ನವದೆಹಲಿ:ಕೇರಳದ ವಯನಾಡು ಸಂಸದ, ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ವಿದೇಶ ನೀತಿ ಬಗ್ಗೆ ಲೋಕಸಭೆಯಲ್ಲಿ ಬುಧವಾರ ನೀಡಿದ್ದ ಹೇಳಿಕೆ ವ್ಯಾಪಕ ಟೀಕೆ ಮತ್ತು ವಿವಾದಕ್ಕೆ ಒಳಗಾಗಿದೆ. ಗುರುವಾರದ ಕಲಾಪದ ವೇಳೆ ಬಿಜೆಪಿ ಸದಸ್ಯರು, ರಾಹುಲ್​ ಹೇಳಿಕೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರಲ್ಲದೆ, ವಾಗ್ದಾಳಿ ಮುಂದುವರಿಸಿದರು. ಸಂಸತ್ತಿನ ಹೊರಗೂ ರಾಹುಲ್​ ಹೇಳಿಕೆ ಟೀಕೆಗೆ ಒಳಗಾಗಿದೆ. ರಾಹುಲ್​ ಮನಸ್ಸಿನಲ್ಲಿ ತಾನು “ಭಾರತದ ಯುವರಾಜ’ ಎಂಬ ಭಾವನೆ ಇದೆ. ಹೀಗಾಗಿ ಇಲ್ಲಿ ಆಳ್ವಿಕೆ ಮಾಡುತ್ತಿರುವುದು “ರಾಜ’ ಎಂದು ಭಾವಿಸಿದಂತೆ ಇದೆ ಎಂದು ಕೇಂದ್ರ ಸಚಿವ ಕಿರಣ್​ ರಿಜಿಜು ಟೀಕಿಸಿದರು.
ಏನು ನಡೆಯಿತು?: ರಾಹುಲ್​ ಗಾಂಧಿ ಲೋಕಸಭೆಯಲ್ಲಿ ರಾಷ್ಟ್ರಪತಿಯವರ ಭಾಷಣಕ್ಕೆ ಧನ್ಯವಾದ ಸಮಪಿರ್ಸುವ ನಿಲುವಳಿಗೆ ಸಂಬಂಧಿಸಿ ಮಾತನಾಡುತ್ತ, ಕಾಂಗ್ರೆಸ್​ ಪಕ್ಷ 1947ರಲ್ಲಿ “ರಾಜ’ ಪ್ರಭುತ್ವದ ಚಿಂತನೆಯನ್ನು ಕೊನೆಗೊಳಿಸಿದೆ. ದಶಕಗಳ ಬಳಿಕ ಈಗ ಮತ್ತೆ ಅದು ಕಾಣಿಸಿಕೊಂಡಿದೆ. ನನ್ನ ಪೂರ್ವಜರು ಭಾರತಕ್ಕಾಗಿ ರಕ್ತವನ್ನೇ ಹರಿಸಿದ್ದಾರೆ. ನನಗೆ ಭಾರತ ಏನು ಎಂಬುದು ಗೊತ್ತು. ಈಗ ಮತ್ತೆ “ರಾಜ’ ಪ್ರಭುತ್ವ ಬಂದಿದೆ. ಅದು ಎರಡು ಭಾರತವನ್ನು ಅಂದರೆ ಒಂದು ಬಡವರು ಮತ್ತು ಇನ್ನೊಂದು ಶ್ರೀಮಂತರ ಭಾರತವನ್ನು ಸೃಷ್ಟಿಸಿದೆ. ಈ ಪ್ರಭುತ್ವ ಅಪಾಯಕಾರಿ ನಡವಳಿಕೆ ಯೊಂದಿಗೆ ಮುನ್ನಡೆಯುತ್ತಿದೆ. ಚೀನಾ ಮತ್ತು ಪಾಕಿಸ್ತಾನದ ವಿಚಾರದಲ್ಲೂ ಅಷ್ಟೆ. ಅವೆರಡೂ ರಾಷ್ಟ್ರಗಳು ದೂರ ಇರುವಂತೆ ಭಾರತ ನೋಡಿ ಕೊಳ್ಳಬೇಕಾಗಿತ್ತು. ಆದರೆ, ಅವೆರಡೂ ಒಂದಾಗು ವಂತೆ ಈ ಸರ್ಕಾರ ಮಾಡಿದೆ. ಚೀನಾದವರಿಗೆ ಸ್ಪಷ್ಟ ದೂರದೃಷ್ಟಿ ಇದೆ. ಅದನ್ನೇ ಅವರು ಮಾಡುತ್ತಿದ್ದಾರೆ. ಭಾರತದ ಸರ್ಕಾರಕ್ಕೆ ಅದಿಲ್ಲ. ಡೋಕ್ಲಾಂ, ಲಡಾಖ್​ಗಳಲ್ಲಿ ಅದರ ಲವನ್ನು ನಾವು ಉಣ್ಣುತ್ತಿದ್ದೇವೆ. ಈ ಸರ್ಕಾರ ರಾಜ್ಯಗಳ ವಿರುದ್ಧವೇ ನ್ಯಾಯಾಂಗ, ಚುನಾವಣಾ ಆಯೋಗ, ಪೆಗಾಸಸ್​ ಸ್ಪೆ$ವೇರ್​ ಮುಂತಾದವುಗಳನ್ನು ಬಳಸುತ್ತಿದೆ ಎಂದು ಟೀಕಿಸಿದ್ದರು.
ಅನುಮತಿ ನೀಡೋಕೆ ನೀವ್ಯಾರು?ಲೋಕಸಭೆಯಲ್ಲಿ ಭಾಷಣ ಮಾಡುತ್ತಿದ್ದ ರಾಹುಲ್​ ಗಾಂಧಿ ಮಾತಿನ ನಡುವೆ, ಅದನ್ನು ಆಕ್ಷೇಪಿಸಲು ಹೊರಟ ಬಿಜೆಪಿ ಸಂಸದ ಕಮ್ಲೇಶ್​ ಪಾಸ್ವಾನ್​ ಅವರನ್ನು ಸ್ಪೀಕರ್​ ಓಂಬಿರ್ಲಾ ತಡೆದರು. ರಾಹುಲ್​ ಗಾಂಧಿ ಭಾಷಣ ಮುಗಿದ ಬಳಿಕ ಅವಕಾಶ ಎಂದಿದ್ದರು. ಆದರೆ, ಭಾಷಣ ಅರ್ಧಕ್ಕೆ ನಿಲ್ಲಿಸಿದ ರಾಹುಲ್​ ಗಾಂಧಿ, “ಸರಿ ನೀವು ಮಾತನಾಡಿ’ ಎಂದು ಕಮ್ಲೇಶ್​ ಪಾಸ್ವಾನ್​ಗೆ ಹೇಳಿದರು. ಇದರಿಂದ ಕೆರಳಿದ ಸ್ಪೀಕರ್​ ಓಂಬಿರ್ಲಾ ರಾಹುಲ್​ ಗಾಂಧಿ ಅವರನ್ನು ಉದ್ದೇಶಿಸಿ, “ಅವರಿಗೆ ಮಾತನಾಡಲು ಅನುಮತಿ ಕೊಡುವುದಕ್ಕೆ ನೀವ್ಯಾರು? ನಿಮಗೆ ಆ ಅಧಿಕಾರ ಇಲ್ಲ. ಅದೇನಿದ್ದರೂ ಸ್ಪೀಕರ್​ ಅಧಿಕಾರ’ ಎಂದು ತಿರುಗೇಟು ನೀಡಿದರು. ಇದಕ್ಕೂ ಜಗ್ಗದ ರಾಹುಲ್​ ಗಾಂಧಿ, ನಾನು ಪ್ರಜಾಸತ್ತಾತ್ಮಕ ನಿಲುವಿನ ವ್ಯಕ್ತಿ. ನನ್ನ ದಲಿತ ಸಹೋದ್ಯೋಗಿ ಮಾತನಾಡಲು ಇಚ್ಛಿಸಿದಾಗ ಅದನ್ನು ತಡೆಯಲಾಗದು. ಅದಕ್ಕಾಗಿ ಅವರಿಗೆ ಮಾತನಾಡಲು ಅನುಮತಿ ನೀಡಿದೆ ಎಂದು ಸಮಜಾಯಿಷಿ ನೀಡುವ ಪ್ರಯತ್ನ ಮಾಡಿದರು.
ಹಿಂದಿ ಚೀನಿ ಭಾಯಿ ಭಾಯಿ ನೆನಪಿದೆಯೇ?ರಾಹುಲ್​ ಗಾಂಧಿ ಗೊಂದಲದ ಮತ್ತು ಮುಂದಾಲೋಚನೆ ಇಲ್ಲದ ನಾಯಕ. ಹಿಂದಿ ಚೀನಿ ಭಾಯಿ ಭಾಯಿ ಘೋಷಣೆ ಆ ಕಾಲದಿಂದ ಇಂದಿನ ತನಕ ಚೀನಾವನ್ನು ಕಾಂಗ್ರೆಸ್​ನವರು ಅರ್ಥಮಾಡಿಕೊಂಡಿಲ್ಲ. ಮೊದಲ ಸಲ ಚೀನಾ ಮುನ್ನುಗ್ಗಿದಾಗ ಭಾರತ ಪ್ರತಿರೋಧ ತೋರಿತ್ತು. ಅದರಲ್ಲಿ ಭಾರತ ಸೇನೆ ಯಶಸ್ವಿಯೂ ಆಗಿತ್ತು. ಪಾಕಿಸ್ತಾನ, ಚೀನಾ ಅತಿಕ್ರಮಣ ಮಾಡಿದರೂ ಭಾರತಕ್ಕೆ ರಣಾ ಸಾಮರ್ಥ್ಯ ಇದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಹೇಳಿದರು.
ಹಕ್ಕುಚ್ಯುತಿ ನೋಟಿಸ್​ರಾಹುಲ್​ ಗಾಂಧಿ ಸಂವಿಧಾನವನ್ನು ತಪ್ಪಾಗಿ ಅರ್ಥಮಾಡಿಕೊಂಡು ತರ್ಕಬದ್ಧವಲ್ಲದ ಮತ್ತು ತಪು$್ಪ ವಿಚಾರಗಳನ್ನು ಪ್ರತಿಪಾದಿಸಿದ್ದಾರೆ. ಆ ಮೂಲಕ ದೇಶದ ಜನರನ್ನು ಪ್ರಚೋದಿಸುವ ಕೆಲಸ ಮಾಡಿದ್ದಾರೆ. ಆ ಮೂಲಕ ಸಂಸತ್ತಿನ ನಿಯಮಗಳನ್ನು ಮೀರಿ ಅಸಾಂಸದೀಯ ನಡವಳಿಕೆಗಳನ್ನು ಪ್ರದಶಿರ್ಸಿದ್ದಾರೆ. ಹೀಗಾಗಿ ಅವರ ವಿರುದ್ಧ ಹಕ್ಕುಚ್ಯುತಿ ನಿಲುವಳಿ ಜಾರಿಗೊಳಿಸಬೇಕು ಎಂದು ಬಿಜೆಪಿ ಸಂಸದ ನಿಶಿಕಾಂತ್​ ದುಬೆ ನೋಟಿಸ್​ ಸಲ್ಲಿಸಿದ್ದಾರೆ.
ಗ್ರೀನ್​ ಬ್ಯಾಂಕ್​ ಸ್ಥಾಪನೆಗೆ ಶಿಫಾರಸುಸ್ವಚ್ಛ ಇಂಧನಕ್ಕೆ ಉತ್ತೇಜನ ನೀಡುವುದಕ್ಕೆ ಗ್ರೀನ್​ ಬ್ಯಾಂಕ್​ ಸ್ಥಾಪನೆ ಸೇರಿ ಹೊಸ ಮತ್ತು ನವೋನ್ವೇಷಣೆಯ ಉಪಕರಣಗಳ ವಿಚಾರ ಅರಿಯುವ ಅವಶ್ಯಕತೆ ಇದೆ. ವರ್ಷಕ್ಕೆ 1.5& 2 ಲಕ್ಷ ಕೋಟಿ ರೂಪಾಯಿ ಹೂಡಿಕೆ ಬೇಕು ಎಂದು ಇಂಧನಕ್ಕೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿ ಶಿಫಾರಸು ವರದಿ ತಿಳಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + seven =
Remember me
