ನವದೆಹಲಿ:ಲಡಾಖ್​ನ ಪೂರ್ವಭಾಗದ ಗಲ್ವಾನ್​ ಕಣಿವೆ ಬಳಿಯಿಂದ ಹಿಂತೆಗೆಯುತ್ತಿರುವ ಚೀನಾದ ಪೀಪಲ್ಸ್​ ಲಿಬರೇಷನ್​ ಆರ್ಮಿ ಯೋಧರು ವಾಸ್ತವ ಗಡಿರೇಖೆಯ ತಮ್ಮ ಭಾಗದಲ್ಲಿ ಅರುಣಾಚಲ ಪ್ರದೇಶ ಸುತ್ತಮುತ್ತ ಜಮಾವಣೆಗೊಳ್ಳುತ್ತಿದ್ದಾರೆ.
ಡೆಪ್​ಸ್ಯಾಂಗ್​ ಸಮತಟ್ಟಾದ ಪ್ರದೇಶದಲ್ಲಿ ನಿಯೋಜನೆಗೊಂಡಿದ್ದ ಪಿಎಲ್​ಎ ಯೋಧರು ಅತ್ಯಂತ ಆಕ್ರಮಣಕಾರಿ ಶೈಲಿಯಲ್ಲಿ ನಿಯೋಜಿಸಲ್ಪಟ್ಟಿದ್ದಾರೆ ಎಂದು ಹೇಳಲಾಗಿದೆ. ಆದರೆ ಲಡಾಖ್​ ವಲಯದಲ್ಲಿ ಚೀನಿಯ ವೈಮಾನಿಕ ಚಟುವಟಿಕೆಗಳು ಬಹುತೇಕ ಸ್ತಬ್ಧವಾಗಿದೆ ಎನ್ನಲಾಗಿದೆ.
ಇದನ್ನೂ ಓದಿ:ಲೈಂಗಿಕ ಕಿರುಕುಳ : ಅಧಿಕಾರಿ ಹಾಗೂ ಮಹಿಳಾ ಸಹೋದ್ಯೋಗಿಯ ಆರೋಪ – ಪ್ರತ್ಯಾರೋಪಗಳೇನು?
ಇದೇ ವೇಳೆ ಭಾರತದ ಶಕ್ತಿಶಾಲಿಯಾದ ಚೀನಾ ಅಧ್ಯಯನ ಗುಂಪು (ಸಿಎಸ್​ಜಿ) ಗುರುವಾರ ಸಭೆ ಸೇರಿ ಮಾತುಕತೆ ನಡೆಸಿತು. ಚೀನಾ ಸಂಬಂಧಿತ ಆಗುಹೋಗುಗಳ ಬಗ್ಗೆ ಸರ್ಕಾರಕ್ಕೆ ಸಲಹೆ ನೀಡುವ ಈ ಗುಂಪು, ಗಲ್ವಾನ್​, ಹಾಟ್​ಸ್ಪ್ರಿಂಗ್ಸ್​ ಮತ್ತು ಪ್ಯಾಂಗಾಂಗ್​ ತ್ಸೊ ಸರೋವರದ ಸುತ್ತಮುತ್ತಲು ಪಿಎಲ್​ಎ ಯೋಧರ ಹಿಂತೆಗೆತ ಪರಿಸ್ಥಿತಿಯನ್ನು ಅವಲೋಕಿಸಿತು.
ಬೇಹುಗಾರಿಕಾ ಪಡೆಗಳು ಮತ್ತು ಭಾರತೀಯ ಸೇನಾಪಡೆಯ ಎಲ್ಲ ವಿಭಾಗದ ಅಧಿಕಾರಿಗಳ ಪ್ರಾತಿನಿಧ್ಯ ಹೊಂದಿರುವ ಈ ಗುಂಪು, ಎಲ್​ಎಸಿಯುದ್ದಕ್ಕೂ ನಿಯೋಜನೆಗೊಂಡಿರುವ ಚೀನಿ ಯೋಧರು ಹಿಂತೆಗೆಯುವಂತೆ ಮಾಡುವುದು ಹೇಗೆ ಎಂಬ ಪರಾಮರ್ಶೆ ನಡೆಸಿತು ಎನ್ನಲಾಗಿದೆ.
ಮಲೆ ಮಹದೇಶ್ವರ ಸ್ವಾಮಿ ದೇವಾಲಯ ಬಂದ್​ಗೆ ಆಗ್ರಹಿಸಿ ಪ್ರತಿಭಟನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + three =
Remember me
