ನವದೆಹಲಿ:ಮ್ಯಾನ್ಮಾರ್​ನಲ್ಲಿ ಸಕ್ರಿಯವಾಗಿರುವ ಉಗ್ರಗಾಮಿ ಸಂಘಟನೆಗಳಿಗೆ ಚೀನಾದ ಶಸ್ತ್ರಾಸ್ತ್ರಗಳು ಸರಬರಾಜು ಆಗುತ್ತಿರುವ ಕುರಿತು ಭಾರತದ ಭದ್ರತಾ ಹಾಗೂ ಬೇಹುಗಾರಿಕೆ ಸಂಸ್ಥೆಗಳು ಆತಂಕ ವ್ಯಕ್ತಪಡಿಸಿವೆ. ಉಗ್ರರ ಕೈಸೇರಿದ ಆಯುಧಗಳು ಭಾರತದ ವಿರುದ್ಧ ಬಳಕೆಯಾಗಬಹುದು ಎನ್ನುವುದು ಆತಂಕಕ್ಕೆ ಮುಖ್ಯ ಕಾರಣ. ಮ್ಯಾನ್ಮಾರ್-ಥಾಯ್ಲೆಂಡ್ ಗಡಿಯಲ್ಲಿ ಇತ್ತೀಚೆಗೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಪತ್ತೆಯಾಗಿದ್ದವು. ಅವುಗಳು ಅರಾಕನ್ ಸೇನೆಗೆ (ಎಎ) ಕಳಿಸಿದ ಶಸ್ತ್ರಗಳಾಗಿದ್ದವು. ಚೀನಾ ನಿರ್ವಿುತ ಈ ಶಸ್ತ್ರಾಸ್ತ್ರಗಳನ್ನು ಭಾರತದ ಹಾನಿಗೆ ಬಳಸಲಾಗುವ ಸಂಭವವಿತ್ತೆಂದು ಹೇಳಲಾಗಿದೆ. ಮ್ಯಾನ್ಮಾರ್ ಮತ್ತು ಥಾಯ್ಲೆಂಡ್ ಪೊಲೀಸರು ಈ ಪ್ರಕರಣದಲ್ಲಿ ಆರು ಜನರನ್ನು ಬಂಧಿಸಿದ್ದಾರೆ. ಕಾಲಾದಾನ್ ಯೋಜನೆಗೆ ಭದ್ರತೆ ನೀಡಲು ಭಾರತ ಮತ್ತು ಮ್ಯಾನ್ಮಾರ್ ಸೇನೆಗಳು ಕಳೆದ ವರ್ಷ ಗಡಿ ಭಾಗಗಳಲ್ಲಿ ಅರಾಕಾನ್ ಸೇನೆ ಮತ್ತು ಇತರ ಬಂಡುಕೋರ ಸಂಘಟನೆಗಳ ವಿರುದ್ಧ ಸಂಯೋಜಿತ ಕಾರ್ಯಾಚರಣೆ ನಡೆಸಿದ್ದವು.
ಕರೊನಾ ಮರೆಯಲ್ಲಿ ಚೀನಿ ಅತಿಕ್ರಮಣ
ಕೋವಿಡ್-19ನ ಪರಿಸ್ಥಿತಿಯ ದುರ್ಲಾಭ ಪಡೆದು ಭಾರತದ ಪ್ರದೇಶಗಳನ್ನು ಅತಿಕ್ರಮಣ ಮಾಡಿಕೊಳ್ಳಲು ಚೀನಾ ಪ್ರಯತ್ನಿಸಿತ್ತು ಎನ್ನುವ ನಿರ್ಣಯವನ್ನು ಅಮೆರಿಕ ಸಂಸತ್​ನ ಕೆಳಮನೆ ಅವಿರೋಧವಾಗಿ ಅನುಮೋದಿಸಿದೆ.ರಾಷ್ಟ್ರೀಯ ರಕ್ಷಣಾ ಅಧಿಕಾರ ಕಾನೂನಿಗೆ (ಎನ್​ಡಿಎಎ) ತಂದಿರುವ ತಿದ್ದುಪಡಿ ಭಾರತ ಸ್ನೇಹಿಯಾಗಿದ್ದು ಚೀನಾವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಲಡಾಖ್​ನ ಗಲ್ವಾನ್ ಕಣಿವೆಯಲ್ಲಿ ಚೀನಾ ಮಾಡಿದ ಆಕ್ರಮಣವನ್ನು ಈ ತಿದ್ದುಪಡಿ ಕಾನೂನು ಕಟುವಾಗಿ ಖಂಡಿಸಿದೆ. ದಕ್ಷಿಣ ಚೀನಾ ಸಮುದ್ರದ ಸುತ್ತಮುತ್ತಲ ಪ್ರದೇಶಗಳಲ್ಲಿ ಪ್ರಾದೇಶಿಕ ಮೇಲುಗೈ ಸಾಧಿಸುವ ಚೀನಾದ ಪ್ರಯತ್ನಗಳಿಗೆ ಕೂಡ ಅದು ಛೀಮಾರಿ ಹಾಕಿದೆ. ಸ್ಟೀವ್ ಚಾಬೊಟ್ ಮತ್ತು ಭಾರತೀಯ-ಅಮೆರಿಕನ್ ಸಂಸದ ಅಮಿ ಬೇರಾ ಈ ತಿದ್ದುಪಡಿ ಮಂಡಿಸಿದ್ದರು.
ಚೀನಾ ವಿರುದ್ಧ ಕೇಸ್​ಗೆ ಕಾನೂನು
ಮಹಾಮಾರಿ ಕರೊನಾ ಸೋಂಕನ್ನು ವಿಶ್ವಕ್ಕೆ ಪಸರಿಸಿದ ಚೀನಾದ ವಿರುದ್ಧ ಫೆಡರಲ್ ಕೋರ್ಟ್​ಗಳಲ್ಲಿ ಮೊಕದ್ದಮೆ ಹೂಡಲು ಅಮರಿಕ ಪ್ರಜೆಗಳಿಗೆ ಅವಕಾಶ ನೀಡುವ ಮಸೂದೆಯೊಂದು ಕಾಂಗ್ರೆಸ್​ನ ಮೇಲ್ಮನೆ ಸೆನೆಟ್​ನಲ್ಲಿ ಮಂಡನೆಯಾಗಿದೆ. ‘ಕೋವಿಡ್ ಸಂತ್ರಸ್ತರಿಗೆ ನಾಗರಿಕ ನ್ಯಾಯ ಕಾನೂನು’ ಹೆಸರಿನ ಈ ಮಸೂದೆ, ಸೋಂಕಿಗೆ ಚೀನಾವೇ ಕಾರಣ ಅಥವಾ ಅದರ ಪಾತ್ರ ಗಣನೀಯವಾಗಿದೆ ಎಂದು ಆಪಾದಿಸಿ ಸಲ್ಲಿಸುವ ಅರ್ಜಿಗಳ ವಿಚಾರಣೆ ನಡೆಸಲು ದೇಶದ ಫೆಡರಲ್ ಕೋರ್ಟ್ ಗಳಿಗೆ ಅನುಮತಿ ಕಲ್ಪಿಸುತ್ತದೆ.
ನಿಖರ ನಿಗಾಕ್ಕೆ ಡಿಆರ್​ಡಿಒ ಭಾರತ್ ಡ್ರೋನ್
ಪೂರ್ವ ಲಡಾಖ್​ನ ಗುಡ್ಡಗಾಡು ಪ್ರದೇಶದ ಗಡಿಯಲ್ಲಿ ನಿಖರವಾಗಿ ಕಣ್ಗಾವಲು ನಡೆಸಲು ಅನುಕೂಲವಾಗುವ ಡ್ರೋನ್​ಗಳು ಭಾರತದ ಸೇನೆಗೆ ಸೇರ್ಪಡೆಯಾಗಿವೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃಧಿ ಸಂಸ್ಥೆ (ಡಿಆರ್​ಡಿಒ) ಅಭಿವೃಧಿಪಡಿಸಿರುವ ಈ ಡ್ರೋನ್​ಗೆ ‘ಭಾರತ್’ ಎಂದು ನಾಮಕರಣ ಮಾಡಲಾಗಿದೆ. ‘ಭಾರತ್’ ಮಹತ್ವ: ‘ಭಾರತ್’ ಡ್ರೋನ್ ಜಗತ್ತಿನ ಅತ್ಯಂತ ಸಮರ್ಥ ಹಾಗೂ ಅತ್ಯಂತ ಹಗುರ ಕಣ್ಗಾವಲಿನ ವೈಮಾನಿಕ ಸಾಧನ. ಅತಿ ಶೀತ ವಾತಾವರಣದಲ್ಲಿ ಕಾರ್ಯಾಚರಿಸುವ ಸಾಮರ್ಥ್ಯ ಹೊಂದಿದೆ. ಮಿತ್ರ್ರ ಹಾಗೂ ಶತ್ರುಗಳ ನಡುವೆ ವ್ಯತ್ಯಾಸ ಗುರುತಿಸಿ ಅಗತ್ಯಕ್ರಮಕ್ಕೆ ಸಲಹೆ ನೀಡುವ ಕೃತಕ ಬುದ್ಧಿಮತ್ತೆಯೂ ಇದರಲಿದೆ.
ಆಕ್ಸ್​ಫರ್ಡ್​ ಕರೊನಾ ಲಸಿಕೆ ಯಶಸ್ವಿಯಾದರೆ ಭಾರತಕ್ಕೇನು ಲಾಭ? ಎಲ್ಲಿ ಉತ್ಪಾದನೆಯಾಗುತ್ತೆ ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 4 =
Remember me
