ಬೀಜಿಂಗ್​:ಖಜಕಸ್ತಾನದಲ್ಲಿ ಕರೊನಾಗಿಂತ ಮಾರಕವಾದ ಅಪರಿಚಿತ ನ್ಯುಮೋನಿಯಾ ಸೋಂಕು ಸಾಂಕ್ರಾಮಿಕವಾಗಿದೆ. ಜೂನ್​ವೊಂದರಲ್ಲೇ 600ಕ್ಕೂ ಹೆಚ್ಚು ಜನರು ಇದಕ್ಕೆ ಬಲಿಯಾಗಿದ್ದಾರೆ ಎಂದು ಖಜಕಸ್ತಾನದಲ್ಲಿನ ಚೀನಾದ ರಾಯಭಾರ ಕಚೇರಿ ಹೇಳಿದೆ.
ಖಜಕಸ್ತಾನದಲ್ಲಿರುವ ತನ್ನ ಪ್ರಜೆಗಳಿಗೆ ಈ ಬಗ್ಗೆ ಎಚ್ಚರಿಕೆ ನೀಡಿರುವ ಚೀನಾ ರಾಯಭಾರ ಕಚೇರಿ, ಈ ಸೋಂಕಿಗೆ ತುತ್ತಾದವರು ಸಾಯುವ ಪ್ರಯಾಣ ಹೆಚ್ಚಾಗಿದೆ ಎಂದು ಹೇಳಿದೆ.
ಇದನ್ನೂ ಓದಿ:ಚೀನಾದ ಕಪಿಮುಷ್ಠಿಯಲ್ಲಿ ನೇಪಾಳ- ಭಾರತದ ಟಿ.ವಿ.ಚಾನೆಲ್‌ಗಳು ಬ್ಯಾನ್‌!
ಖಜಕಸ್ತಾನ ತನ್ನ ವಾಯವ್ಯ ಭಾಗದಲ್ಲಿ ಚೀನಾದ ಕ್ಸಿನ್ಜಿಯಾಂಗ್​ ಬಳಿ ಗಡಿಯನ್ನು ಹಂಚಿಕೊಂಡಿದೆ. ಕ್ಸಿಜಿಯಾಂಗ್​ ಉಯ್ಗುರು ಸ್ವಾಯತ್ತ ಪ್ರದೇಶವಾಗಿದೆ.ಈ ವರ್ಷದ ಮೊದಲ ಆರು ತಿಂಗಳಲ್ಲಿ ಖಜಕಸ್ತಾನದಲ್ಲಿ ಈ ಅಪರಿಚಿತ ನ್ಯುಮೋನಿಯಾಕ್ಕೆ 1,772 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಜೂನ್​ವೊಂದರಲ್ಲೇ 600 ಜನ ಇದಕ್ಕೆ ಬಲಿಯಾಗಿದ್ದಾರೆ. ಈ ನ್ಯುಮೋನಿಯಾ ಕೋವಿಡ್​-19ಕ್ಕಿಂತಲೂ ಮಾರಕವಾಗಿದೆ ಎಂದು ಚೀನಾ ಹೇಳಿದೆ.
ಅಲ್ಲಗಳೆದ ಖಜಕಸ್ತಾನ:ತಮ್ಮ ನಾಡಿನಲ್ಲಿ ಯಾವುದೇ ರೀತಿಯ ಅಪರಿಚಿತ ನ್ಯುಮೋನಿಯಾ ಸಾಂಕ್ರಾಮಿಕ ಹಬ್ಬಿಲ್ಲ. ಈ ಕುರಿತು ಚೀನಾದ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳೆಲ್ಲವೂ ಸುಳ್ಳು ಮತ್ತು ಆಧಾರರಹಿತವಾಗಿರುವಂಥದ್ದು ಎಂದು ಖಜಕಸ್ತಾನದ ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ.ರಾಷ್ಟ್ರದಲ್ಲಿ ಬ್ಯಾಕ್ಟೀರಿಯಲ್​, ಫಂಗಲ್​ ಮತ್ತು ವೈರಲ್​ ನ್ಯುಮೋನಿಯಾ ಸೋಂಕು ಇದೆ. ಇದರಲ್ಲಿ ಅಸ್ಪಷ್ಟವಾದ ಪ್ರಕರಣಗಳೂ ಇವೆ. ಇವೆಲ್ಲವೂ ವಿಶ್ವ ಆರೋಗ್ಯ ಸಂಸ್ಥೆ ವಿವರಿಸಿರುವ ನ್ಯುಮೋನಿಯಾದ ವ್ಯಾಪ್ತಿಯಲ್ಲೇ ಇವೆ ಎಂದು ಹೇಳಿದೆ.
‘ಸೂಪರ್​ ಮಾಮ್’ ಹುಲಿ ಬದುಕಿನ ರೋಚಕತೆ ನೀವೊಮ್ಮೆ ನೋಡಲೇ ಬೇಕು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + 6 =
Remember me
