ಗ್ಯಾಂಗ್ಟಾಕ್:ಕೆಲ ತಿಂಗಳ ಹಿಂದೆ ಲಡಾಕ್​ನ ವಾಸ್ತವಿಕ ಗಡಿ ನಿಯಂತ್ರಣ ರೇಖೆ ಬಳಿ ಕ್ಯಾತೆ ತೆಗೆದಿದ್ದ ಚೀನಾ ಸೇನೆ ಇದೀಗ ಮತ್ತೊಮ್ಮೆ ಕ್ಯಾತೆ ತೆಗೆದಿದೆ. ವಾರದ ಹಿಂದೆ ಚೀನಾ ಸೈನಿಕರು ಸಿಕ್ಕಿಂನಲ್ಲಿ ಭಾರತದ ಪ್ರಾಂತ್ಯ ಪ್ರವೇಶಿಸಲು ಪ್ರಯತ್ನಿಸಿದ್ದು ಸಣ್ಣ ಪ್ರಮಾಣದ ಮುಖಾಮುಖಿ ನಡೆದಿತ್ತು ಎಂದು ಭಾರತೀ ಸೇನೆ ಸೋಮವಾರದಂದು ತಿಳಿಸಿದೆ.
ಇದನ್ನೂ ಓದಿ:VIDEO: ಯೋಧರ ಬದಲು ರೈತರು, ಕಾರ್ಮಿಕರನ್ನು ಗಡಿ ಪ್ರದೇಶಕ್ಕೆ ಕಳುಹಿಸಿ ಎಂದ ರಾಹುಲ್‌ ಗಾಂಧಿ!
ಜನವರಿ 20ರಂದು ಸಿಕ್ಕಿಂ ಸೆಕ್ಟರ್​ನ ನಕು ಲಾ ಪ್ರದೇಶದಲ್ಲಿ ಮುಖಾಮುಖಿ ನಡೆದಿದೆ. ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ಸೈನಿಕರು ಭಾರತದ ಪ್ರದೇಶವನ್ನು ಪ್ರವೇಶಿಸಲು ಪ್ರಯತ್ನಿಸಿದ್ದರಿಂದಾಗಿ ಮುಖಾಮುಖಿ ನಡೆದಿದೆ. ಅಲ್ಲಿನ ಸ್ಥಳೀಯ ಕಮಾಂಡರ್​ಗಳು ಸಮಸ್ಯೆಯನ್ನು ಪರಿಹರಿಸಿದ್ದಾರೆ ಎಂದು ಸೇನೆ ತಿಳಿಸಿದೆ. ಮುಖಾಮುಖಿಯಲ್ಲಿ ಸಣ್ಣ ಪ್ರಮಾಣದ ಹಾನಿಯುಂಟಾಗಿದೆ. ಭಾರತೀಯ ಸೇನೆಯ ನಾಲ್ವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಚೀನಾದ ಸೇನೆಯಲ್ಲಿ ಉಂಟಾದ ಹಾನಿಯ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಸುಮಾರು 20 ಚೀನೀ ಸೈನಿಕರಿಗೆ ಗಾಯಾಳುಗಳಾಗಿವೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.
19,000 ಅಡಿ ಎತ್ತರದಲ್ಲಿರುವ ನಕು ಲಾ ಪಾಸ್, ಸಿಕ್ಕಿಂ ಅನ್ನು ಚೀನಾದ ಟಿಬೆಟ್ ಪ್ರದೇಶಕ್ಕೆ ಸಂಪರ್ಕಿಸುತ್ತದೆ ಮತ್ತು ಇದು ಸೂಕ್ಷ್ಮ ಪ್ರದೇಶವೆಂದು ಗುರುತಿಸಲ್ಪಟ್ಟಿದೆ.
ಇದನ್ನೂ ಓದಿ:ಮತ್ತೆ ಭೂಗತ ಲೋಕದತ್ತ ಹೊರಳಿದ ಆರ್​ಜಿವಿ: ಐದು ಭಾಷೆಗಳಲ್ಲಿ ಬರಲಿದೆ ‘ಡಿ ಕಂಪನಿ‘ ಚಿತ್ರ
ಈ ಹಿಂದೆ 2020ರ ಮೇ ತಿಂಗಳಲ್ಲಿ ಲಡಾಕ್​ನಲ್ಲಿ ಚೀನಾ ಮತ್ತು ಭಾರತೀಯ ಸೇನೆಯ ನಡುವೆ ಮುಖಾಮುಖಿ ನಡೆದಿತ್ತು. ಅಂದಿನಿಂದ ಒಂದು ರೀತಿಯ ಬಿಕ್ಕಟ್ಟು ಉಭಯ ದೇಶಗಳು ನಡುವೆ ಉಂಟಾಗಿದೆ. (ಏಜೆನ್ಸೀಸ್​)
ಫ್ರೀ ಇನ್ನರ್​ವೇರ್​ ಆಫರ್​ಗೆ ಮರುಳಾದ ಯುವತಿ! ಮುಂದೇನಾಯ್ತು ಕೇಳಿದರೆ ಶಾಕ್​ ಆಗೋದು ಗ್ಯಾರಂಟಿ

ಮನೆಯಲ್ಲಿನ ಲೈವ್​ ಸೆಕ್ಸ್​ನ್ನು ಸಿಸಿಟಿವಿಯಿಂದಲೇ ಕದ್ದು ನೋಡುತ್ತಿದ್ದ ಖತರ್ನಾಕ್​​ ಟೆಕ್ನಿಷಿಯನ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + 10 =
Remember me
