ನರೇಂದ್ರ ಮೋದಿ ಮತ್ತು ತೈವಾನ್​ ಅಧ್ಯಕ್ಷ ಲಾಯ್​ ಚಿಂಗ್​ ಟೆ ನಡುವಿನ ಅಭಿನಂದನಾ ಸಂದೇಶಗಳ ವಿನಿಮಯಕ್ಕೆ ಚೀನಾದ ಆಕ್ಷೇಪವನ್ನು ತೈವಾನ್​ ಶುಕ್ರವಾರ(ಜೂನ್​​ 7) ತಿರಸ್ಕರಿಸಿದೆ. ವಿಶ್ವ ಸಮುದಾಯವನ್ನು ದಾರಿ ತಪ್ಪಿಸಲು ಚೀನಾ ರಾಜಕೀಯ ಒತ್ತಡ ಹೇರುತ್ತಿದೆ ಮತ್ತು ತಪ್ಪು ಕಲ್ಪನೆಗಳನ್ನು ಹರಡುತ್ತಿದೆ ಎಂದು ತೈವಾನ್​ ಹೇಳಿದೆ.
ಇದನ್ನು ಓದಿ:ಕೆಲವರು ಮತ ಹಾಕಿದರೆ ಕೆಲವರು ಕಪಾಳಮೋಕ್ಷ ಮಾಡುತ್ತಾರೆ : ಸಂಜಯ್​ ರಾವತ್​
ವಾಸ್ತವವಾಗಿ ತೈವಾನ್ ಅಧ್ಯಕ್ಷರು ಲೋಕಸಭೆ ಚುನಾವಣೆಯಲ್ಲಿ ಮೋದಿ ಅವರ ಗೆಲುವಿಗಾಗಿ ಅಭಿನಂದನಾ ಸಂದೇಶವನ್ನು ಕಳುಹಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ ಮೋದಿ ಅವರು ತೈವಾನ್​ನೊಂದಿಗೆ ನಿಕಟ ಸಂಬಂಧವನ್ನು ಬೆಳೆಸಲು ಉತ್ಸುಕರಾಗಿದ್ದಾರೆ ಎಂದು ಹೇಳಿದರ. ಮೋದಿ ಅವರ ಈ ಉತ್ತರದಿಂದ ಚೀನಾ ಕೆರಳಿದೆ.
ತೈವಾನ್ ಅಧಿಕಾರಿಗಳ ರಾಜಕೀಯ ನಡೆಗಳನ್ನು ನವದೆಹಲಿ ವಿರೋಧಿಸಬೇಕು ಎಂದು ಚೀನಾ ಆಕ್ಷೇಪ ವ್ಯಕ್ತಪಡಿಸಿತು. ತೈವಾನ್​ ಚೀನಾದ ಅವಿಭಾಜ್ಯ ಪ್ರಾಂತ್ಯವಾಗಿದೆ. ಭೂಭಾಗದೊಂದಿಗೆ ಮರುಸೇರ್ಪಡೆಯಾಗಬೇಕು ಎಂಬುದು ಅದರ ಉದ್ದೇಶವಾಗಿದೆ.
ಮೂರನೇ ಅವಧಿಗೆ ಮೋದಿಯವರನ್ನು ಅಭಿನಂದಿಸಿದ ವಿಶ್ವ ನಾಯಕರಲ್ಲಿ ಲಾಯ್​ ಚಿಂಗ್​ ಟೆ ಒಬ್ಬರು. ಕಳೆದ ತಿಂಗಳಷ್ಟೇ ಅವರು ತೈವಾನ್​ ಅಧ್ಯಕ್ಷರಾಗಿದ್ದಾರೆ. ತಮ್ಮ ಎಕ್ಸ್​​ ಖಾತೆಯ ಪೋಸ್ಟ್​​ನಲ್ಲಿಚುನಾವಣೆಯಲ್ಲಿ ಜಯಗಳಿಸಿದ ಪ್ರಧಾನಿ ಮೋದಿ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ವೇಗವಾಗಿ ಬೆಳೆಯುತ್ತಿರುವ ತೈವಾನ್-ಭಾರತ ಪಾಲುದಾರಿಕೆಯನ್ನು ಹೆಚ್ಚಿಸಲು ಮತ್ತು ಇಂಡೋ-ಪೆಸಿಫಿಕ್‌ನಲ್ಲಿ ಶಾಂತಿ ಮತ್ತು ಸಮೃದ್ಧಿಗೆ ಕೊಡುಗೆ ನೀಡುವ ವಲಯಗಳಲ್ಲಿ ಸಹಯೋಗವನ್ನು ವಿಸ್ತರಿಸಲು ಎದುರು ನೋಡುತ್ತಿದ್ದೇವೆ ಎಂದು ಹೇಳಿದ್ದರು.
ಈ ಸಂದೇಶಕ್ಕ ಧನ್ಯವಾದ ತಿಳಿಸಿದ ಪ್ರಧಾನಿ ಮೋದಿ ಸಾಮಾಜಿಕ ಜಾಲತಾಣದಲ್ಲಿ, ಪರಸ್ಪರ ಲಾಭದಾಯಕ ಆರ್ಥಿಕ ಮತ್ತು ತಾಂತ್ರಿಕ ಸಹಭಾಗಿತ್ವದತ್ತ ಕೆಲಸ ಮಾಡುವ ಮೂಲಕ ಇನ್ನಷ್ಟು ನಿಕಟ ಸಂಬಂಧಗಳಿಗಾಗಿ ನಾವು ಎದುರು ನೋಡುತ್ತಿದ್ದೇನೆ ಎಂದು ಪ್ರತಿಕ್ರಿಯಸಿದರು. (ಏಜೆನ್ಸೀಸ್​)
VIDEO | ಗ್ರೌಂಡ್​​ನಲ್ಲೇ ಅಭಿಮಾನಿಯೊಂದಿಗೆ ಜಗಳಕ್ಕಿಳಿದ ಪಾಕ್​​ ಬ್ಯಾಟ್ಸ್​ಮನ್​​ !

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:ten + 3 =
Remember me
