ನವದೆಹಲಿ: ಚೀನಾ ವಸ್ತುಗಳನ್ನು ನಿಷೇಧಿಸುವಂತೆ ದೇಶಾದ್ಯಂತ ಆಗ್ರಹ ಕೇಳಿಬರುತ್ತಿರುವ ನಡುವೆಯೇ, ಈ ವರ್ಷದ ರಕ್ಷಾಬಂಧನ ಹಬ್ಬಕ್ಕೆ ಚೀನಾ ರಾಖಿಗಳಿಗೆ ಬೇಡಿಕೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಸ್ಥಳೀಯ ರಾಖಿಗಳಿಗೆ ಬೇಡಿಕೆ ಹೆಚ್ಚಿದೆ. ಕೆಲ ರಾಜ್ಯಗಳಲ್ಲಿ ಮೋದಿ ರಾಖಿ ಜನಪ್ರಿಯವಾಗುತ್ತಿದೆ.
ದೇಶೀಯ ವಸ್ತುಗಳನ್ನು ಹೆಚ್ಚು ಬಳಸಲು ಪ್ರಧಾನಿ ಕರೆ ನೀಡಿದ್ದಾರೆ. ಆ ನಿಟ್ಟಿನಲ್ಲಿ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟವೂ (ಸಿಎಐಟಿ) ಕೆಲಸ ಆರಂಭಿಸಿದ್ದು, ರಕ್ಷಾಬಂಧನ ಹಬ್ಬಕ್ಕೆ ಭಾರತದ ರಾಖಿಗಳನ್ನೇ ಬಳಸುವಂತೆ ಕರೆ ನೀಡಿದೆ. ವಿವಿಧ ಬೀಜಗಳು, ಬಟ್ಟೆ, ರೇಷ್ಮೆ, ಬೇಳೆ ಕಾಳು, ಗೋಧಿ, ಅಕ್ಕಿ, ವರ್ಣಚಿತ್ರಗಳು, ಎಲೆಗಳು ಮತ್ತು ಜಾನಪದ ವಸ್ತುಗಳನ್ನು ಬಳಸಿಕೊಂಡು ರಾಖಿ ತಯಾರಿಸಲು ಕೋರಿದೆ. ಮಹಿಳಾ ವ್ಯಾಪಾರಿಗಳಿಗೆ ಈ ರೀತಿಯ ವಿಭಿನ್ನ ರಾಖಿಗಳನ್ನು ತಯಾರಿಸಿ ಮಾರಾಟ ಮಾಡಲು ಕೇಳಿಕೊಂಡಿದೆ.
ಮೋದಿ ರಾಖಿ
ಈ ಬಾರಿ ‘ಮೋದಿ ರಾಖಿ’ಯನ್ನು ಸಿಎಐಟಿ ತಯಾರಿಸಿದೆ. ತಾಮ್ರ, ಬೆಳ್ಳಿಯ ರಾಖಿಗಳ ಮೇಲೆ ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರಗಳನ್ನು ಅಂಟಿಸಲಾಗಿದೆ. ಈ ರಾಖಿಗೆ ಹಲವು ರಾಜ್ಯಗಳಲ್ಲಿ ಭಾರಿ ಬೇಡಿಕೆ ಬರುತ್ತಿದೆ. ಉತ್ಪಾದನೆಯಾದ ಕೆಲ ದಿನದಲ್ಲೇ ರಾಖಿ ಖಾಲಿಯಾಗುತ್ತಿದೆ ಎಂದು ವ್ಯಾಪಾರಸ್ಥರು ತಿಳಿಸಿದ್ದಾರೆ.
ಕರೊನಾ ಗೆದ್ದ ರಾಜ್ಯದ ಮೊದಲ ಶತಾಯುಷಿ ಏನನ್ನುತ್ತಾರೆ ಕೇಳಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + seventeen =
Remember me
