ನವದೆಹಲಿ:ಚೀನಾ 50 ಸಶಸ್ತ್ರ ಡ್ರೋನ್​ಗಳನ್ನು ಪಾಕಿಸ್ತಾನಕ್ಕೆ ಮಾರಾಟ ಮಾಡಲಿದ್ದು, ಇದು ಭಾರತಕ್ಕೆ ಸವಾಲಾಗಲಿದೆ ಎಂದು ಚೀನಿ ಮಾಧ್ಯಮಗಳು ವರದಿ ಮಾಡಿವೆ.
ಪಾಕಿಸ್ತಾನಕ್ಕೆ 50 ವಿಂಗ್ ಲೂಂಗ್-2 ಸಶಸ್ತ್ರ ಡ್ರೋನ್​ಗಳನ್ನು ಪೂರೈಸಲು ಪಿಎಲ್​ಎ ನಿರ್ಧರಿಸಿದೆ. ಈ ಡ್ರೋನ್​ಗಳು ತುಂಬಾ ಪರಿಣಾಮಕಾರಿಯಾಗಿದ್ದು ಭಾರತಕ್ಕೆ ದುಃಸ್ವಪ್ನವಾಗಲಿದೆ ಎಂದು ಮಾಧ್ಯಮಗಳು ಅಭಿಪ್ರಾಯಪಟ್ಟಿವೆ. ಅತ್ಯಾಧುನಿಕ ಡ್ರೋನ್​ಗಳಿಗೆ ಸರಿಸಾಟಿಯಾದ ಅಸ್ತ್ರಗಳು ಭಾರತದ ಮಿಲಿಟರಿ ಬಳಿ ಇಲ್ಲದಿರುವುದರಿಂದ ಎತ್ತರದ ಪ್ರದೇಶಗಳಲ್ಲಿ ಸಮಸ್ಯೆ ಎದುರಿಸಬೇಕಾಗಬಹುದು ಎಂದು ಹೇಳುವ ಮೂಲಕ ಭಾರತದ ಮೇಲೆ ಮಾನಸಿಕ ಒತ್ತಡ ಹೇರುವುದು ಚೀನಾದ ತಂತ್ರವಾಗಿದೆ.
ಭಾರತದ ತಿರುಗೇಟು: ಚೀನಾದ ಈ ತಂತ್ರಕ್ಕೆ ತಿರುಗೇಟು ನೀಡಿರುವ ಭಾರತ, ಪಾಕ್​ಗೆ ಪೂರೈಸಲಾಗುತ್ತಿರುವ ಈ ಡ್ರೋನ್​ಗಳು ಯಾವ ಲೆಕ್ಕಕ್ಕೂ ಇಲ್ಲ. ಪ್ರತಿಸ್ಪರ್ಧಿಗಳು ಇಲ್ಲದ ವಾಯು ಪ್ರದೇಶದಲ್ಲಿ ಇವು ಪಾರಮ್ಯ ಹೊಂದಿರಬಹುದು. ಆದರೆ, ಭಾರತದ ವಿಷಯದಲ್ಲಿ ಅಲ್ಲ ಎಂದು ಭಾರತೀಯ ಮಿಲಿಟರಿ ಅಧಿಕಾರಿಗಳು ಹೇಳಿದ್ದಾರೆ.
ನೇಪಾಳಕ್ಕೆ ಚೀನಾ ತಂಡ: ನೇಪಾಳ ಕಮ್ಯುನಿಸ್ಟ್ ಪಕ್ಷ ಇಬ್ಭಾಗವಾಗಿರುವ ಹಿನ್ನೆಲೆಯಲ್ಲಿ ಬಿಕ್ಕಟ್ಟು ಶಮನಗೊಳಿಸುವ ಕೊನೆಯ ಪ್ರಯತ್ನವಾಗಿ ಚೀನಾ ಅಧ್ಯಕ್ಷ ಕ್ಸಿಜಿಂಪಿಂಗ್ ನಾಲ್ವರ ತಂಡವನ್ನು ನೇಪಾಳಕ್ಕೆ ಕಳುಹಿಸಲಿದ್ದಾರೆ.
ರಾಜಕೀಯ ತುಂಬಾ ಕಷ್ಟ… ಎಂದ ಅಣ್ಣಾಮಲೈ!

ಪತ್ನಿ ಊರಿಗೆ ಹೋದಳೆಂದು ಸ್ನೇಹಿತೆಯನ್ನ ಮನೆಗೆ ಕರೆಸಿಕೊಂಡ ಟೆಕ್ಕಿಗೆ ಕಾದಿತ್ತು ಶಾಕ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 4 =
Remember me
