ನವದೆಹಲಿ:ಚೀನಾದಲ್ಲಿ ಮೊದಲು ಪತ್ತೆಯಾದ ಕೊರೊನಾ ವೈರಸ್​ ಭಾರತಕ್ಕೂ ಕಾಲಿಟ್ಟಿದೆ. ಚೀನಾದಲ್ಲಿ ವೈರಸ್​ ಸೋಂಕಿತರು ಎಂದು ಶಂಕಿಸಲಾದಂತಹ ವ್ಯಕ್ತಿಗಳ ತಪಾಸಣೆ ನಡೆಸಿ ಅವರಲ್ಲಿ ವೈರಸ್​ ಇದಿಯೋ ಇಲ್ಲವೋ ಎನ್ನುವುದನ್ನು ಕೇವಲ 15 ನಿಮಿಷಗಳಲ್ಲಿ ಹೇಳಲಾಗುತ್ತದೆ. ಆದರೆ ಭಾರತದಲ್ಲಿ ಸೋಂಕನ್ನು ಧೃಡ ಪಡಿಸುವುದಕ್ಕೆ 24 ಗಂಟೆಗಳ ಕಾಲಾವಕಾಶ ತೆಗೆದುಕೊಳ್ಳಲಾಗುತ್ತದೆ.
ಕೊರೊನಾ ದಾಳಿ ಅತಿ ಹೆಚ್ಚು ಪ್ರಮಾಣದಲ್ಲಿ ಆಗಿರುವ ಚೀನಾದಲ್ಲಿ ಶಂಕಿತರ ರಕ್ತ ಪರೀಕ್ಷೆಗೆ ರ‍್ಯಾಪಿಡ್​ ಪರೀಕ್ಷೆಯನ್ನು ಅನುಸರಿಸುತ್ತದೆ. ಈ ಪರೀಕ್ಷೆಯಲ್ಲಿ ಬರುವ ರಿಪೋರ್ಟ್​ ಶೇ.80 ಸತ್ಯವಾಗಿರುತ್ತದೆ ಎನ್ನಲಾಗಿದೆ. ಆದರೆ ಭಾರತದಲ್ಲಿ ಶಂಕಿತರ ರಕ್ತ ಪರೀಕ್ಷೆಗೆ ರಿಸರ್ವ್​ ಟ್ರಾನ್ಸ್ಕ್ರಿಪ್ಷನ್​ ಪಾಲಿಮರೇಸ್​ ಚೈಐನ್​ ರಿಯಾಕ್ಷನ್​ (RT-PCR) ಎನ್ನುವ ವಿಧವನ್ನು ಅನುಸರಿಸಲಾಗುತ್ತದೆ. ಪರೀಕ್ಷೆಯಲ್ಲಿ ಪಾಲಿಮರೇಸ್​ ಚೈನ್​ ರಿಯಾಕ್ಷನ್​ ಎಂಬ ಜೀನ್​ ಆಧಾರಿತ ಮೌಲ್ಯಮಾಪನ ಮಾಡಲಾಗುತ್ತದೆ. ಅದರ ಮುಂದುವರೆದ ಭಾಗವಾಗಿ ರಿವರ್ಸ್​ ಟ್ರಾನ್ಸ್ಕ್ರಿಪ್ಷನ್​ ಚೈನ್​ ರಿಯಾಕ್ಷನ್​ ಮಾಡುವುದರಿಂದಾಗಿ ಕೊರೊನಾ ಇದೆಯೋ ಇಲ್ಲವೋ ಎನ್ನುವುದು ನಿಖರವಾಗಿ ತಿಳಿದುಬರುತ್ತದೆ.
ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶನದ ಅನುಸಾರ ಕೊರೊನಾ ವೈರಸ್​ ಪತ್ತೆ ಹಚ್ಚುವುದಕ್ಕೆ RT-PCR ಅಥವಾ ರಕ್ತ ಮಾದರಿಯ ಜೀನ್​ಗಳ ಮೌಲ್ಯಮಾಪನವೇ ಸೂಕ್ತ ಕ್ರಮವಾಗಿದೆ. ಹಾಗಾಗಿ ಅನೇಕ ದೇಶಗಳು ರ‍್ಯಾಪಿಡ್ಬ ವಿಧವನ್ನು ಅನುಸರಿಸದೆ RT-PCR ಮೂಲಕ ಕೊರೊನಾ ಪತ್ತೆ ಮಾಡುತ್ತಿವೆ.
ಭಾರತದ ಪುಣೆಯಲ್ಲಿರುವ ನ್ಯಾಷನಲ್​ ಇನ್ಸ್ಟಿಟ್ಯೂಟ್​ ಆಫ್​ ವೈರಾಲಜಿಯ ಅಧಿಕಾರಿಗಳು ಹಗಲು ರಾತ್ರಿಯೆನ್ನದೆ ಈ ಪರೀಕ್ಷೆಯಲ್ಲಿ ನಿರತರಾಗಿದ್ದಾರೆ.
ಚೀನಾದಲ್ಲಿ ಅನುಸರಿಸಲಾಗುತ್ತಿರುವ ರ‍್ಯಾಪಿಡ್​ ಪರೀಕ್ಷೆಯನ್ನು ಇಟಲಿ, ಜಪಾನ್​ ದೇಶಗಳಲ್ಲಿಯೂ ಸಹ ಅನುಸರಿಸಲಾಗುತ್ತಿದೆ.(ಏಜೆನ್ಸೀಸ್​)
ಕೊರೊನಾದಿಂದ ಚೇತರಿಸಿಕೊಂಡ ಚೀನಾ: 16 ತಾತ್ಕಾಲಿಕ ಆಸ್ಪತ್ರೆಗಳಲ್ಲಿ ಸೇವೆ ಸ್ಥಗಿತ

ಇಟಲಿ ದೇಶ ಸ್ತಬ್ಧವಾಗಲು ಕಾರಣವೇನು ಗೊತ್ತಾ..? ಬಿಕೋ ಎನ್ನುತ್ತಿದೆ ರೋಮ್ ನಗರ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − 5 =
Remember me
