ನವದೆಹಲಿ/ಬೀಜಿಂಗ್​ :ಆರು ಭಾರತೀಯ ರಫ್ತು ಕಂಪನಿಗಳಿಂದ ಫ್ರೋಜನ್ ಸೀಫುಡ್​ ಉತ್ಪನ್ನಗಳ ಆಮದನ್ನು ಚೀನಾ ಒಂದು ವಾರದ ಮಟ್ಟಿಗೆ ಸ್ಥಗಿತಗೊಳಿಸಿದೆ. ಈ ಉತ್ಪನ್ನಗಳ ಹೊರಗಣ ಪ್ಯಾಕೇಜಿಂಗ್​ನಲ್ಲಿ ಕರೊನಾ ವೈರಸ್​​ನ ಕುರುಹುಗಳು ಪತ್ತೆಯಾಗಿರುವುದಾಗಿ ಚೀನೀ ಕಸ್ಟಮ್ಸ್ ಇಲಾಖೆ ಕಾರಣ ನೀಡಿದೆ.
ಕಳೆದ ವರ್ಷದ ಆರಂಭದಿಂದಲೂ ಚೀನಾ, ಪ್ರಪಂಚದ ವಿವಿಧೆಡೆಯಿಂದ ಆಮದು ಮಾಡಿದ ಫ್ರೋಜನ್​ ಆಹಾರ ಉತ್ಪನ್ನಗಳನ್ನು ಪರೀಕ್ಷಿಸುವ ಪ್ರತೀತಿ ಹೊಂದಿದೆ. ಉತ್ಪನ್ನಗಳ ಪ್ಯಾಕೇಜಿಂಗ್​ನಲ್ಲಿ ಕರೊನಾ ವೈರಸ್​​ನ ಕುರುಹುಗಳು ಕಂಡರೆ ಸಂಬಂಧಿತ ಕಂಪನಿಗಳಿಂದ ಆಮದನ್ನು ಸ್ಥಗಿತಗೊಳಿಸುತ್ತಾ ಬಂದಿದೆ ಎನ್ನಲಾಗಿದೆ.
ಇದನ್ನೂ ಓದಿ:ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಚೀನಾ ಪ್ರಜೆ ಪತ್ತೆ!
ಕರೊನಾ ವೈರಸ್​ 2019 ರ ಡಿಸೆಂಬರ್​​ನಲ್ಲಿ ಚೀನಾದ ವುಹಾನ್​ನಲ್ಲಿ ಹುಟ್ಟಿದ್ದರೂ, ಕಠಿಣ ನಿರ್ಬಂಧಗಳ ಮೂಲಕ ಚೀನಾ ಕರೊನಾ ವೈರಸ್​ ಹರಡುವಿಕೆಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ. ಆದರೆ ಹೊರದೇಶಗಳಿಂದ ಬರುವ ಜನರಿಂದಾಗಿ ಕೆಲವು ಸೋಂಕು ಪ್ರಕರಣಗಳು ಕಂಡುಬರುತ್ತಿವೆ. ದೇಶದಲ್ಲಿ ಜೂನ್​ 9 ರಂದು ಸ್ಥಳೀಯವಾಗಿ ಹರಡಿದ 6 ಕರೊನಾ ಪ್ರಕರಣಗಳು ಮತ್ತು 15 ವಿದೇಶೀಯ ಮೂಲದ ಪ್ರಕರಣಗಳು ವರದಿಯಾಗಿವೆ ಎಂದು ಚೀನಾದ ನ್ಯಾಷನಲ್ ಹೆಲ್ತ್​ ಕಮಿಷನ್​​ ಹೇಳಿದೆ.(ಏಜೆನ್ಸೀಸ್)
ಮಮತಾ ಬ್ಯಾನರ್ಜಿ ಮದುವೆ, ಸೋಷಿಯಲಿಸಂ ಜೊತೆ! ಜೂನ್ 13 ರಂದು ವಿವಾಹೋತ್ಸವ!

ದೊಡ್ಡವರ ಜಗಳದಲ್ಲಿ ಕೂಸು ಬಲಿಯಾಯ್ತು… ಸುಳ್ಳು ಕೇಸ್ ಹಾಕಲು ಮೊಮ್ಮಗಳನ್ನು ಕೊಂದ ಕಿರಾತಕಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + ten =
Remember me
