ನವದೆಹಲಿ: ಬುಧವಾರ ಸಂಜೆ ಮಣಿಪುರದಲ್ಲಿ ಅಸ್ಸಾಂ ರೈಫಲ್ಸ್ ಯೋಧರ ಮೇಲೆ ನಡೆದ ದಾಳಿ ಹಿಂದೆ ಚೀನಾ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ. ದಾಳಿಯಲ್ಲಿ ಮೂವರು ಯೋಧರು ಹುತಾತ್ಮರಾಗಿ, ಹಲವರು ಗಂಭೀರವಾಗಿ ಗಾಯಗೊಂಡಿದ್ದರು.
ಮಣಿಪುರದ ಉಗ್ರಗಾಮಿ ಸಂಘಟನೆ ಜನತಾ ವಿಮೋಚನಾ ಸೇನೆ-ಮಣಿಪುರ (ಪಿಎಲ್​ಎ-ಎಂ) ದಾಳಿ ಮಾಡಿರುವ ಶಂಕೆ ಇದೆ. ಅದಕ್ಕೆ ಚೀನಾ ಸೇನೆ ತರಬೇತಿ ಕೊಟ್ಟಿದೆ ಎಂದು ಗುಪ್ತಚರ ಸಂಸ್ಥೆಗಳು ಅನುಮಾನ ವ್ಯಕ್ತಪಡಿಸಿವೆ. ಉಗ್ರಗಾಮಿ ಸಂಘಟನೆಗಳಿಗೆ ಚೀನಾ ಸೇನೆ ತರಬೇತಿ ನೀಡುತ್ತಿರುವ ಬಗ್ಗೆ 2009ರಲ್ಲಿ ಬಂಡುಕೋರನೊಬ್ಬ ವಿಚಾರಣೆ ವೇಳೆ ಮಾಹಿತಿ ನೀಡಿದ್ದ.
ಭಾರತ, ಭೂತಾನ್ ದೇಶಗಳ ಭೂಪ್ರದೇಶಗಳನ್ನು ಅತಿಕ್ರಮಿಸುವ ಚೀನಾ ನಡೆ, ಅದರ ಪ್ರಾದೇಶಿಕ ವಿಸ್ತರಣಾ ಉದ್ದೇಶವನ್ನು ಸ್ಪಷ್ಟಪಡಿಸುತ್ತದೆ. ಜಗತ್ತಿನ ತಾಳ್ಮೆಯನ್ನು ಪರೀಕ್ಷಿಸುವಂತಿದೆ. 1989ರಿಂದಲೂ ಚೀನಾ ಆಕ್ರಮಣಕಾರಿ ನಡೆಯ ಸಂಕೇತವನ್ನು ಜಗತ್ತಿಗೆ ನೀಡುತ್ತಿದೆ. ಷಿ ಜಿನ್​ಪಿಂಗ್ ಅಧಿಕಾರಕ್ಕೆ ಬಂದಾಗಿನಿಂದಂತೂ ಅದು ನಿಚ್ಚಳವಾಗಿದೆ–ಮೈಕ್ ಪಾಂಪಿಯೊ,ಅಮೆರಿಕದ ವಿದೇಶಾಂಗ ಕಾರ್ಯದರ್ಶಿ
ಭಾರತದ ಲಡಾಖ್ ಬಳಿಯಿರುವ ವಾಸ್ತವ ನಿಯಂತ್ರಣ ರೇಖೆಯನ್ನು (ಎಲ್​ಎಸಿ) ಬದಲಾಯಿಸಲು ಚೀನಿ ಸೇನೆ ಇತ್ತೀಚೆಗೆ ಪ್ರಯತ್ನಿಸಿತ್ತು. ಇದರಿಂದಾಗಿ ಪೂರ್ವ ಲಡಾಖ್​ನಲ್ಲಿ ಎರಡು ತಿಂಗಳು ಉದ್ವಿಗ್ನ ವಾತಾವರಣ ನೆಲೆಸಿತ್ತು. ಈ ಬಳಿಕ ಅಸ್ಸಾಂ ರೈಫಲ್ಸ್ ಯೋಧರ ಮೇಲೆ ಬಂಡುಕೋರರು ದಾಳಿ ನಡೆಸಿದ್ದರು. ಮಣಿಪುರದಲ್ಲಿ ಸಕ್ರಿಯವಾಗಿರುವ ಪಿಎಲ್​ಎಯನ್ನು ಬಂಡುಕೋರ ನಾಯಕ ಎನ್. ಬಿಶೇಶ್ವರ್ ಸ್ಥಾಪಿಸಿದ್ದರು. ಈಶಾನ್ಯ ವಲಯವನ್ನು ಭಾರತದಿಂದ ವಿಮೋಚನೆಗೊಳಿಸುವುದು ಹಾಗೂ ನಂತರ ಭಾರತದ ಉಳಿದ ಭಾಗದ ವಿಮೋಚನೆಗೆ ಅದನ್ನು ನೆಲೆಯಾಗಿಸಿಕೊಳ್ಳುವುದು ಪಿಎಲ್​ಎ ಉದ್ದೇಶವಾಗಿದೆ. ಚೀನಾ ಬೆಂಬಲದೊಂದಿಗೆ ‘ಸ್ವಾತಂತ್ರ್ಯ ಹೋರಾಟ’ ನಡೆಸಲು ಈ ಬಂಡುಕೋರ ಸಂಘಟನೆ ಕರೆ ನೀಡಿದೆ.
ಇದನ್ನೂ ಓದಿ:ಸ್ಮಾರ್ಟ್​ಫೋನ್ ಕಳೆದುಕೊಂಡವರ ತುರ್ತು ಗಮನಕ್ಕೆ…
ಚೀನಾದಿಂದ ಟಿವಿ ಆಮದು ನಿರ್ಬಂಧ:ಬಣ್ಣದ ಟೆಲಿವಿಷನ್ ಸೆಟ್​ಗಳ ಆಮದಿನ ಮೇಲೆ ಕೇಂದ್ರ ಸರ್ಕಾರ ನಿರ್ಬಂಧ ವಿಧಿಸಿದೆ. ದೇಶೀಯ ಉತ್ಪಾದನೆಗೆ ಉತ್ತೇಜನ ನೀಡುವುದು ಹಾಗೂ ಚೀನಾದಂಥ ದೇಶಗಳಿಂದ ಅನಗತ್ಯ ವಸ್ತುಗಳ ಆಮದಿಗೆ ಕಡಿವಾಣ ಹಾಕುವುದು ಇದರ ಉದ್ದೇಶವಾಗಿದೆ. ಚೀನಾದ 106 ಆಪ್​ಗಳ ಮೇಲೆ ನಿರ್ಬಂಧ ಹೇರಿದ ಬೆನ್ನಲ್ಲೇ ಈ ಕ್ರಮ ಕೈಗೊಳ್ಳುವ ಮೂಲಕ ಚೀನಾದ ಆರ್ಥಿಕತೆಗೆ ಇನ್ನಷ್ಟು ಹೊಡೆತ ನೀಡಲು ನರೇಂದ್ರ ಮೋದಿ ಸರ್ಕಾರ ಮುಂದಾಗಿದೆ. ಚೀನಾ, ವಿಯೆಟ್ನಾಂ, ಮಲೇಷ್ಯಾ ಮತ್ತಿತರ ದೇಶಗಳಿಂದ 7000 ಕೋಟಿ ರೂಪಾಯಿ ಮೌಲ್ಯದ ಕಲರ್ ಟಿವಿ ಸೆಟ್​ಗಳು ಪ್ರತಿವರ್ಷ ಆಮದು ಆಗುತ್ತಿವೆ.
ಇದನ್ನೂ ಓದಿ:ಫಾರಿನ್ ಕಲರ್ ಟಿವಿ ಆಸೆ ಬಿಟ್ಟುಬಿಡಿ: ಇನ್ನೇನಿದ್ರೂ ಮೇಡ್ ಇನ್ ಇಂಡಿಯಾ ಜಮಾನಾ
ವ್ಯಾಪಕ ಸ್ವಾಗತ:ಹೊಸ ನೀತಿಯನ್ನು ಉದ್ಯಮ ವಲಯ ವ್ಯಾಪಕವಾಗಿ ಸ್ವಾಗತಿಸಿದೆ. ಇಂಥ ದಿಟ್ಟ ನಿರ್ಧಾರವನ್ನು ಕೇಂದ್ರ ಸರ್ಕಾರದಿಂದ ನಿರೀಕ್ಷಿಸಲಾಗುತ್ತಿತ್ತು ಎಂದು ಗೋದ್ರೆಜ್ ಅಪ್ಲಯನ್ಸ್​ಸ್​ನ ಕಾರ್ಯ ನಿರ್ವಾಹಕ ಉಪಾಧ್ಯಕ್ಷ ಕಮಲ್ ನಂದಿ ಹೇಳಿದ್ದಾರೆ. ಈ ನೀತಿಯಿಂದಾಗಿ ಬೆಲೆಗಳ ಮೇಲೆ ಯಾವುದೇ ಪರಿಣಾಮ ಬೀರದು. ಗ್ರಾಹಕರಿಗೆ ತೊಂದರೆಯಾಗದು ಎಂದಿದ್ದಾರೆ. ದೇಶದಲ್ಲಿ ಹೂಡಿಕೆಯಾಗಿ ಉದ್ಯೋಗಾವಕಾಶವೂ ಹೆಚ್ಚಲಿದೆ ಎಂದು ಅವರು ತಿಳಿಸಿದ್ದಾರೆ.
ಕೋವಿಡ್ 19 ಪರಿಣಾಮ: ಹಜ್ ಯಾತ್ರೆ ಅಂದು- ಇಂದು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × one =
Remember me
