ನವದೆಹಲಿ: ಅಮೆರಿಕ, ಭಾರತದ ಜತೆಗೆ ಉದ್ವಿಗ್ನ ಸಂಬಂಧ ಹೊಂದಿದ್ದಾಗ್ಯೂ “ಕ್ಯಾರಿಯರ್ ಕಿಲ್ಲರ್​” ಎಂದು ಗುರುತಿಸಲ್ಪಟ್ಟಿರುವ ಖಂಡಾಂತರ ಕ್ಷಿಪಣಿಯ ಪರೀಕ್ಷೆಯನ್ನು ಚೀನಾ ನಡೆಸಿದೆ. ಪೀಪಲ್ಸ್​ ಲಿಬರೇಷನ್​ ಆರ್ಮಿ ರಾಕೆಟ್​ ಫೋರ್ಸ್​ (ಪಿಎಲ್​ಎಆರ್​ಎಫ್​​) ಇದನ್ನು ಖಚಿತಪಡಿಸಿದ್ದು, ಎರಡು ಖಂಡಾಂತರ ಕ್ಷಿಪಣಿಗಳ ಪರೀಕ್ಷೆ ನಡೆಸಿರುವುದಾಗಿ ತಿಳಿಸಿದೆ. ಒಂದು ಶಾರ್ಟ್​ ರೇಂಜ್ ಮತ್ತೊಂದು ಇಂಟರ್​ಮೀಡಿಯೇಟ್ ರೇಂಜ್​ನ ಕ್ಷಿಪಣಿಗಳವು ಎಂದು ಅದು ಸ್ಪಷ್ಟಪಡಿಸಿದೆ.
ಪರೀಕ್ಷೆ ನಡೆಸಿದ ಬ್ರಿಗೇಡ್ ಕಮಾಂಡರ್​ ಲಿಯೂ ಯಾಂಗ್​ ಈ ಬಗ್ಗೆ 81.cn ಎಂಬ ಸುದ್ದಿ ತಾಣಕ್ಕೆ ನೀಡಿರುವ ಹೇಳಿಕೆಯಲ್ಲಿ ಈ ವಿಷಯ ಖಾತ್ರಿಪಡಿಸಿದ್ದಾರೆ. 2,500 ಮೈಲ್ ರೇಂಜ್​ನ ಏರ್​ಕ್ರಾಫ್ಟ್ ಕ್ಯಾರಿಯರ್​ ಕಿಲ್ಲರ್ ಇದಾಗಿದ್ದು, ಅಮೆರಿಕದ ನಿಮಿಟ್ಝ್​ ಮತ್ತು ಅಮೆರಿಕದ ಇತರೆ ನೌಕೆಗಳನ್ನು ಟಾರ್ಗೆಟ್​ ಮಾಡಲು ಇದನ್ನು ಬಳಸುವ ಚಿಂತನೆಯಲ್ಲಿದೆ ಚೀನಾ ಎಂದು ಆ ಸುದ್ದಿ ತಾಣ ವರದಿ ಮಾಡಿದೆ.
ಇದನ್ನೂ ಓದಿ:ರಾಮಜನ್ಮಭೂಮಿಯಲ್ಲಿ ರಾಮಮಂದಿರ ಶಿಲಾನ್ಯಾಸಕ್ಕೆ ‘ರಾವಣ ಜನ್ಮಭೂಮಿ’ಯ ಮಣ್ಣು!
ಅಮೆರಿಕ ವಾಯುಪಡೆ ಗ್ಲೋಬಲ್​ ಸ್ಟ್ರೈಕ್​ ಕಮಾಂಡ್​ ಇತ್ತೀಚೆಗಷ್ಟೇ ಎಲ್​ಜಿಎಂ-30 ಮಿನಿಟ್​ಮ್ಯಾನ್ lll ICB ಕ್ಷಿಪಣಿಯನ್ನು ಪರೀಕ್ಷೆ ಮಾಡಿತ್ತು. ಇದು 4,200 ಮೈಲಿ ರೇಂಜ್​ದಾಗಿದ್ದು, ಆಗಸ್ಟ್​ 4 ರಂದು ಮಧ್ಯರಾತ್ರಿ ಪರೀಕ್ಷೆ ನಡೆದಿತ್ತು. ಅಮೆರಿಕ, ಚೀನಾಗಳ ಕ್ಷಿಪಣಿ ಪರೀಕ್ಷೆ ಯುದ್ಧೋನ್ಮಾದವನ್ನು ಇನ್ನಷ್ಟು ಉದ್ದೀಪಿಸಿದ್ದು, ಬಿಗುವಿನ ವಾತಾವರಣ ನಿರ್ಮಾಣ ಮಾಡಿದೆ. (ಏಜೆನ್ಸೀಸ್)
ರಾಂಬುಟನ್ ಹಣ್ಣು ತಿಂದು 15 ನಿಮಿಷ ಉಸಿರಾಡುವುದನ್ನೇ ಮರೆತ ಮಗು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + two =
Remember me
