ನವದೆಹಲಿ: ಭಾರತ-ಚೀನಾ ಮಧ್ಯೆ ಲಡಾಕ್​ ವ್ಯಾಪ್ತಿಯ ಲೈನ್ ಆಫ್ ಆ್ಯಕ್ಚುವಲ್ ಕಂಟ್ರೋಲ್​(ಎಲ್​ಎಸಿ) ಬಳಿಯ ಪ್ಯಾಂಗೊಂಗ್ ತ್ಸೋ ಸರೋವರದ ಬಳಿ ಕಳೆದೊಂದು ತಿಂಗಳಿನಿಂದ ನಡೆಯುತ್ತಿರುವ ಘರ್ಷಣೆ ಮುಂದುವರಿದಿದ್ದು, ಯಾವ ಮಾತುಕತೆಗಳೂ ಫಲಪ್ರದವಾಗಿಲ್ಲ. ಎಲ್​ಎಸಿಯ ನಾಲ್ಕು ಆಯಕಟ್ಟಿನ ಪ್ರದೇಶಗಳಲ್ಲಿ ಸರಿ ಸುಮಾರು 5,000 ಸೈನಿಕರ ಪಡೆಯನ್ನು ನಿಯೋಜಿಸಿದೆ ಎಂದು ಹೇಳಲಾಗುತ್ತಿದೆ. ಚೀನಾದ ಸರ್ಕಾರಿ ಸ್ವಾಮ್ಯದ ಮಾಧ್ಯಮ ವರದಿ ಪ್ರಕಾರ, ಈ ಸಲದ ಬಿಕ್ಕಟ್ಟು 73 ದಿನಗಳ ಕಾಲ ನಡೆದ 2017ರ ಡೋಕ್ಲಾಂ ಬಿಕ್ಕಟ್ಟಿಗಿಂತಲೂ ಹೆಚ್ಚು ಕೆಟ್ಟಸ್ಥಿತಿಯಲ್ಲಿದೆ.
ಇದನ್ನೂ ಓದಿ:ಗಡಿಯಲ್ಲಿ ಮತ್ತೆ ಜಟಾಪಟಿ: ಕಲ್ಲು ತೂರಾಟಕ್ಕಿಳಿದ ಚೀನಾ ಸೈನಿಕರು!
ಗಡಿಭಾಗದಲ್ಲಿ ಈ ರೀತಿ ಸೇನೆ ನಿಯೋಜನೆ ಆಗಿರುವುದು ಆ ಭಾಗದಲ್ಲಿ ಹೆಚ್ಚಿನ ಆತಂಕ ಮೂಡಿಸಿದೆ. ಈ ಸೇನೆ ಒಂದೇ ಕಡೆ ಜಮೆಯಾಗಿಲ್ಲ. ಬದಲಾಗಿ ದಾಳಿ ನಡೆಸುವುದಕ್ಕೆ ಬೇಕಾದ ರೀತಿಯಲ್ಲೇ ತಂತ್ರಗಾರಿಕೆಯಿಂದ ವ್ಯೂಹ ರಚಿಸಿಕೊಂಡು ಆಯಕಟ್ಟಿನ ಪ್ರದೇಶದಲ್ಲಿ ಚದುರಿಕೊಂಡು ಯುದ್ಧ ಸನ್ನದ್ಧ ಸ್ಥಿತಿಯಲ್ಲಿದೆ. ಆ ಭಾಗದಲ್ಲಿ ಚೀನಾ ಸೇನೆ ತಾಲೀಮು ನಡೆಸುತ್ತಿದ್ದು ತನ್ನ ಸೇನಾ ಬಲವನ್ನು ದಾಳಿಗೆ ಉಪಯೋಗಿಸುವುದು ಕಷ್ಟದ ಕೆಲಸವೇನಲ್ಲ. ಚೀನಾದ ಪ್ರತಿಯೊಂದ ನಡೆಯನ್ನೂ ಭಾರತ ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದು, ಪ್ರತಿರೋಧಕ್ಕೆ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಸೇನಾ ಮೂಲಗಳು ಹೇಳಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ:ಚೀನಾಕ್ಕೆ ಬುದ್ಧಿ ಕಲಿಸಲು ಸನ್ನದ್ಧವಾಗಿದೆ ಭಾರತೀಯ ಸೇನೆ
ಈ ನಡುವೆ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಣೆ ಅವರು ಕಳೆದ ವಾರ ಲಡಾಕ್​ ಸಾದಾ ಭೇಟಿ ನೀಡಿದ್ದು ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿದ್ದರು. ಪಂಗೋಂಗ್​ ತ್ಸೋ ಮತ್ತು ಗಲ್​ವಾನ್​ ಕಣಿವೆಯ ಮೂರು ಪ್ರದೇಶಗಳಲ್ಲಿ ಚೀನಾ ಸೇನೆ ಸರಿ ಸುಮಾರು 100 ಟೆಂಟ್​ಗಳನ್ನು ಹಾಕಿದ್ದು, ತಾತ್ಕಾಲಿಕ ಬಂಕರ್​ಗಳನ್ನೂ ವಿವಾದಿತ ಪ್ರದೇಶದಲ್ಲಿ ನಿರ್ಮಿಸಿವೆ ಎಂಬ ಮಾಹಿತಿ ಇದೆ.
ಇದನ್ನೂ ಓದಿ:ಗಡಿಯಲ್ಲಿ ಮತ್ತೆ ಕ್ಯಾತೆ ತೆಗೆದ ಚೀನಾ
ಎಲ್​ಎಸಿಯುದ್ದಕ್ಕೂ 5,000 ಸೈನಿಕರ ನಿಯೋಜನೆ ಕುರಿತು ವಿವರಣೆ ನೀಡಿರುವ ಸೇನೆಯ ಮಾಜಿ ಅಧಿಕಾರಿ ಲೆಫ್ಟಿನೆಂಟ್​ ಜನರಲ್ ಡಿ.ಎಸ್.ಹೂಡಾ, ಎಲ್​ಎಸಿಯಲ್ಲಿ 5,000 ಯೋಧರನ್ನು ನಿಯೋಜಿಸಲು ಜಾಗ ಇರಲ್ಲ. ಅದಕ್ಕೆ ಅವರು ಅಲ್ಲಲ್ಲಿ ಯೋಧರನ್ನು ನಿಯೋಜಿಸಿದ್ದಾರೆ. ಅದು ಸಹಜ ಕೂಡ. ಈ ರೀತಿ ಪ್ರದೇಶಗಳನ್ನು ಡೆತ್ ಏರಿಯಾ ಎಂದೂ ಹೇಳುತ್ತಾರೆ. ಸದ್ಯದ ಪರಿಸ್ಥಿತಿಯಲ್ಲಿ ಸೇನೆ ನಿಯೋಜನೆ ಅಷ್ಟೇ ಆದರೆ ಸ್ವಲ್ಪ ಬಿಗುವಿನ ವಾತಾವರಣ ಇರುತ್ತದೆಯಾದರೂ, ಇವೆಲ್ಲವೂ ಮಾತುಕತೆಯ ಮೂಲಕ ಬಗೆಹರಿಸಬಹುದಾದ ಬಿಕ್ಕಟ್ಟೇ ಆಗಿದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)
ಕೊನೆಗೂ ಬಯಲಾಯಿತು ವಾರಂಗಲ್ ಕೃಷಿ ಹೊಂಡದ 9 ಶವಗಳ ರಹಸ್ಯ!

ಚೀನಾ ಗಡಿಯಲ್ಲಿ ಪರಿಸ್ಥಿತಿ ತಿಳಿಗೊಳಿಸುವ 5 ಸುತ್ತಿನ ಮಾತುಕತೆ ವಿಫಲ, ಉದ್ವಿಗ್ನ ಸ್ಥಿತಿ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:11 − nine =
Remember me
