ನವದೆಹಲಿ: ಭಾರತ ಮತ್ತು ಚೀನಾದ ಸೈನಿಕರ ನಡುವೆ ಘರ್ಷಣೆ ನಡೆದಿದ್ದ ಡೋಕ್ಲಾಮ್ ಸಮೀಪದ ಭೂತಾನ್ ಪ್ರದೇಶದೊಳಗೆ 2 ಕಿ.ಮೀ ದೂರದಲ್ಲಿ ಪಾಂಗ್ಡಾ ಎಂಬ ಹೊಸ ಹಳ್ಳಿಯೊಂದನ್ನು ಚೀನಾ ಸೃಷ್ಟಿಸಿದೆ ಎಂದು ತಿಳಿದುಬಂದಿದೆ. ಚೀನಾದ ಸಿಜಿಟಿಎನ್ ನ್ಯೂಸ್​ನ ಹಿರಿಯ ಪರ್ತಕರ್ತ ಶೆನ್ ಶಿವೇ ಎಂಬುವವರು ಈ ಕುರಿತು ಸರಣಿ ಟ್ವೀಟ್​ಗಳ ಮೂಲಕ ಮಾಹಿತಿ ನೀಡಿದ್ದಾರೆ.
ನಕ್ಷೆಗಳನ್ನೂ ಟ್ವೀಟ್ ಮಾಡಿರುವ ಅವರು ಹೊಸ ಹಳ್ಳಿಯನ್ನು ಸ್ಥಾಪಿಸಲಾದ ನಿಖರ ಸ್ಥಳ ತೋರಿಸಿದ್ದಾರೆ. ಬಳಿಕ ಈ ಟ್ವೀಟ್​ಗಳನ್ನು ಅಳಿಸಿ ಹಾಕಲಾಗಿದೆ. ಹಳ್ಳಿಯ ಪಶ್ಚಿಮಕ್ಕೆ ಸಿಕ್ಕಿಂ, ಉತ್ತರಕ್ಕೆ ಚೀನಾ ಇದೆ. ಡೋಕ್ಲಾಮ್ಲ್ಲಿ ಚೀನಿ ಸೈನಿಕರೊಂದಿಗೆ 2017ರಲ್ಲಿ ಮುಖಾಮುಖಿ ನಡೆದ ಸ್ಥಳದಿಂದ 9 ಕಿ.ಮೀ ದೂರದಲ್ಲಿ ಹೊಸ ಹಳ್ಳಿ ಇದೆ. ಭೂತಾನ್​ನ ಭಾಗವನ್ನು ಹಂತಹಂತವಾಗಿ ಆಕ್ರಮಿಸಿಕೊಳ್ಳುತ್ತಿರುವ ಚೀನಾ ಅಲ್ಲಿ ತನ್ನ ಜನಸಂಖ್ಯೆಯನ್ನೂ ಹೆಚ್ಚಿಸುತ್ತಿದೆ.
ಇದನ್ನೂ ಓದಿ:ಕರೊನಾಕ್ಕೆ ಹೆದರಿ ಆ್ಯಸಿಡ್​ ಕುಡಿದು ಆತ್ಮಹತ್ಯೆ ಮಾಡಿಕೊಂಡ ಯುವತಿ
ಅಂತಾರಾಷ್ಟ್ರೀಯ ಗಡಿಯಿಂದ ಸುಮಾರು 2.5 ಕಿ.ಮೀ ಒಳಹೋಗಿ ಗ್ರಾಮವನ್ನು ಸ್ಥಾಪಿಸಿದೆ. ಇದು ಭಾರತಕ್ಕೆ ಆತಂಕಕಾರಿ ವಿಷಯವಾಗಿದೆ ಎಂದು ಪತ್ರಕರ್ತ ಶೇನ್ ಶಿವೇ ಅಭಿಪ್ರಾಯಪಟ್ಟಿದ್ದಾರೆ. ತಮ್ಮ ಭೂಪ್ರದೇಶದಲ್ಲಿ ಚೀನಾಗೆ ಹಳ್ಳಿ ನಿರ್ವಿುಸಲು ಅವಕಾಶ ನೀಡಿರುವ ಬಗ್ಗೆ ಭೂತಾನ್ ಈವರೆಗೂ ಯಾವುದೇ ಹೇಳಿಕೆಯನ್ನು ನೀಡಿಲ್ಲ.
ಇಂಡೋ-ಮ್ಯಾನ್ಮಾರ್ ಗಡಿ ದಾಟಿತ್ತು 66.4 ಕಿಲೋ ತೂಕದ 400 ಚಿನ್ನದ ಗಟ್ಟಿಗಳು !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 11 =
Remember me
