ನವದೆಹಲಿ/ಬೀಜಿಂಗ್:ಪೂರ್ವ ಲಡಾಖ್​ನ ವಾಸ್ತವ ಗಡಿ ನಿಯಂತ್ರಣ ರೇಖೆ (ಎಲ್​ಎಸಿ) ಬಳಿಯ ಕೆಲವು ಸ್ಥಳಗಳಿಂದ ಉಭಯ ಸೇನೆಗಳು ಹಿಂದೆ ಸರಿದಿರುವ ಬೆನ್ನಿಗೆ ಭಾರತ-ಚೀನಾ ಸೇನೆಯ ಉನ್ನತಾಧಿಕಾರಿಗಳ ಮಧ್ಯೆ ಬುಧವಾರ ನಡೆದ ಮಾತುಕತೆಯಲ್ಲಿ ಮತ್ತಷ್ಟು ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗಿದೆ. ಮುಂದಿನ 10 ದಿನಗಳಲ್ಲಿ ಬಟಾಲಿಯನ್, ಬ್ರಿಗೇಡ್ ಮತ್ತು ಮೇಜರ್ ಜನರಲ್ ಹಂತದ ಮಾತುಕತೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಎಲ್​ಎಸಿ ಬಳಿಯ ಉದ್ವಿಗ್ನತೆ ತಗ್ಗಿಸಲು ಜೂನ್ 6ರಂದು ಭಾರತದ ಲೆಫ್ಟಿನೆಂಟ್ ಜನರಲ್ ಹರಿಂದರ್ ಸಿಂಗ್ ಮತ್ತು ಚೀನಾದ ಟಿಬೆಟ್ ಮಿಲಿಟರಿ ಜಿಲ್ಲೆಯ ಮೇಜರ್ ಜನರಲ್ ಲಿಯು ಲಿನ್ ನಡುವೆ ಮಾತುಕತೆ ಹಾಗೂ ಜೂನ್ 5ರಂದು ಭಾರತದ ವಿದೇಶಾಂಗ ಸಚಿವಾಲಯದ ಜಂಟಿ ಕಾರ್ಯದರ್ಶಿ ನವೀನ್ ಶ್ರೀವಾಸ್ತವ ಮತ್ತು ಚೀನಾ ವಿದೇಶಾಂಗ ಸಚಿವಾಲಯದ ಮಹಾನಿರ್ದೇಶಕ ವು ಜಿಯಾಂಗ್​ಹಾವೊ ವಿಡಿಯೋ ಕಾನ್ಪರೆನ್ಸ್ ಮೂಲಕ ಚರ್ಚೆ ನಡೆಸಿದ್ದರು. ಈ ಸಭೆಯ ಬಳಿಕ ಉಭಯ ದೇಶಗಳ ಸೇನೆಗಳು ಗಾಲ್ವಾನ್ ಕಣಿವೆಯ 14, 15 ಗಸ್ತು ಪಾಯಿಂಟ್ ಹಾಗೂ ಹಾಟ್ ಸ್ಪಿ ›ಂಗ್ ಬಳಿ 17ನೇ ಪಾಯಿಂಟ್​ಗಳಿಂದ ಒಂದೂವರೆಯಿಂದ 2 ಕಿ.ಮೀ. ದೂರ ಹಿಂದೆ ಸರಿದಿವೆ.
ರಾಹುಲ್​ಗೆ ಲಡಾಖ್ ಸಂಸದ ತಿರುಗೇಟು
ಲಡಾಖ್ ಭಾಗವನ್ನು ಚೀನಿ ಯೋಧರು ಅತಿಕ್ರಮಿಸಿದ್ದಾರೆಯೇ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್​ಗೆ ಪ್ರಶ್ನಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಲಡಾಖ್​ನ ಬಿಜೆಪಿ ಸಂಸದ ಜಮ್ಯಾಂಗ್ ತ್ಸರಿಂಗ್ ನಾಮ್್ಯಾಲ್ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಶತ್ರು ಪಡೆಗಳು ಭಾರತ ಭೂಭಾಗವನ್ನುಅತಿಕ್ರಮಿಸಿಕೊಂಡಿವೆ ಹೊರತು ಈಗಲ್ಲ. 1962ರ ಯುದ್ಧದ ವೇಳೆ ಲಡಾಖ್​ನಲ್ಲಿ ವಶಪಡಿಸಿಕೊಂಡ 38 ಸಾವಿರ ಚದುರ ಕಿ.ಮೀ. ಪ್ರದೇಶ ಅಕ್ಸಾಯ್ ಚಿನ್ ಹೆಸರಿನಲ್ಲಿ ಚೀನಾದ ಹಿಡಿತದಲ್ಲೇ ಇದೆ ಎಂದು ಜಮ್ಯಾಂಗ್ ಟ್ವೀಟ್ ಮಾಡಿದ್ದಾರೆ.
ಯೋಧರು, ಶಸ್ತ್ರಾಸ್ತ್ರ ಹಿಂಪಡೆಯಿರಿ
ಎಲ್​ಎಸಿ ಬಳಿ ನಿಯೋಜಿಸಿರುವ 10 ಸಾವಿರಕ್ಕೂ ಹೆಚ್ಚು ಸೈನಿಕರು ಮತ್ತು ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಹಿಂಪಡೆಯಿರಿ ಎಂದು ಚೀನಾಕ್ಕೆ ಭಾರತ ಒತ್ತಾಯಿಸಿದೆ. ಎಲ್​ಎಸಿಯ ಕೆಲವು ಸ್ಥಳಗಳಲ್ಲಿ ಕೆಲವು ಕಿ.ಮೀ. ದೂರಕ್ಕೆ ಸೇನೆ ಹಿಂದೆ ಸರಿದಿರುವುದು ಶಾಂತಿ ಸ್ಥಾಪನೆ ವಿಷಯದಲ್ಲಿ ಉತ್ತಮ ಬೆಳವಣಿಗೆ. ಸೇನೆ ಹಿಂಪಡೆದಾಗ ಮಾತ್ರ ಉದ್ವಿಗ್ನತೆ ತಗ್ಗುತ್ತದೆ ಎಂದು ಭಾರತ ಹೇಳಿದೆ.
ಮಿತಿಮೀರುತ್ತಿರುವ ಕರೊನಾ ಆತಂಕದ ನಡುವೆ ಆದಿತ್ಯ ಠಾಕ್ರೆ ಕೊಟ್ರು ಗುಡ್​ನ್ಯೂಸ್​; ಇನ್ನು ಭಯ ಪಡುವ ಅಗತ್ಯವಿಲ್ಲ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + 7 =
Remember me
