ಎಂದು ಒತ್ತಿಹೇಳಲಾಯಿತು” ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಕುತೂಹಲಕಾರಿ ಸಂಗತಿಯೆಂದರೆ, ಬೀಜಿಂಗ್ ಘರ್ಷಣೆ ಪ್ರದೇಶಗಳಲ್ಲಿ ಸೈನ್ಯದ ನಿಯೋಜನೆಯನ್ನು ಹೆಚ್ಚಿಸುತ್ತಿದೆ ಎಂಬ ವರದಿಗಳು ಹೊರಬರುತ್ತಿದ್ದರೆ, ಚೀನಾದ ವಿದೇಶಾಂಗ ಸಚಿವಾಲಯವು ಉಭಯ ದೇಶಗಳು “ಸರಳ ಮತ್ತು ಆಳವಾದ ಮಾತುಕತೆಗಳನ್ನು ನಡೆಸಿವೆ ಎಂದು ಹೇಳಿದೆ.
ಇದನ್ನೂ ಓದಿ:ಗಲ್ವಾನ್​ ಘರ್ಷಣೆಯ ಗಾಯಾಳು ಯೋಧರ ಆರೋಗ್ಯ ವಿಚಾರಿಸಿದ ಸೇನಾಪಡೆ ಮುಖ್ಯಸ್ಥ
“ಇತ್ತೀಚಿನ ಚೀನಾ-ಭಾರತದ ಗಡಿ ಪರಿಸ್ಥಿತಿಯ ಬಗ್ಗೆ ಉಭಯ ಪಕ್ಷಗಳು ನಿಸ್ಸಂಶಯವಾಗಿ ಮತ್ತು ಆಳವಾದ ಅಭಿಪ್ರಾಯಗಳನ್ನು ಹಂಚಿಕೊಂಡಿವೆ ಮತ್ತು ಜೂನ್ 17 ರಂದು ತಮ್ಮ ದೂರವಾಣಿ ಕರೆಯ ಸಮಯದಲ್ಲಿ ಉಭಯ ದೇಶಗಳ ವಿದೇಶಾಂಗ ಸಚಿವರು ನೀಡಿದ ಪ್ರಮುಖ ಒಮ್ಮತವನ್ನು ಶ್ರದ್ಧೆಯಿಂದ ಜಾರಿಗೊಳಿಸುವುದಾಗಿ ಒಪ್ಪಿಕೊಂಡಿದ್ದಾರೆ” ಎಂದು ಹೇಳಿಕೆ ವಿದೇಶಾಂಗ ಸಚಿವಾಲಯ ಹೊರಡಿಸಿದೆ.
ಎಲ್‌ಎಸಿಯಲ್ಲಿನ ಬಿಕ್ಕಟ್ಟನ್ನು ಕೊನೆಗೊಳಿಸುವ ಪ್ರಯತ್ನವಾಗಿ, ಎರಡು ಸೈನ್ಯದ ಹಿರಿಯ ಮಿಲಿಟರಿ ಕಮಾಂಡರ್‌ಗಳು, 14 ಕಾರ್ಪ್ಸ್​​​ನ ಕಮಾಂಡರ್, ಲೆಫ್ಟಿನೆಂಟ್ ಜನರಲ್ ಹರಿಂದರ್ ಸಿಂಗ್ ಮತ್ತು ಟಿಬೆಟ್ ಮಿಲಿಟರಿ ಕಮಾಂಡರ್ ಮೇಜರ್ ಜನರಲ್ ಲೆಫ್ಟಿನೆಂಟ್ ಲಿನ್ ಜೂನ್ 22 ರಂದು ಅಂದಾಜು 11 ಗಂಟೆಗಳ ಮ್ಯಾರಥಾನ್ ಸಭೆ ನಡೆಸಿದರುಮಿಲಿಟರಿ ಮಟ್ಟದ ಮಾತುಕತೆಯ ಸಂದರ್ಭದಲ್ಲಿ, “ಹಿಂದೆ ಸರಿಯಲು ಪರಸ್ಪರ ಒಮ್ಮತವಿದ್ದು, ಪೂರ್ವ ಲಡಾಕ್‌ನ ಎಲ್ಲಾ ಘರ್ಷಣೆ ಪ್ರದೇಶಗಳಿಂದ ಬೇರ್ಪಡುವ ವಿಧಾನಗಳನ್ನು ಚರ್ಚಿಸಲಾಗಿದೆ ಮತ್ತು ಎರಡೂ ದೇಶಗಳು ಮುಂದೆ ಅದನ್ನು ಕೈಗೊಳ್ಳಲಿವೆ” ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಗಲ್ವಾನ್ ಕಣಿವೆ ಸಂಘರ್ಷ: ಅಮೆರಿಕ ಗುಪ್ತಚರ ವರದಿ ಬಿಚ್ಚಿಟ್ಟ ರಹಸ್ಯವೇನು?
ಆದರೆ ಭಾರತೀಯ ಸೇನೆಯು ಯಾವುದೇ ಗಂಡಾಂತರಕ್ಕೂ ಅವಕಾಶ ತೆಗೆದುಕೊಳ್ಳದೆ ಹಾಟ್ ಸ್ಪ್ರಿಂಗ್ಸ್, ಡೆಮ್‌ಚೋಕ್, ಕೊಯುಲ್, ಫುಕ್, ಡೆಪ್ಸಾಂಗ್, ಮುರ್ಗೊ ಮತ್ತು ಗಾಲ್ವಾನ್‌ ಪ್ರದೇಶಗಳಲ್ಲಿ ನಿಯೋಜನೆಯನ್ನು ಹೆಚ್ಚಿಸಿದೆ.
ಭಾರತೀಯ ವಾಯುಪಡೆ (ಐಎಎಫ್) ಸಹ ಎಚ್ಚರದಲ್ಲಿದೆ ಮತ್ತು ಗಡಿ ಪ್ರದೇಶಗಳಿಗೆ ಸಮೀಪವಿರುವ ನೆಲೆಗಳಲ್ಲಿ ಮುಂಚೂಣಿಯ ಸುಖೋಯ್ 30 ಎಂಕೆಐ ಫೈಟರ್ ಜೆಟ್‌ಗಳು, ಮಿರಾಜ್ 2000 ಮತ್ತು ಜಾಗ್ವಾರ್ ಯುದ್ಧ ವಿಮಾನಗಳು, ಅಪಾಚೆ ಅಟ್ಯಾಕ್ ಹೆಲಿಕಾಪ್ಟರ್‌ಗಳು ಮತ್ತು ಸಿಎಚ್ -47 ಚಿನೂಕ್ ಹೆಲಿಕಾಪ್ಟರ್‌ಗಳನ್ನು ನಿಯೋಜಿಸಿದೆ.
ಗಲ್ವಾನ್​ ಸಂಘರ್ಷದಲ್ಲಿ ಸತ್ತ ಸೈನಿಕರ ಸಂಖ್ಯೆಯನ್ನು ಬಹಿರಂಗ ಪಡಿಸಿದ ಚೀನಾ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × two =
Remember me
