ನವದೆಹಲಿ:ಶತ್ರುಗಳ ಕಣ್ಣಿಗೆ ಕಾಣಿಸದ ರೀತಿಯಲ್ಲಿ ಲಡಾಖ್ ಗಡಿಗೆ ಸೈನಿಕರು ಹಾಗೂ ಶಸ್ತ್ರಾಸ್ತ್ರಗಳನ್ನು ಸಾಗಿಸಲು ಹೊಸ ರಸ್ತೆಯೊಂದನ್ನು ನಿರ್ವಿುಸಲು ಭಾರತ ಯೋಜನೆ ರೂಪಿಸಿದೆ. ಮನಾಲಿಯಿಂದ ಲೇಹ್​ವರೆಗೆ ನಿರ್ವಣವಾಗುವ ಈ ಮಾರ್ಗ, ಕೇಂದ್ರಾಡಳಿತ ಪ್ರದೇಶದ ಅತಿ ಎತ್ತರದ ಗುಡ್ಡಗಾಡು ಪ್ರದೇಶದ ಮಾರ್ಗವಾಗಲಿದೆ.
ವ್ಯೂಹಾತ್ಮಕವಾಗಿ ಮುಖ್ಯವಾಗಿರುವ ದೌಲತ್ ಬೇಗ್ ಓಲ್ಡಿ ಮತ್ತು ಇತರ ಭಾಗಗಳಿಗೆ ಪರ್ಯಾಯ ಸಂಪರ್ಕ ಕಲ್ಪಿಸಲು ಮೂರು ವರ್ಷಗಳಿಂದ ಭಾರತ ಕೆಲಸ ಮಾಡುತ್ತಿದೆ. ಖರ್ದುಂಗ್ ಲಾ ಪಾಸ್ ರಸ್ತೆ ನಿರ್ಮಾಣ ಕಾಮಗಾರಿ ಈಗಾಗಲೇ ಆರಂಭಿಸಲಾಗಿದೆ.
ನಿಮು-ಪದಂ-ಡರ್ಚಾ ಮಾರ್ಗ ಮೂಲಕ ಮನಾಲಿಯಿಂದ ಲೇಹ್​ಗೆ ಸಂಪರ್ಕ ಸಾಧಿಸಲು ಯೋಜನೆ ಸಿದ್ಧವಾಗುತ್ತಿದೆ. ಇದರಿಂದ ಸಮಯ ಉಳಿತಾಯವಾಗಲಿದೆ. ಜತೆಗೆ ಭಾರತೀಯ ಯೋಧರ ಚಲನವಲನ ಅಥವಾ ನಿಯೋಜನೆ ಮೇಲೆ ನಿಗಾ ಇಡಲು ಬೇರೆ ಯಾವುದೇ ರಾಷ್ಟ್ರಕ್ಕೆ ಸಾಧ್ಯವಾಗುವುದಿಲ್ಲ. ಲಡಾಖ್ ಪ್ರದೇಶಕ್ಕೆ ಇತರ ಭಾಗಗಳಿಂದ ಬೃಹತ್ ಟ್ಯಾಂಕ್​ಗಳು ಮತ್ತು ಫಿರಂಗಿಗಳನ್ನು ಸಾಗಿಸುವುದನ್ನು ಗಮನಿಸಲೂ ಶತ್ರುಗಳಿಗೆ ಸಾಧ್ಯವಾಗುವುದಿಲ್ಲ. ಪ್ರಸ್ತುತ ಡ್ರಾಸ್-ಕಾರ್ಗಿಲ್ ಮಾರ್ಗವಾಗಿ ಲೇಹ್ ಮೂಲಕ ಸರಕು ಮತ್ತು ಯೋಧರನ್ನು ಸಾಗಿಸಲಾಗುತ್ತಿದೆ. 1999ರಲ್ಲಿ ಕಾರ್ಗಿಲ್ ಸಮರದ ವೇಳೆ ಪಾಕಿಸ್ತಾನ ಸೈನಿಕರು ಈ ಮಾರ್ಗದ ಮೇಲೆಯೇ ದಾಳಿ ನಡೆಸಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 − two =
Remember me
