ರಾಘವ ಶರ್ಮ ನಿಡ್ಲೆ, ನವದೆಹಲಿ
ಪೂರ್ವ ಲಡಾಖ್​ನಲ್ಲಿ ಭಾರತದೊಂದಿಗೆ ಗಡಿ ಕ್ಯಾತೆ ತೆಗೆದಿರುವ ಚೀನಾ ಯುದ್ಧ ಸನ್ನದ್ಧರಾಗಿರುವಂತೆ ತನ್ನ ಸೇನೆಗೆ ಸೂಚನೆ ನೀಡಿದೆ. ಪೀಪಲ್ಸ್ ಲಿಬರೇಷನ್ ಆರ್ವಿು (ಪಿಎಲ್​ಎ) ಮತ್ತು ಪೀಪಲ್ಸ್ ಆರ್ಮ್​ಡ್​ ಪೊಲೀಸ್ ಫೋರ್ಸ್ ಜಂಟಿಯಾಗಿ ಏರ್ಪಡಿಸಿದ್ದ ದ್ವೈವಾರ್ಷಿಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ವೇಳೆ ತಮ್ಮ ಸೇನೆಗೆ ಈ ನಿರ್ದೇಶನ ನೀಡಿದ್ದಾರೆ. ಚೀನೀ ಅಧ್ಯಕ್ಷರ ಹೇಳಿಕೆ ಜಾಗತಿಕ ಚರ್ಚೆಗೆ ಗ್ರಾಸವಾಗಿದ್ದರೂ, ವಾಸ್ತವದಲ್ಲಿ ಚೀನಾ ಉದ್ದೇಶಿತ ಗುರಿ ಯಾವುದು? ಭಾರತ, ಅಮೆರಿಕ, ತೈವಾನ್.. ಮೂರೂ ದೇಶಗಳಿಗೆ ಕಠಿಣ ಸಂದೇಶ ರವಾನಿಸುವುದು ಜಿನ್​ಪಿಂಗ್ ಉದ್ದೇಶವಾಗಿರಬಹುದೇ?
ಅದೇನೇ ಇರಲಿ, ಭಾರತಕ್ಕೆ ಚೀನಾ ಗಡಿ ತಂಟೆ ಹೊಸದಲ್ಲ. ಲಡಾಖ್​ಅನ್ನು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶ ಎಂದು ಕೇಂದ್ರ ಸರ್ಕಾರ ಘೊಷಿಸಿದ ದಿನದಿಂದ ಚೀನಾ ಚಡಪಡಿಕೆ ಆರಂಭವಾಗಿದೆ. ಲಡಾಖ್​ನ ಕೆಲ ಭಾಗಗಳು ತನಗೆ ಸೇರಿದ್ದೆಂದು ಚೀನಾ ಹಿಂದಿನಿಂದಲೂ ಪ್ರಸ್ತಾಪಿಸುತ್ತಿದೆ ಮತ್ತು 1962ರ ಯುದ್ಧದಲ್ಲಿ ಅಕ್ಸಾಯ್ ಚಿನ್ ಪ್ರದೇಶ ವಶಪಡಿಸಿಕೊಂಡಿದೆ. ಅದನ್ನು ಈವರೆಗೆ ಚೀನಾ ಭಾರತಕ್ಕೆ ಬಿಟ್ಟುಕೊಟ್ಟಿಲ್ಲ. ಈ ವರ್ಷ ಗಡಿ ಭಾಗದಲ್ಲಿ ಚೀನಾ ಅತಿಕ್ರಮಣವೂ ದುಪ್ಪಟ್ಟಾಗಿದೆ. ಜಗತ್ತು ಕರೊನಾ ವಿರುದ್ಧ ಹೋರಾಡುತ್ತಿದೆ. ಅಂತಾರಾಷ್ಟ್ರೀಯ ಸಮುದಾಯಗಳು ಕರೊನಾ ಮೂಲದ ಬಗ್ಗೆ ತನಿಖೆಗೆ ಒತ್ತಾಯಿಸುತ್ತಿರುವಾಗ ಚೀನಾ ಈ ಮೂಲಕ ಬೆದರಿಕೆ ತಂತ್ರ ಹೂಡಿರಬಹುದೇ ಎಂಬ ಪ್ರಶ್ನೆಗಳೆದ್ದಿವೆ.
ಇದನ್ನೂ ಓದಿಜಾಗತಿಕ ನಾಯಕರ ಮಧ್ಯೆ ಮೋದಿ ಜನಪ್ರಿಯತೆ ಮತ್ತಷ್ಟು ಹೆಚ್ಚಳ
ಕೆಲ ದಿನಗಳ ಹಿಂದೆ ಉತ್ತರಾಖಂಡದ ಪಿತೋರ್​ಗಢ ಜಿಲ್ಲೆಯ ಲಿಪುಲೇಖ್, ಕಾಲಪಾನಿ ಮತ್ತು ಲಿಂಪಿಯಾಧುರ ಪ್ರದೇಶಗಳು ನೇಪಾಳದ ಭಾಗವಾಗಿವೆ ಎಂದು ನೇಪಾಳ ಸರ್ಕಾರ ಹೊಸ ನಕಾಶೆಯೊಂದನ್ನು ಬಿಡುಗಡೆ ಮಾಡಿದ್ದರ ಹಿಂದೆಯೂ ಚೀನಾದ ಆಡಳಿತಾರೂಢ ಪಕ್ಷ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾದ ಕೈವಾಡವಿತ್ತು. ಇದನ್ನು ಭಾರತೀಯ ಭೂಸೇನೆ ಮುಖ್ಯಸ್ಥರೂ ಪರೋಕ್ಷವಾಗಿ ಹೇಳಿದ್ದರು. ಏತನ್ಮಧ್ಯೆ, ಲಡಾಖ್​ನ ಚೀನಾ-ಭಾರತ ಗಡಿ ನಿಯಂತ್ರಣ ವಾಸ್ತವಿಕ ರೇಖೆಯಲ್ಲೂ ಉದ್ವಿಗ್ನ ಸ್ಥಿತಿ ಉಂಟಾಗಿದೆ. ಉಭಯ ದೇಶಗಳ ಸೇನಾನಿಗಳ ಮಧ್ಯೆ 2 ಬಾರಿ ಚಕಮಕಿ ಸಂಭವಿಸಿದೆ. ಅಲ್ಲದೆ, ಕೆಲ ಹೊತ್ತಿನವರೆಗೆ ಭಾರತದ ಕೆಲವು ಸೇನಾನಿಗಳನ್ನು ಚೀನಾ ವಶಕ್ಕೆ ಪಡೆದಿತ್ತು ಮತ್ತು ಸ್ಥಳೀಯ ಮಟ್ಟದಲ್ಲಿ ಸೇನಾ ನಾಯಕರ ಮಾತುಕತೆ ಬಳಿಕ ಆ ಸೇನಾನಿಗಳನ್ನು ಬಿಡುಗಡೆ ಮಾಡಲಾಯಿತೆಂದು ರಕ್ಷಣಾ ಮೂಲಗಳು ಹೇಳುತ್ತಿವೆ. ಪರಿಸ್ಥಿತಿ ಉದ್ವಿಘ್ನಗೊಂಡಿರುವುದರಿಂದ ಎರಡೂ ದೇಶಗಳು ಗಡಿ ಭಾಗದಲ್ಲಿ ಸೇನಾ ನಿಯೋಜನೆ ದುಪ್ಪಟ್ಟುಗೊಳಿಸಿವೆ.
ಚೀನಾದಿಂದಲೇ ಪ್ರತ್ಯೇಕಗೊಂಡಿದ್ದ ತೈವಾನ್​ನನ್ನು ಪ್ರತ್ಯೇಕ ದೇಶ ಎಂದು ಚೀನಾ ಗುರುತಿಸುವುದಿಲ್ಲ. ಆದರೆ, ತೈವಾನ್​ನ ಬಹುತೇಕ ಮಂದಿಗೆ ಚೀನಾದಲ್ಲಿ ವಿಲೀನವಾಗುವುದು ಬೇಕಿಲ್ಲ. ಚೀನಾ- ತೈವಾನ್ ಬಿಕ್ಕಟ್ಟೂ ಹೊಸದೇನಲ್ಲ. ಈ ನಡುವೆ, ತೈವಾನ್ ಅಧ್ಯಕ್ಷೆಯಾಗಿ ಮರು ಆಯ್ಕೆಗೊಂಡಿದ್ದ ತ್ಸೈ-ಇಂಗ್-ವೆನ್ ಅವರಿಗೆ ಕೇಂದ್ರದಲ್ಲಿ ಆಡಳಿತಾರೂಢ ಪಕ್ಷವಾಗಿರುವ ಬಿಜೆಪಿಯ ಇಬ್ಬರು ಸಂಸದರು ಅಭಿನಂದನಾ ಸಂದೇಶಗಳನ್ನು ಕಳುಹಿಸಿದ್ದಕ್ಕೆ ಚೀನಾ ಆಕ್ರೋಶಗೊಂಡಿತ್ತು. ತ್ಸೈ ನಾಯಕತ್ವದಲ್ಲಿ ತನ್ನ ರಕ್ಷಣಾ ಸಾಮರ್ಥ್ಯವನ್ನು ತೈವಾನ್ ಬಲಿಷ್ಠಗೊಳಿಸಲು ಮುಂದಾಗಿದ್ದು, ಚೀನಾದ ಅತಿಕ್ರಮಣದ ವಿರುದ್ಧವೂ ಹೋರಾಡುತ್ತಿದೆ. ತೈವಾನ್ ಏಪ್ರಿಲ್​ನಲ್ಲಿ ತನ್ನ ಮಹತ್ವಾಕಾಂಕ್ಷೆಯ ಕ್ಷಿಪಣಿ ಪರೀಕ್ಷೆ ನಡೆಸಿತ್ತು. ಅಗತ್ಯಬಿದ್ದಲ್ಲಿ ಈ ಅಸ್ತ್ರವನ್ನು ಚೀನಾ ವಿರುದ್ಧ ಬಳಸಿಕೊಳ್ಳಲು ತೈವಾನ್ ಹಿಂದೇಟು ಹಾಕದು ಎನ್ನಲಾಗಿದೆ. ತೈವಾನ್ ಅಮೆರಿಕ ಜತೆ ರಕ್ಷಣಾ ಒಪ್ಪಂದಗಳನ್ನು ಮಾಡಿಕೊಂಡಿದ್ದು. 8 ಬಿಲಿಯನ್ ಮೌಲ್ಯದ ಎಫ್-16 ಫೈಟರ್ ಜೆಟ್ ಖರೀದಿಸಿದೆ. ಸೈನ್ಯ ಮತ್ತು ನೌಕಾಪಡೆಗೆ ಕ್ಷಿಪಣಿ ಖರೀದಿಸಲು 2 ಬಿಲಿಯನ್ ಮೌಲ್ಯದ ಒಪ್ಪಂದ ಮಾಡಿದೆ. ಹೀಗಾಗಿ ಭಾರತ-ಚೀನಾ ಸುದೃಢ ಸಂಬಂಧವೂ ಭಾರತದ ವಿರುದ್ಧ ಚೀನಾ ನಂಜು ಹೆಚ್ಚಿಸಿದೆ.
ಇದನ್ನೂ ಓದಿಸಾಮಾಜಿಕ ಜಾಲತಾಣ ವೇದಿಕೆಗಳಿಗೆ ಬೆದರಿಕೆಯೊಡ್ಡಿದ ಡೊನಾಲ್ಡ್ ಟ್ರಂಪ್​…!
ಈ ನಡುವೆ, ಭಾರತ-ಚೀನಾ ಗಡಿಯ ಒಟ್ಟಾರೆ ಪರಿಸ್ಥಿತಿ ಸ್ಥಿರ ಮತ್ತು ನಿಯಂತ್ರಣದಲ್ಲಿದೆ. ಸಂವಾದ-ಸಮಾಲೋಚನೆ ಮೂಲಕ ಸಮಸ್ಯೆ ಪರಿಹರಿಸಲು ಎರಡೂ ದೇಶಗಳು ಸೂಕ್ತ ಕಾರ್ಯವಿಧಾನ-ಸಂವಹನ ಮಾರ್ಗಗಳನ್ನು ಹೊಂದಿವೆ ಎಂದು ಚೀನಾ ವಿದೇಶಾಂಗ ಇಲಾಖೆ ವಕ್ತಾರ ಝಾವೋ ಲಿಜಿಯನ್ ಹೇಳಿದ್ದಾರೆ. ಭಾರತ-ಚೀನಾ ಕೋವಿಡ್-19 ವಿರುದ್ಧ ಹೋರಾಡುತ್ತಿವೆ ಮತ್ತು ನಮ್ಮ ಸಂಬಂಧಗಳನ್ನು ಗಟ್ಟಿಗೊಳಿಸುವ ಉದ್ದೇಶವೂ ಇದೆ. ಎರಡೂ ದೇಶಗಳು ಪರಸ್ಪರ ಅವಕಾಶಗಳನ್ನು ಒದಗಿಸುವ ನೆಲೆಗಳಾಗಿವೆ ಎಂದು ನಮ್ಮ ಯುವಕರ ನಿರೀಕ್ಷೆ ನಿಜವಾಗಬೇಕು. ಬೆದರಿಕೆಗೆ ಇಲ್ಲಿ ಜಾಗವಿರಬಾರದು ಎಂದು ಭಾರತದಲ್ಲಿರುವ ಚೀನಾದ ರಾಯಭಾರಿ ಸುನ್ ವೀಡಾಂಗ್ ಅಭಿಪ್ರಾಯಪಟ್ಟಿದ್ದಾರೆ.
ಮೂರು ವಲಯಗಳು
ಭಾರತ-ಚೀನಾ ಗಡಿಯನ್ನು 3 ವಲಯಗಳಾಗಿ ವಿಂಗಡಿಸಲಾಗಿದೆ. ಪಶ್ಚಿಮ ವಲಯದ ಗಡಿ ನಿಯಂತ್ರಣ ವಾಸ್ತವಿಕ ರೇಖೆ ಕೇಂದ್ರಾಡಳಿತ ಪ್ರದೇಶ ಲಡಾಖ್ ವ್ಯಾಪ್ತಿಯಲ್ಲಿದ್ದು, 1597 ಕಿ.ಮೀ. ವಿಸ್ತಾರ ಹೊಂದಿದೆ. 545 ಕಿ.ಮೀ. ಉದ್ದದ ಮಧ್ಯ ವಲಯವು ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದಲ್ಲಿದೆ. 1346 ಕಿ.ಮೀ. ಪೂರ್ವ ವಲಯ ಸಿಕ್ಕಿಂ-ಅರುಣಾಚಲ ಪ್ರದೇಶದ ರಾಜ್ಯಗಳಲ್ಲಿದೆ. ಮಧ್ಯ ವಲಯ ಕಡಿಮೆ ವಿವಾದಿತ ವಲಯವಾಗಿದ್ದರೆ, ಪಶ್ಚಿಮ ವಲಯ ಎರಡೂ ದೇಶಗಳ ಮಧ್ಯೆ ಗರಿಷ್ಠ ಗಡಿ ಉಲ್ಲಂಘನೆಗೆ ಸಾಕ್ಷಿ ಆಗಿದೆ.
ಇದನ್ನೂ ಓದಿ‘ಗಡಿ ವಿವಾದ ಸಂಬಂಧವನ್ನು ಹಾಳುಗೆಡುವದಿರಲಿ’: ಮಾತುಕತೆಯತ್ತ ಒಲವು ತೋರಿದ ಚೀನಾ ರಾಯಭಾರಿ
ವೈಟ್ ಹೌಸ್ ವರದಿ, ಟ್ರಂಪ್ ಕಿಡಿ
ಚೀನಾ ಅತಿಕ್ರಮಣದ ಹಿನ್ನೆಲೆಯಲ್ಲಿ ಮೇ 22ರಂದು ಅಮೆರಿಕದ ವೈಟ್ ಹೌಸ್ ಬಿಡುಗಡೆ ಮಾಡಿರುವ ವರದಿಯಲ್ಲಿ ಚೀನಾ ನಡೆಯನ್ನು ಟೀಕಿಸಲಾಗಿದೆ. ಬೀಜಿಂಗ್ ತನ್ನ ಮಾತಿಗೆ ತಕ್ಕಂತೆ ನಡೆದುಕೊಂಡಿಲ್ಲ. ಹಳದಿ ಸಮುದ್ರ, ಪೂರ್ವ ಮತ್ತು ದಕ್ಷಿಣ ಚೀನಾ ಸಮುದ್ರಗಳು, ತೈವಾನ್ ಜಲಸಂಧಿ ಮತ್ತು ಚೀನಾ-ಭಾರತೀಯ ಗಡಿ ಪ್ರದೇಶಗಳಲ್ಲಿ ಪ್ರಚೋದನಕಾರಿ ಮತ್ತು ದಬ್ಬಾಳಿಕೆಯ ಮಿಲಿಟರಿ, ಅರೆಸೇನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ವಾಗ್ದಾನಕ್ಕೆ ತದ್ವಿರುದ್ಧವಾಗಿ ವರ್ತಿಸುತ್ತಿದೆ ಎಂದು ಶ್ವೇತಭವನದ ಯುನೈಟೆಡ್ ಸ್ಟೇಟ್ಸ್ ಸ್ಟ್ರಾಟಜಿಕ್ ಅಪೋ›ಚ್ ಟು ದ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ವರದಿಯಲ್ಲಿ ಹೇಳಲಾಗಿದೆ. ಈ ಮಧ್ಯೆ, ಹಾಂಕಾಂಗ್ ನಲ್ಲಿ ರಾಷ್ಟ್ರೀಯ ಭದ್ರತಾ ಕಾನೂನು ಹೇರಲು ಯತ್ನಿಸುತ್ತಿರುವ ಚೀನಾ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿರುವುದು ಕುತೂಹಲ ಕೆರಳಿಸಿದೆ. ಹಾಂಕಾಂಗ್ ಬಗ್ಗೆ ಚೀನಾದ ದುರ್ವರ್ತನೆ ಹಿನ್ನೆಲೆಯಲ್ಲಿ ನೀವು ಚೀನಾ ಮೇಲೆ ನಿರ್ಬಂಧ ಹೇರುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, ಬಹಳ ಕುತೂಹಲಕರವಾದ ಮತ್ತು ಬಲಿಷ್ಠ ಎನಿಸಿದ ಬೆಳವಣಿಗೆಯೊಂದ ನಡೆಯಲಿದೆ. ಈ ಬಗ್ಗೆ ಹೆಚ್ಚೇನೂ ಹೇಳಲಾರೆ. ಕಾದು ನೋಡಿ ಎಂದಿದ್ದಾರೆ. ಹಾಗೇ, ಭಾರತ-ಚೀನಾ ಗಡಿ ಸಮಸ್ಯೆ ಬಗೆಹರಿಸುವ ಸಲುವಾಗಿ ಸಂಧಾನಕಾರ ಪಾತ್ರವಹಿಸಲೂ ಅಮೆರಿಕ ಸಿದ್ಧವಿದೆ. ಎರಡೂ ದೇಶಗಳಿಗೆ ನಮ್ಮ ಆಶಯ ತಿಳಿಸಿದ್ದೇವೆ ಎಂದು ಟ್ರಂಪ್ ಮಾಹಿತಿ ಹಂಚಿಕೊಂಡಿದ್ದಾರೆ.
ಮೂಲಸೌಕರ್ಯ ಹೆಚ್ಚಳ-ಚೀನಾಗೆ ತಲೆಬಿಸಿ
ಕಳೆದ ಕೆಲವು ವರ್ಷಗಳಿಂದ ಭಾರತವು ಲಡಾಖ್-ಅರುಣಾಚಲ ಪ್ರದೇಶದವರೆಗೆ 3488 ಕಿಮೀ ಉದ್ದದ ಗಡಿ ಪ್ರದೇಶದಲ್ಲಿ ಸೈನ್ಯ ಹಾಗೂ ಶಸ್ತ್ರಾಸ್ತ್ರ ವ್ಯವಸ್ಥೆಗಳ ಚಲನಶೀಲತೆ ಹೆಚ್ಚಿಸಲು ಮೂಲಸೌಕರ್ಯ ನಿರ್ವಣದಲ್ಲಿ ಪ್ರಗತಿ ಸಾಧಿಸಿದೆ. ಚೀನಾ ದೇಶದ ಗಡಿಯಲ್ಲಿನ ಮೂಲಸೌಕರ್ಯಕ್ಕೆ ಹೋಲಿಸಿದರೆ ಭಾರತ ಸಾಗಬೇಕಿರುವ ಹಾದಿ ಬಹಳಷ್ಟಿದ್ದರೂ, ಭಾರತ ತನ್ನ ಮಿಲಿಟರಿ ಸಾಮರ್ಥ್ಯ ಹೆಚ್ಚಿಸಿಕೊಂಡಿರುವುದು ಸಹಜವಾಗೇ ಚೀನಾವನ್ನು ಕೆರಳಿಸುತ್ತಿದೆ. ಕಳೆದ ವರ್ಷ ಭಾರತ ದರ್ಬುಕ್-ಶ್ಯೋಕ್-ದೌಲತ್ ಬೇಗ್ ಒಲ್ಡೀಗೆ (ಡಿಬಿಒ) ಸಂರ್ಪಸುವ 255 ಕಿಮೀ ಉದ್ದ ರಸ್ತೆ ನಿರ್ಮಾಣ ಕಾರ್ಯ ಪೂರ್ಣಗೊಳಿಸಿತ್ತು. ಈಗ ರಸ್ತೆ, ಸೇತುವೆಗಳನ್ನು ನಿರ್ವಿುಸುತ್ತಿದೆ. ಪೂರ್ವ ಲಡಾಖ್​ನಲ್ಲಿ ಭಾರತೀಯ ಸೇನೆಯ ಮುಖಾಮುಖಿ ಆಗಲು ಇದೂ ಚೀನಾವನ್ನು ಪ್ರಚೋದಿಸಿರಬಹುದು.
ವಿಯೆಟ್ನಾಂನಲ್ಲಿ ಒಂಬತ್ತನೇ ಶತಮಾನದ ಶಿವಲಿಂಗ ಪತ್ತೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + eleven =
Remember me
