ನವದೆಹಲಿ:ಕರೊನಾ ವೈರಸ್​ ವಿಚಾರದಲ್ಲಿ ಅಮೆರಿಕ ಸೇರಿ ಕೆಲವು ದೇಶಗಳು ಚೀನಾ ವಿರುದ್ಧ ಕಿಡಿಕಾರುತ್ತಿವೆ. ಅದರಲ್ಲೂ ಯುಎಸ್​ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರಂತೂ ಕರೊನಾ ವೈರಸ್​ಗೆ ಚೀನಿ ವೈರಸ್, ವುಹಾನ್​ ವೈರಸ್​ ಎಂದೇ ಹೆಸರು ಇಟ್ಟಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ಯ ತೀವ್ರ ಮುಜುಗರಕ್ಕೀಡಾಗಿರುವ ಚೀನಾ, ದಯವಿಟ್ಟು ಚೀನಿ ವೈರಸ್​ ಅಂತ ಕರೆಯಬೇಡಿ. ಇದು ನಮ್ಮ ರಾಷ್ಟ್ರಕ್ಕೆ ಕಳಂಕ ಎಂದು ಭಾರತದ ಬಳಿ ಮನವಿ ಮಾಡಿದೆ. ಹಾಗೇ, ಕೊರೊನಾ ವೈರಸ್​ ವಿರುದ್ಧ ಹೋರಾಡಲು ಭಾರತಕ್ಕೆ ಅಗತ್ಯವಿರುವ ಸಹಕಾರ ನೀಡುವುದಾಗಿ ತಿಳಿಸಿದೆ.
ನವದೆಹಲಿಯಲ್ಲಿರುವ ಚೀನಾ ರಾಯಭಾರ ಕಚೇರಿಯ ವಕ್ತಾರ, ಕೌನ್ಸಲರ್​ ಜಿ ರಾಂಗ್​ ಅವರು ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಭಾರತದಲ್ಲಿ ಕರೊನಾ ವೈರಸ್​ ನಿರ್ವಹಣೆಗೆ ಚೀನಾ ಸಹಕಾರ ನೀಡಲಿದೆ. ಚೀನಾದ ಉದ್ಯಮಗಳು ಈಗಾಗಲೇ ಭಾರತಕ್ಕೆ ಧನಸಹಾಯ ಮಾಡಲು ಪ್ರಾರಂಭಿಸಿವೆ. ಭಾರತಕ್ಕೆ ನಮ್ಮಿಂದ ಏನೇ ಸಹಕಾರ, ನೆರವು ಅಗತ್ಯವಿದ್ದರೂ ನಾವದನ್ನು ನೀಡುತ್ತೇವೆ ಎಂದು ಹೇಳಿದ್ದಾರೆ.
ಸಾಂಕ್ರಾಮಿಕ ರೋಗ ಎದುರಾರ ಈ ಕಠಿಣ ಸಂದರ್ಭದಲ್ಲಿ ಪರಿಸ್ಥಿತಿಯನ್ನು ನಿಭಾಯಿಸಲು ಚೀನಾ ಮತ್ತು ಭಾರತ ಪರಸ್ಪರ ಸಹಕಾರ, ಬೆಂಬಲವನ್ನು ನೀಡಿಕೊಳ್ಳುತ್ತಿವೆ ಎಂದು ತಿಳಿಸಿದರು.
ಚೀನಾದಲ್ಲೇ ಜನ್ಮತಾಳಿದ ಈ ವೈರಸ್​ಗೆ ಬಲಿಯಾಗುವವರ ಸಂಖ್ಯೆ ಚೀನಾಕ್ಕಿಂತ ಇಟಲಿ, ಸ್ಪೇನ್​ನಲ್ಲೇ ಜಾಸ್ತಿಯಾಗಿದೆ. ಚೀನಾದಲ್ಲಿ ವೈರಸ್​ನಿಂದ ತೀರ ಸಂಕಷ್ಟಕ್ಕೆ ಒಳಗಾಗಿದ್ದ ವುಹಾನ್​ಗೆ ಭಾರತ ಸುಮಾರು 15 ಟನ್​ಗಳಷ್ಟು ಮಾಸ್ಕ್​, ಕೈಗವಸುಗಳು ಸೇರಿ ಇನ್ನೂ ಅನೇಕ ರೀತಿಯ ವೈದ್ಯಕೀಯ ನೆರವು ನೀಡಿತ್ತು. ಅದನ್ನು ತಮ್ಮ ಹೇಳಿಕೆಯಲ್ಲಿ ಉಲ್ಲೇಖಿಸಿರುವ ಜಿ ರಾಂಗ್​, ಚೀನಾದಲ್ಲಿ ಕರೊನಾ ವಿರುದ್ಧ ಹೋರಾಡಲು ಭಾರತ ವೈದ್ಯಕೀಯ ವಸ್ತುಗಳನ್ನು ಪೂರೈಕೆ ಮಾಡಿತ್ತು. ನಮಗೆ ಆ ಬಗ್ಗೆ ತುಂಬ ಸಂತೋಷವಿದೆ ಹಾಗೇ ಭಾರತಕ್ಕೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಹೇಳಿದ್ದಾರೆ.
ನಮಗೆ ಖಂಡಿತ ನಂಬಿಕೆಯಿದೆ. ಭಾರತ ಇನ್ನು ಕೆಲವೇ ದಿನಗಳಲ್ಲಿ ಕರೊನಾ ವೈರಸ್​ ವಿರುದ್ಧದ ಹೋರಾಟದಲ್ಲಿ ಗೆಲುವು ಸಾಧಿಸುತ್ತದೆ. ವೈರಸ್​ನ್ನು ಒದ್ದೋಡಿಸುತ್ತದೆ. ಚೀನಾದಲ್ಲಿ ಕರೊನಾ ವೈರಸ್​ ಹೆಚ್ಚಿನ ಕಾಲ ಉಳಿಯಲಿದ್ದು, ನಮಗೆ ಭಾರತ ಸೇರಿ ಇನ್ನೂ ಹಲವು ರಾಷ್ಟ್ರಗಳ ಸಹಕಾರ ಬೇಕು.
ಜಿ-20 (G20) ಮತ್ತು ಬ್ರಿಕ್ಸ್​(BRICS)ನಂತರ ಬಹುಪಕ್ಷೀಯ ವೇದಿಕೆಗಳು ಈ ಸಂದರ್ಭದಲ್ಲಿ ಸಹಕಾರ ನೀಡಬೇಕು. ಮನುಕುಲಕ್ಕೇ ಕಂಟಕವಾಗಿರುವ ಜಾಗತಿಕ ಸವಾಲನ್ನು ಎದುರಿಸಲು ಎಲ್ಲ ದೇಶಗಳೂ ತಮ್ಮ ಬಲ ಹಾಗೂ ಬುದ್ಧಿವಂತಿಕೆ ಕೊಡುಗೆ ನೀಡಬೇಕು ಎಂದು ಹೇಳಿದ್ದಾರೆ. (ಏಜೆನ್ಸೀಸ್​)
ರೈಲ್ವೆ ಬೋಗಿಗಳಾಗುತ್ತಿವೆ ಕರೊನಾ ಐಸೋಲೇಷನ್ ಯೂನಿಟ್ಸ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + 10 =
Remember me
