ನವದೆಹಲಿ/ಮೆಲ್ಬೋರ್ನ್​:ನಾಲ್ಕು ದೇಶಗಳ ಕ್ವಾಡ್​ ಕೂಟ ಚೀನಾವನ್ನು ಕಟ್ಟಿ ಹಾಕಿ ಅಮೆರಿಕದ ಅಧಿಪತ್ಯವನ್ನು ಉಳಿಸಿಕೊಳ್ಳುವ ಸಾಧನವಾಗಿದೆ ಎಂದು ಚೀನಾ ಮಾಡಿರುವ ಟೀಕೆಗೆ ಭಾರತ ಖಡಕ್​ ತಿರುಗೇಟು ನೀಡಿದೆ. ಕ್ವಾಡ್​ ಧೋರಣೆ ಹಾಗೂ ಕೃತ್ಯಗಳು ಸ್ಪಷ್ಟವಾಗಿವೆ. ಅದನ್ನು ಪದೇ ಪದೇ ಟೀಕಿಸುವುದರಿಂದ ಕೂಟದ ವಿಶ್ವಾಸಾರ್ಹತೆ ಕುಂದುವುದಿಲ್ಲ ಎಂದು ವಿದೇಶಾಂಗ ಸಚಿವ ಎಸ್​. ಜೈಶಂಕರ್​ ಶನಿವಾರ ಹೇಳಿದ್ದಾರೆ.
ಭಾರತ ಮತ್ತು ಚೀನಾ ನಡುವಿನ ಬಿಗುವು ಇಡೀ ಅಂತಾರಾಷ್ಟ್ರೀಯ ಸಮುದಾಯಕ್ಕೆ ಕಳವಳದ ಸಂಗತಿಯಾಗಿದೆ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ. ವಾಸ್ತವ ಗಡಿ ರೇಖೆಯಲ್ಲಿ (ಎಲ್​ಎಸಿ) ಪಡೆಗಳನ್ನು ಜಮಾಯಿಸಬಾರದು ಎಂಬ ಭಾರತದೊಂದಿಗೆ 2020ರಲ್ಲಿ ಮಾಡಿಕೊಂಡ ಲಿಖಿತ ಒಪ್ಪಂದವನ್ನು ಚೀನಾ ಅಗೌರವಿಸಿದ್ದೇ ಈಗಿನ ಪರಿಸ್ಥಿತಿ ಉದ್ಭವಿಸಲು ಕಾರಣ ಎಂದು ಅವರು ಹೇಳಿದ್ದಾರೆ.
ಕ್ವಾಡ್​ ವಿದೇಶಾಂಗ ಸಚಿವರ ಸಭೆಯಲ್ಲಿ ಭಾರತ-ಚೀನಾ ಸಂಬಂಧಗಳ ಬಗ್ಗೆ ಚರ್ಚೆ ನಡೆದಿದೆ ಎಂದೂ ಜೈಶಂಕರ್​ ತಿಳಿಸಿದ್ದಾರೆ. ಉಭಯ ದೇಶಗಳ ನಡುವಿನ ವಿವಾದದ ಬಗ್ಗೆ ಜಾಗತಿಕ ಸಮುದಾಯ, ಅದರಲ್ಲೂ ವಿಶೇಷವಾಗಿ ಇಂಡೊ- ಪೆಸಿಫಿಕ್​ ವಲಯದ ದೇಶಗಳು ಕಾಳಜಿ ವಹಿಸಲು ಸಕಾರಣವಿದೆ ಎಂದು ಹೇಳಿದ್ದಾರೆ.
ಕ್ವಾಡ್​ನ ಧನಾತ್ಮಕ ಕೊಡುಗೆ ಬಗ್ಗೆ ಯಾರೂ ಅನುಮಾನ ವ್ಯಕ್ತಪಡಿಸಬೇಕಿಲ್ಲ ಎಂದ ಜೈಶಂಕರ್​, ಭಾರತ ಕ್ರಿಕೆಟ್​ ತಂಡದ ಮಾಜಿ ನಾಯಕ ವಿರಾಟ್​ ಕೊಹ್ಲಿ ಸಹಿ ಹಾಕಿದ್ದ ಬ್ಯಾಟ್​ಒಂದನ್ನು ಆಸ್ಟ್ರೆಲಿಯಾ ವಿದೇಶ ಸಚಿವೆ ಮಾರಿಸ್​ ಪೈನ್​ರಿಗೆ ಕೊಡುಗೆಯಾಗಿ ನೀಡಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − nine =
Remember me
