ನವದೆಹಲಿ :ಕರೊನಾ ಎರಡನೇ ಅಲೆಯ ಹೊಡೆತಕ್ಕೆ ತತ್ತರಿಸುತ್ತಿರುವ ಭಾರತದಲ್ಲಿ ಕರೊನಾ ರೋಗಿಗಳ ಚಿಕಿತ್ಸೆಯಲ್ಲಿ ಅವಶ್ಯಕವಾದ ಆಕ್ಸಿಜನ್​ನ ಕೊರತೆ ತಲೆದೋರಿದೆ. ಈ ಸಂದರ್ಭದಲ್ಲಿ ಅಮೆರಿಕ, ಸೌದಿ ಅರೇಬಿಯಾ, ಸಿಂಗಪೂರ್ ಮೊದಲಾದ ರಾಷ್ಟ್ರಗಳು ಆಕ್ಸಿಜನ್ ಮತ್ತು ಆಕ್ಸಿಜನ್ ಕಾನ್ಸಂಟ್ರೇಟರ್​ನಂತಹ ಉಪಕರಣಗಳನ್ನು ಸಹಾಯದ ರೂಪದಲ್ಲಿ ಭಾರತಕ್ಕೆ ಕಳುಹಿಸಿವೆ.
ಇದೀಗ ಚೀನಾ ಕೂಡ ಭಾರತ ಆರ್ಡರ್ ನೀಡಿರುವ ಆಕ್ಸಿಜನ್ ಕಾನ್ಸಂಟ್ರೇಟರ್​ಗಳ ಉತ್ಪಾದನೆಯನ್ನು ಪೂರೈಸಲು ತನ್ನ ವೈದ್ಯಕೀಯ ಕ್ಷೇತ್ರದ ಉತ್ಪಾದಕರು ಓವರ್​ಟೈಮ್ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದೆ.
ಚೀನಾದ ಅಂಬಾಸಿಡರ್​ ಸುನ್ ವೀಡಾಂಗ್​ ಅವರು, “ಇತ್ತೀಚಿನ ದಿನಗಳಲ್ಲಿ ಕನಿಷ್ಠ 25,000 ಆಕ್ಸಿಜನ್ ಕಾನ್ಸಂಟ್ರೇಟರ್​​ಗಳ ಆರ್ಡರ್ ಬಂದಿದೆ. ಭಾರತದ ಆರ್ಡರ್​ಗಳ ಮೇಲೆ ಚೀನಾದ ಮೆಡಿಕಲ್​ ಸಪ್ಲೈಯರ್​ಗಳು ಓವರ್​ಟೈಮ್ ಕೆಲಸ ಮಾಡುತ್ತಿದ್ದಾರೆ. ಮೆಡಿಕಲ್​ ಸಪ್ಲೈಗಳಿಗೆ ಕಾರ್ಗೋ ಪ್ಲೇನ್​ಗಳನ್ನು ಕಳುಹಿಸುವ ಯೋಜನೆ ಇದೆ. ಚೀನಾದ ಕಸ್ಟಮ್ಸ್​ ವಿಭಾಗ ಅಗತ್ಯ ಪ್ರಕ್ರಿಯೆಗೆ ಅನುಕೂಲ ಮಾಡಿಕೊಡಲಿದೆ” ಎಂದು ಟ್ವೀಟ್ ಮಾಡಿದ್ದಾರೆ.(ಏಜೆನ್ಸೀಸ್)
ಸೀರಮ್​ ಇನ್ಸ್​ಟಿಟ್ಯೂಟ್ ಸಿಇಒ ಅದಾರ್ ಪೂನಾವಾಲಾಗೆ ವೈ ಕ್ಯಾಟಗರಿ ಭದ್ರತೆ

ಲಾಕ್​ಡೌನ್​ ವೇಳೆ ಓಡಾಡಲು ಪಾಸ್​ ನೀಡುತ್ತಿಲ್ಲ : ಪೊಲೀಸ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − 1 =
Remember me
